Infertility in Women: ಹೆಣ್ಣುಮಕ್ಕಳಲ್ಲಿ ಬಂಜೆತನಕ್ಕೆ ಮುಖ್ಯ ಕಾರಣಗಳಿವು, ಇದಕ್ಕೆ ಸರಳ ಪರಿಹಾರಗಳೂ ಇವೆ
Reasons for Infertility in Women: ಮದುವೆಯಾದ ಅನೇಕ ದಂಪತಿಗಳು ಮಕ್ಕಳಾಗುವ ಕುರಿತು ಸಾಕಷ್ಟು ಅಡೆತಡೆ ಎದುರಿಸುತ್ತಾರೆ. ಪುರುಷರಿಗಿಂತ ಹೆ್ಚ್ಚಾಗಿ ಮಹಿಳೆಯರು ಈ ಬಗ್ಗೆ ಸ್ವಲ್ಪ ಹೆಚ್ಚೇ ತಲೆ ಕೆಡಿಸಿಕೊಂಡಿರುತ್ತಾರೆ. ಆದರೆ ಅನೇಕ ಬಾರಿ ಸಮಸ್ಯೆಯ ಮೂಲ ತಿಳಿದುಕೊಂಡು ಒಂದಷ್ಟು ಬದಲಾವಣೆ ಮಾಡಿಕೊಂಡರೆ ಬಂಜೆತನಕ್ಕೆ ದೊಡ್ಡ ಪರಿಹಾರ ಸಿಕ್ಕಂತಾಗುತ್ತದೆ. ಬಂಜೆತನಕ್ಕೆ ಕಾರಣಗಳೇನು ಎಂದು ತಜ್ಞರು ವಿವರಿಸಿದ್ದಾರೆ.
ಒಂದು ಹೆಣ್ಣು ಗರ್ಭಿಣಿಯಾದಾಗ ಕೇವಲ ಅವಳು ಮಾತ್ರವಲ್ಲ ಆಕೆಯ ಇಡೀ ಕುಟುಂಬವೇ ಸಂತಸದಲ್ಲಿ ಇರುತ್ತದೆ. ಆಕೆಯ ಪತಿ, ಮಾವ, ಅತ್ತೆ, ತಂದೆ, ತಾಯಿ ಎಲ್ಲರೂ ಆಕೆಯೊಂದಿಗೇ ಸಂತಸದಲ್ಲಿ ಪಾಲ್ಗೊಳ್ಳುವ ಸಂದರ್ಭ ಇದು.
2/ 9
ಮಗುವನ್ನು ಪಡೆಯಲು ತಾಯಿಯಷ್ಟೇ ತಂದೆಯ ಆರೋಗ್ಯ ಕೂಡಾ ಮುಖ್ಯವಾಗುತ್ತದೆ. ಇಬ್ಬರೂ ಆರೋಗ್ಯದಿಂದ ಇದ್ದು ಉತ್ತಮ ಬದುಕು ನಡೆಸಬೇಕು. ಒಳ್ಳೆಯ ಊಟ, ವ್ಯಾಯಾಮ ಎಲ್ಲವೂ ಈ ವಿಚಾರದಲ್ಲಿ ಮುಖ್ಯವಾಗುತ್ತದೆ.
3/ 9
ಮಹಿಳೆಗೆ ಉತ್ತಮ ಪೋಷಕಾಂಶಗಳು ಇರುವ ಆಹಾರ ದೊರೆಯುವುದು ಬಹಳ ಮುಖ್ಯ. ಆಕೆ ತಿನ್ನುವ ಆಹಾರದಲ್ಲಿ ಕಬ್ಬಿಣ, ಫೋಲಿಕ್ ಆಸಿಡ್ ಮುಂತಾದ ಅಗತ್ಯ ವಸ್ತುಗಳು ಇರಬೇಕು, ಆಗಲೇ ಆಕೆ ಆರೋಗ್ಯವಂತವಾಗಿ ಗರ್ಭ ಧರಿಸುವುದು ಮಾತ್ರವಲ್ಲ, 9 ತಿಂಗಳನ್ನೂ ನೆಮ್ಮದಿಯಾಗಿ ಕಳೆಯಬಹುದು.
4/ 9
ಮಹಿಳೆಯರು ಬೊಜ್ಜಿನಿಂದ ಬಳಲುತ್ತಿದ್ದರೆ ಆಗ ಗರ್ಭಧಾರಣೆ ಕಷ್ಟವಾಗಬಹುದು. ಅದೇ ರೀತಿ ಪುರುಷರಿಗೆ ಬೊಜ್ಜು ಇದ್ದರೆ ಆಗ ಅವರ ವೀರ್ಯಾಣುವಿನ ಗುಣಮಟ್ಟದಲ್ಲಿ ಇಳಿಕೆಯಾಗುತ್ತದೆ. ಇದು ಕೂಡಾ ಮಕ್ಕಳನ್ನು ಪಡೆಯಲು ಅಡ್ಡಿಯಾಗುತ್ತದೆ.
