Republic day Recipes: ಈ ದಿನ ವಿಶೇಷವಾದ ರೆಸಿಪಿಗಳನ್ನು ತಯಾರಿಸಲು ಇನ್ನೂ ಸುಲಭ! ಇಂದೇ ಟ್ರೈ ಮಾಡಿ
ಗಣರಾಜ್ಯೋತ್ಸವದ ವಿಶೇಷ ಸಂದರ್ಭಕ್ಕಾಗಿ ನಾವು ಏನನ್ನಾದರೂ ವಿಶೇಷವಾಗಿ ಮಾಡಬಹುದು. ಇದಕ್ಕಾಗಿ ನೀವು ಮಧ್ಯಾಹ್ನದ ಊಟ, ರಾತ್ರಿಯ ಊಟ ಅಥವಾ ತಿಂಡಿಗಾಗಿ ಕೆಲವು ವಿಶೇಷ ತ್ರಿವರ್ಣ ಭಕ್ಷ್ಯಗಳನ್ನು ಮಾಡಬಹುದು.
ನಮ್ಮ ದೇಶವು ಸ್ವತಂತ್ರ ಗಣರಾಜ್ಯ ರಾಷ್ಟ್ರವಾದ ಐತಿಹಾಸಿಕ ಕ್ಷಣವನ್ನು ನೆನಪಿಟ್ಟುಕೊಳ್ಳಲು ಗಣರಾಜ್ಯ ದಿನವನ್ನು ಆಚರಿಸಲಾಗುತ್ತದೆ. ನಮಗೆಲ್ಲರಿಗೂ ತಿಳಿದಿರುವಂತೆ ಭಾರತವು 15 ಆಗಸ್ಟ್ 1947 ರಂದು ಸ್ವಾತಂತ್ರ್ಯವನ್ನು ಪಡೆದುಕೊಂಡಿತು.
2/ 8
74ನೇ ವರ್ಷದ ಗಣರಾಜ್ಯೋತ್ಸವವನ್ನು ಇಂದು ದೇಶಾದ್ಯಂತ ಆಚರಿಸಲಾಗತ್ತಿದೆ. ಅದೇ ರೀತಿಯಾಗಿ ಶಾಲಾ, ಕಾಲೇಜುಗಳಲ್ಲಿ ಮತ್ತು ಸರ್ಕಾರಿ ಕಛೇರಿಗಳಲ್ಲಿ ಧ್ವಜಾರೋಹಣವನ್ನೂ ಕೂಡ ಮಾಡಲಾಗುತ್ತದೆ.
3/ 8
ಜೊತೆಗೆ ಸರ್ಕಾರಿ ರಜೆ ಇರುವ ಕಾರಣದಿಂದಾಗಿ ಹಲವಾರು ಜನರು ಇಂದು ಮನೆಯಲ್ಲಿಯೇ ಇರುತ್ತಾರೆ. ಹಾಗಾದ್ರೆ, ಮನೆಯಲ್ಲಿಯೇ ಏನಾದ್ರು ಹೊಸ ಹೊಸ ರೀತಿಯ ಅಡಿಗೆಗಳನ್ನು ತಯಾರಿಸಿ.
4/ 8
ತ್ರಿವರ್ಣ ಸಲಾಡ್ - ಇದು ರುಚಿ ಮತ್ತು ಪೌಷ್ಟಿಕಾಂಶದಲ್ಲಿ ಸಮೃದ್ಧವಾಗಿರುವ ಆಹಾರವಾಗಿದೆ. ಸಾಮಾನ್ಯವಾಗಿ ನಮ್ಮ ಊಟದ ಜೊತೆ ಸಲಾಡ್ ಇರುತ್ತದೆ. ಗಣರಾಜ್ಯ ದಿನದಂದು ನಿಮ್ಮ ಸಲಾಡ್ಗೆ ತ್ರಿವರ್ಣ ಆಕಾರ ಮತ್ತು ಬಣ್ಣವನ್ನು ನೀಡಬಹುದು. ಇದನ್ನು ತಯಾರಿಸುವುದು ಕೂಡ ತುಂಬಾ ಸುಲಭ.
