ಪವರ್ ಸ್ಟಾರ್ ಪುನೀತ್ ರಾಜ್ಕುಮಾರ್ ಅವರಿಗೆ ಆಗಿದ್ದು ಹೃದಯಾಘಾತವಲ್ಲ, ಅದು ಹೃದಯ ಸ್ತಂಭನ. ಐಸಿಯೂನಲ್ಲಿರುವಾಗ ಹೃದಯ ಸ್ತಂಭನ ಆದರೂ ಉಳಿಸಿಕೊಳ್ಳುವುದು ತುಂಬಾ ಕಷ್ಟ. ಕಾರ್ಡಿಯಾಕ್ ಅರೆಸ್ಟ್ ಆದಾಗ ವ್ಯಕ್ತಿಯ ದೇಹದ ