Ramadan 2023: ರಂಜಾನ್ ಉಪವಾಸ ಆರಂಭ ಯಾವಾಗ? ಇದರ ಆಚರಣೆ ಹಿಂದಿದ್ಯಾ ಮಹತ್ವದ ಕಾರಣ?

ಪ್ರಪಂಚದಾದ್ಯಂತದ ಎಲ್ಲಾ ಮುಸ್ಲಿಮರು ಇಡೀ ರಂಜಾನ್ ತಿಂಗಳಲ್ಲಿ ಉಪವಾಸ ಮಾಡುತ್ತಾರೆ, ಬೆಳಗ್ಗೆ ಸೂರ್ಯೋದಯವಾಗಲಿಂದ ಸಂಜೆ ಸೂರ್ಯಾಸ್ತವಾಗುವವರೆಗೆ ಏನನ್ನು ತಿನ್ನದೇ ಅಥವಾ ಕುಡಿಯದೇ, ರಂಜಾನ್ ಪವಿತ್ರ ಗ್ರಂಥ ಕುರಾನ್ ಅನ್ನು ಪಠಿಸುವ ಮತ್ತು ಪೂಜಿಸುವ ಪವಿತ್ರ ದಿನವಾಗಿದೆ.

First published:

  • 16

    Ramadan 2023: ರಂಜಾನ್ ಉಪವಾಸ ಆರಂಭ ಯಾವಾಗ? ಇದರ ಆಚರಣೆ ಹಿಂದಿದ್ಯಾ ಮಹತ್ವದ ಕಾರಣ?

    ಮುಸ್ಲಿಂ ಸಹೋದರ, ಸಹೋದರಿಯರು ಆಚರಿಸುವ ಪ್ರಮುಖ ಹಬ್ಬಗಳಲ್ಲಿ ರಂಜಾನ್ ಕೂಡ ಒಂದಾಗಿದೆ. ಧಾರ್ಮಿಕ ಬಾಂಧವ್ಯವನ್ನು ಬಲಪಡಿಸುವ ಮತ್ತು ನಮ್ಮ ಸುತ್ತಲಿನ ಜನರೊಂದಿಗೆ ದಯೆ ತೋರುವ ದಿನವಾಗಿ ಈ ಹಬ್ಬವನ್ನು ಆಚರಿಸಲಾಗುತ್ತದೆ. ಇಸ್ಲಾಂ ಧರ್ಮದ ಪವಿತ್ರ ಗ್ರಂಥವಾದ ಕುರಾನ್ ಈ ದಿನದಂದು ದೇವರಿಂದ ಜನರಿಗೆ ಬಹಿರಂಗವಾಯಿತು ಎಂಬ ನಂಬಿಕೆ ಜನರಲ್ಲಿದೆ.

    MORE
    GALLERIES

  • 26

    Ramadan 2023: ರಂಜಾನ್ ಉಪವಾಸ ಆರಂಭ ಯಾವಾಗ? ಇದರ ಆಚರಣೆ ಹಿಂದಿದ್ಯಾ ಮಹತ್ವದ ಕಾರಣ?

    ಹಾಗಾಗಿ ಪ್ರಪಂಚದಾದ್ಯಂತದ ಎಲ್ಲಾ ಮುಸ್ಲಿಮರು ಇಡೀ ರಂಜಾನ್ ತಿಂಗಳಲ್ಲಿ ಉಪವಾಸ ಮಾಡುತ್ತಾರೆ, ಬೆಳಗ್ಗೆ ಸೂರ್ಯೋದಯವಾಗಲಿಂದ ಸಂಜೆ ಸೂರ್ಯಾಸ್ತವಾಗುವವರೆಗೆ ಏನನ್ನು ತಿನ್ನದೇ ಅಥವಾ ಕುಡಿಯದೇ, ರಂಜಾನ್ ಪವಿತ್ರ ಗ್ರಂಥ ಕುರಾನ್ ಅನ್ನು ಪಠಿಸುವ ಮತ್ತು ಪೂಜಿಸುವ ಪವಿತ್ರ ದಿನವಾಗಿದೆ.

    MORE
    GALLERIES

  • 36

    Ramadan 2023: ರಂಜಾನ್ ಉಪವಾಸ ಆರಂಭ ಯಾವಾಗ? ಇದರ ಆಚರಣೆ ಹಿಂದಿದ್ಯಾ ಮಹತ್ವದ ಕಾರಣ?

    ಈ ವರ್ಷ ಅಂದರೆ 2023ರ ರಂಜಾನ್ ಉಪವಾಸ ಯಾವಾಗ? ಇಸ್ಲಾಮಿಕ್ ಜನರು ಚಂದ್ರನ ಕ್ಯಾಲೆಂಡರ್ ಪ್ರಕಾರ ಉಪವಾಸ ಮಾಡುತ್ತಾರೆ. ಈ ದಿನಾಂಕಗಳು ಕಾಲಕಾಲಕ್ಕೆ ಬದಲಾಗುತ್ತವೆ. ಮೆಕ್ಕಾದಲ್ಲಿ ಅರ್ಧಚಂದ್ರ ಗೋಚರಿಸುವ ದಿನದಂದು ರಂಜಾನ್ ಉಪವಾಸ ಪ್ರಾರಂಭವಾಗುತ್ತದೆ. ಅದರ ಆಧಾರದ ಮೇಲೆ ಈ ವರ್ಷ ಅಂದರೆ 2023 ಮಾರ್ಚ್ 22 ರಂದು ಪ್ರಾರಂಭವಾಗುತ್ತದೆ ಮತ್ತು ಏಪ್ರಿಲ್ 21 ರಂದು ಕೊನೆಗೊಳ್ಳುತ್ತದೆ. ಇದು 29 ರಿಂದ 30 ದಿನಗಳವರೆಗೆ ಇರುತ್ತದೆ. ಮುಂದಿನ ಚಂದ್ರನ ದರ್ಶನವು ಪವಿತ್ರ ತಿಂಗಳ ಅಂತ್ಯವನ್ನು ಸೂಚಿಸುತ್ತದೆ.

