ಕೋಪದಲ್ಲಿ ಏನನ್ನಾದರೂ ಹೇಳಿದರೂ, ಅದನ್ನು ಸರಿಪಡಿಸುವುದು ದೊಡ್ಡ ಟಾಸ್ಕ್. ನಿಮ್ಮ ಸಂಬಂಧದಲ್ಲಿ ತುಂಬಾ ಹಾನಿಕಾರಕವಾದ ಕೆಲವು ವಿಷಯಗಳಿರುತ್ತದೆ. ಸ್ಥಳ ಮತ್ತು ಅರ್ಥವನ್ನು ಲೆಕ್ಕಿಸದೆ ಬಳಸುವ ಪದಗಳು ದಾಂಪತ್ಯದಲ್ಲಿ ಬಿರುಕು ಮೂಡಿಸುವಲ್ಲಿ ಪ್ರಮುಖ ಪಾತ್ರವಹಿಸುತ್ತವೆ. ನಿಮ್ಮ ಹತ್ತಿರವಿರುವ ಯಾರಿಗಾದರೂ, ಅದು ಗಂಡ ಅಥವಾ ಹೆಂಡತಿಯಾಗಿರಲಿ, ನೀವು ಎಂದಿಗೂ ಹೇಳಬಾರದ ಕೆಲವು ಪದಗಳನ್ನು ಕೆಳಗೆ ನೀಡಲಾಗಿದೆ.
ನಾನು ಹೇಳುವುದನ್ನು ನೀವು ಯಾಕೆ ಕೇಳುವುದಿಲ್ಲ?: ನಿಮ್ಮ ಸಂಗಾತಿ ನೀವು ಹೇಳುವುದನ್ನು ಕೇಳುವುದಿಲ್ಲವಾದರೂ, ಜಗಳದ ಸಮಯದಲ್ಲಿ ಈ ಪದವನ್ನು ಬಳಸುವುದು ಅನಗತ್ಯ. ನೀವು ತುಂಬಾ ಕೋಪಗೊಂಡಾಗ ಈ ಪದವನ್ನು ಪದೇ ಪದೇ ಪುನರಾವರ್ತಿಸುವುದು ಸಂಘರ್ಷಕ್ಕೆ ಕಾರಣವಾಗುತ್ತದೆ ಮತ್ತು ಅರ್ಥವಾಗುವುದಿಲ್ಲ. ಆದ್ದರಿಂದ ಶಾಂತಿಯುತ ಪರಿಸ್ಥಿತಿಯಲ್ಲಿರುವ ಸಮಯದಲ್ಲಿ ಈ ಮಾತನ್ನು ಹೇಳಿ ಸಾಕು.
'ನೀವು ಬದಲಾಗಿದ್ದೀರಿ' : ಬದಲಾವಣೆ ಒಂದೇ ಅಲ್ಲ ಎಂಬುದನ್ನು ದಂಪತಿ ಅರಿತುಕೊಳ್ಳಬೇಕು. ಒಬ್ಬರ ಪ್ರೀತಿಯ ಜೀವನ ಅಥವಾ ಹೊಸದಾಗಿ ಮದುವೆಯಾದ ಜೀವನವು ಒಂದೇ ಆಗಿರುವುದಿಲ್ಲ. ಸಂಬಂಧ ಯಾವಾಗಲೂ ಒಂದೇ ಅಥವಾ ಒಂದೇ ರೀತಿಯಾಗಿ ಸ್ಥಿರವಾಗಿರಲು ಸಾಧ್ಯವಿಲ್ಲ. ವಯಸ್ಸು ಆಗ್ತಾ ಇದ್ದಂತೆ ಬಿಹೇವಿಯರ್ ಕೂಡ ಬದಲಾಗುತ್ತದೆ. ಹಾಗಂತೆ ಪ್ರೀತಿಯಲ್ಲಿ ಕೊರತೆ ಆಗಿದೆ ಎಂದು ಜಡ್ಜ್ ಮಾಡ್ಲೇಬಾರ್ದು.