ಸಿನಿಮಾದಲ್ಲಿ ತೋರಿಸುವ ಪ್ರೀತಿಯನ್ನೇ ಅದೆಷ್ಟೋಜನ ನಂಬಿರ್ತಾರೆ. ಆದರೆ ನಿಜ ಜೀವನದಲ್ಲಿ ಪ್ರೀತಿಯನ್ನು ಕಾಪಾಡಿಕೊಂಡು ಹೋಗುವುದು ಅಷ್ಟು ಸುಲಭವಲ್ಲ. ಒಬ್ಬರಿಗೊಬ್ಬರು ಆಕರ್ಷಣೆ ಕಳೆದುಕೊಳ್ಳುವುದು ಬ್ರೇಕಪ್ನ ಮೊದಲ ಲಕ್ಷಣ. ನಿಮ್ಮ ಆಕರ್ಷಣೆಯು ನಿಮ್ಮ ಗೆಳೆಯ ಅಥವಾ ಗೆಳತಿಯನ್ನು ಹೊರತುಪಡಿಸಿ ಬೇರೆಯವರ ಕಡೆಗೆ ದಿಕ್ಕನ್ನು ಬದಲಾಯಿಸುತ್ತಿದ್ದರೆ, ನಿಮ್ಮ ಸಂಬಂಧದಲ್ಲಿ ಈಗ ಏನೋ ಸಮಸ್ಯೆ ಬರಲಿದೆ ಎಂದರ್ಥ.