    MORE
    GALLERIES

  • 46

    Ramadan 2023: ರಂಜಾನ್ ಉಪವಾಸ ಆರಂಭ ಯಾವಾಗ? ಇದರ ಆಚರಣೆ ಹಿಂದಿದ್ಯಾ ಮಹತ್ವದ ಕಾರಣ?

    [caption id="attachment_1013770" align="alignnone" width="600"] ರಂಜಾನ್ನಲ್ಲಿ ಚಂದ್ರನ ದರ್ಶನದ ಮಹತ್ವ: ಚಂದ್ರನ ದರ್ಶನವು ರಂಜಾನ್ ತಿಂಗಳ ಆರಂಭ ಮತ್ತು ಅಂತ್ಯವನ್ನು ಸೂಚಿಸುತ್ತದೆ. ರಂಜಾನ್ ಉಪವಾಸದ ಅವಧಿಯ ಆರಂಭಕ್ಕೂ ಮುನ್ನ, ಜನರು ಮತ್ತು ಧಾರ್ಮಿಕ ಮುಖ್ಯಸ್ಥರು ಅರ್ಧಚಂದ್ರನನ್ನು ನೋಡಲು ರಾತ್ರಿಯ ಆಕಾಶವನ್ನು ನೋಡುತ್ತಾರೆ. ಇದು ಅನೇಕ ವರ್ಷಗಳಿಂದ ಈ ಧರ್ಮದಲ್ಲಿ ಅನುಸರಿಸುತ್ತಿರುವ ಸಂಪ್ರದಾಯವೆಂದು ಪರಿಗಣಿಸಲಾಗಿದೆ. ರಂಜಾನ್ ತಿಂಗಳು ಸೂರ್ಯಾಸ್ತದ ನಂತರ ಶಾಬಾನ್ 29 ನೇ ದಿನದಂದು ಪ್ರಾರಂಭವಾಗುತ್ತದೆ, ಚಂದ್ರನ ವೀಕ್ಷಣೆ ಸಂಪ್ರದಾಯಗಳನ್ನು ಅನುಸರಿಸಲಾಗುತ್ತದೆ.

    [/caption]

    MORE
    GALLERIES

  • 56

    Ramadan 2023: ರಂಜಾನ್ ಉಪವಾಸ ಆರಂಭ ಯಾವಾಗ? ಇದರ ಆಚರಣೆ ಹಿಂದಿದ್ಯಾ ಮಹತ್ವದ ಕಾರಣ?

    ಪವಿತ್ರ ರಂಜಾನ್ ಮಾಸದಲ್ಲಿ ಉಪವಾಸ ಮಾಡುವುದೇಕೆ?: ರಂಜಾನ್ ತಿಂಗಳ ಉಪವಾಸವನ್ನು ಆರಾಧನೆಯ ಕ್ರಮವಾಗಿ ಭಾವಿಸಲಾಗುತ್ತದೆ. ರಂಜಾನ್ ತಿಂಗಳಿನುದ್ದಕ್ಕೂ, ಪ್ರತಿದಿನವೂ ತಿನ್ನದೇ ಮತ್ತು ಕುಡಿಯದೇ ಸಂಜೆ ಸೂರ್ಯೋದಯದಿಂದ ಸೂರ್ಯಾಸ್ತದವರೆಗೆ ಉಪವಾಸ ಮಾಡುತ್ತಾರೆ. ಇದರೊಂದಿಗೆ ಇಂದಿನ ದಿನಗಳಲ್ಲಿ ನಿರ್ಗತಿಕರಿಗೆ ಮತ್ತು ಬಡವರಿಗೆ ಸಹಾಯ ಮಾಡುವುದು ಮುಸ್ಲಿಂ ಜನರ ಮುಖ್ಯ ಕರ್ತವ್ಯವಾಗಿದೆ. ಈ ಸಹಾಯವನ್ನು ಸಖತ್ ಎಂದು ಕರೆಯಲಾಗುತ್ತದೆ.

    MORE
    GALLERIES

  • 66

    Ramadan 2023: ರಂಜಾನ್ ಉಪವಾಸ ಆರಂಭ ಯಾವಾಗ? ಇದರ ಆಚರಣೆ ಹಿಂದಿದ್ಯಾ ಮಹತ್ವದ ಕಾರಣ?

    ಇದರ ಜೊತೆಗೆ, ಈ ಉಪವಾಸದ ಅವಧಿಯಲ್ಲಿ, ಮುಸ್ಲಿಂ ಸಹೋದರರು ಸಂಪೂರ್ಣ ಪವಿತ್ರ ಕುರಾನ್ ಅನ್ನು ಓದಬೇಕು. ಈ ಅವಧಿಯಲ್ಲಿ ತಾಳ್ಮೆಯೂ ಅಗತ್ಯ. ಈ ದಿನಗಳಲ್ಲಿ ಕೆಟ್ಟ ಅಭ್ಯಾಸಗಳನ್ನು ಸಹ ತ್ಯಜಿಸಬೇಕು. ಹೀಗೆ ಮಾಡುವುದರಿಂದ ಭಗವಂತ ಸದಾ ತಮ್ಮ ಬಳಿ ಸಂಚರಿಸುತ್ತಿರುವಂತೆ ಭಾಸವಾಗುತ್ತದೆ ಎಂದು ನಂಬಲಾಗಿದೆ.

    MORE
    GALLERIES