ಮನುಷ್ಯಜೀವನವನ್ನು ಧರ್ಮಾರ್ಥ-ಕಾಮ-ಮೋಕ್ಷಗಳೆಂಬ ಪುರುಷಾರ್ಥಗಳಲ್ಲಿ ಅರ್ಥೈಸಲಾಗುತ್ತದೆ. ಎಲ್ಲ ಚಿಕ್ಕ, ದೊಡ್ಡ ಬಯಕೆಗಳು ಕಾಮವಾದರೆ ಅವೆನ್ನೆಲ್ಲ ಪೂರೈಸುವ ಸಂಪನ್ಮೂಲಗಳು ಅರ್ಥ. ಈ ಅರ್ಥ, ಕಾಮಗಳು ಮಿತಿಮೀರದಂತೆ ಬಾಧಕವಾಗದಂತೆ ನಿಯಂತ್ರಿಸುವುದೇ ಧರ್ಮ. ಅರ್ಥ, ಕಾಮಗಳ ಹಂಗು ಕಳಚಿ, ವಿರಕ್ತಿ ಮೂಡಿದಾಗ ಮೋಕ್ಷ.