5/ 8
ತಿರಂಗಾ ಪುಲಾವ್ - ತ್ರಿರಂಗ ಪುಲಾವ್ ಅನ್ನು ಊಟಕ್ಕೆ ಅಥವಾ ರಾತ್ರಿಯ ಊಟಕ್ಕೆ ಯಾವಾಗ ಬೇಕಾದರೂ ತಯಾರಿಸಬಹುದು ಮತ್ತು ತಿನ್ನಬಹುದು. ಸಾಮಾನ್ಯ ಪುಲಾವ್ ನಂತೆ ತ್ರಿರಂಗ ಪುಲಾವ್ ಕೂಡ ಮಾಡುವುದು ತುಂಬಾ ಸುಲಭ. ತಿರಂಗಾ ಪುಲಾವ್ ತಯಾರಿಸಲು ಟೊಮೆಟೊ ಪೇಸ್ಟ್, ಕ್ರೀಮ್ ಮತ್ತು ಪಾಲಕ್ ಪೇಸ್ಟ್ ಅನ್ನು ಬಳಸಲಾಗುತ್ತದೆ.
6/ 8
ತ್ರಿವರ್ಣ ಸ್ಯಾಂಡ್ವಿಚ್ - ಗಣರಾಜ್ಯ ದಿನದ ಬೆಳಿಗ್ಗೆ ತ್ರಿವರ್ಣ ಸ್ಯಾಂಡ್ವಿಚ್ನೊಂದಿಗೆ ಪ್ರಾರಂಭಿಸಬಹುದು. ಮಕ್ಕಳು ಅದನ್ನು ಇಷ್ಟಪಡುತ್ತಾರೆ. ಬ್ರೌನ್ ಬ್ರೆಡ್, ಬಿಳಿ ಬ್ರೆಡ್, ಕ್ಯಾರೆಟ್, ಮೇಯನೇಸ್, ಕಾಟೇಜ್ ಚೀಸ್, ಹಸಿರು ಚಟ್ನಿಗಳನ್ನು ತ್ರಿವರ್ಣ ಸ್ಯಾಂಡ್ವಿಚ್ ಮಾಡಲು ಬಳಸಲಾಗುತ್ತದೆ.
7/ 8
ತ್ರಿವರ್ಣ ಧೋಕ್ಲಾ - ಧೋಕ್ಲಾ ಒಂದು ಉತ್ತಮ ತಿಂಡಿ ತಿನಿಸು. ತ್ರಿವರ್ಣ ಧೋಕ್ಲಾ ಮಾಡಲು ರವೆ, ಬೇಳೆ ಹಿಟ್ಟು, ಟೊಮೆಟೊ, ಮೊಸರು, ಕರಿಬೇವಿನ ಸೊಪ್ಪು, ತೆಂಗಿನಕಾಯಿ ಪುಡಿ ಮುಂತಾದ ಪದಾರ್ಥಗಳು ಬೇಕಾಗುತ್ತವೆ. ಇದಕ್ಕಾಗಿ ಕೇಸರಿ, ಬಿಳಿ ಮತ್ತು ಹಸಿರು ಬಣ್ಣಗಳಲ್ಲಿ ಹಿಟ್ಟು ತಯಾರಿಸಲಾಗುತ್ತದೆ.
8/ 8
ತ್ರಿವರ್ಣ ನೂಡಲ್ಸ್ - ಗಣರಾಜ್ಯೋತ್ಸವದ ಸಂದರ್ಭದಲ್ಲಿ ಮಕ್ಕಳಿಗಾಗಿ ವಿಶೇಷ ತ್ರಿವರ್ಣ ನೂಡಲ್ಸ್ ತಯಾರಿಸಬಹುದು. ತ್ರಿವರ್ಣ ನೂಡಲ್ಸ್ಗೆ ತುರಿದ ಕ್ಯಾರೆಟ್, ಬೇಯಿಸಿದ ಬಟಾಣಿ, ಪಾಲಕ ಪೇಸ್ಟ್ ಮತ್ತು ಇತರ ಪದಾರ್ಥಗಳೊಂದಿಗೆ ಬೇಯಿಸಿದ ನೂಡಲ್ಸ್ ಅಗತ್ಯವಿರುತ್ತದೆ. ಎಲ್ಲಾ ಮೂರು ಬೇಯಿಸಿದ ನೂಡಲ್ಸ್ ಅನ್ನು ಕೇಸರಿ, ಬಿಳಿ ಮತ್ತು ಹಸಿರು ಬಣ್ಣದಿಂದ ಅಲಂಕರಿಸಿ.