5/ 9
ಹಣ್ಣು, ತರಕಾರಿ, ಆಂಟಿ ಆಕ್ಸಿಡೆಂಟ್ ಸೇರಿದಂತೆ ಉತ್ತಮ ಪೌಷ್ಟಿಕಾಂಶಗಳು ಇರುವ ಆಹಾರ ಸೇವಿಸುವ ಕಡೆ ಗಮನ ಹರಿಸಬೇಕು. ಮಗುವಿನ ಬೆಳವಣಿಗೆಗೆ ಇವೆಲ್ಲವೂ ಬಹಳ ಮುಖ್ಯವಾಗಿದೆ.
6/ 9
ಇತ್ತೀಚಿನ ದಿನಗಳಲ್ಲಿ ಪಿಸಿಒಡಿ, ಯೂಟೆರೈನ್ ಫೈಬ್ರಾಯ್ಡ್ ಸೇರಿದಂತೆ ವಿವಿಧ ಸಮಸ್ಯೆಗಳಿಂದ ಹೆಣ್ಣುಮಕ್ಕಳು ಬಳಸುತ್ತಾರೆ. ಇದಲ್ಲದೆ ಋತುಚಕ್ರಕ್ಕೆ ಸಂಬಂಧಿಸಿದ ನಾನಾ ಖಾಯಿಲೆಗಳೂ ಹೆ್ಚಾಗಿವೆ. ಅವೆಲ್ಲವಕ್ಕೂ ಸರಿಯಾದ ಚಿಕಿತ್ಸೆ ನೀಡಿ ಗುಣಪಡಿಸಿಕೊಳ್ಳಬೇಕು. ಆಗ ಗರ್ಭಧಾರಣೆ ಸರಾಗವಾಗುತ್ತದೆ.
7/ 9
ದೈಹಿಕ ಆರೋಗ್ಯದಷ್ಟೇ ಮಹಿಳೆಯ ಮಾನಸಿಕ ಆರೋಗ್ಯ ಕೂಡಾ ಮುಖ್ಯ. ಖಿನ್ನತೆ, ನಿದ್ರಾಹೀನತೆ, ಧೂಮಪಾನ-ಮದ್ಯಪಾನದಂಥಾ ಚಟಗಳು ಮುಂತಾದವುಗಳಿಂದ ದೂರ ಇರಬೇಕು. ಮಾನಸಿಕ ಆರೊಗ್ಯ ವೃದ್ಧಿಗೆ ಬೇಕಿದ್ದರೆ ಆಪ್ತ ಸಮಾಲೋಚನೆ ಸಹಾಯ ಪಡೆಯಬಹುದು.
8/ 9
ಪ್ರತೀ ಬಾರಿ ಊಟ ತಿಂಡಿ ಮಾಡುವಾಗಲೂ ಕನಿಷ್ಟ 2-3 ಬಗೆಯ ಹಣ್ಣು-ತರಕಾರಿಗಳು ಇರುವಂತೆ ನೋಡಿಕೊಳ್ಳಿ. ಇದರೊಂದಿಗೆ ಧಾನ್ಯಗಳು, ಬೇಳೆ ಕಾಳುಗಳು ಕೂಡಾ ಇರಬೇಖು. ಪರಿಪೂರ್ಣ ಆಹಾರ ಸೇವನೆ ಬಹಳ ಮುಖ್ಯ.
9/ 9
ಪ್ರತಿದಿನ ನಿಮ್ಮ ಆಹಾರದಲ್ಲಿ ಕನಿಷ್ಟ 2 ಬಗೆಯ ಡ್ರೈ ಫ್ರೂಟ್ಸ್ ಇರುವಂತೆ ನೋಡಿಕೊಳ್ಳಿ. ಇದು ನಿಮ್ಮ ದೇಹಕ್ಕೆ ಬೇಕಾಗುವ ಪೋಷಕಾಂಶಗಳ ಜೊತೆಗೆ ಕ್ಯಾಲ್ಶಿಯಂ ಕೊರತೆ ಉಂಟಾಗದಂತೆ ನೋಡಿಕೊಳ್ಳುತ್ತದೆ. ಉತ್ತಮ ಶಕ್ತಿಯಿಂದ ಇರುವುದು ಕೂಡಾ ಈ ಸಂದರ್ಭದಲ್ಲಿ ಬಹಳ ಮುಖ್ಯ.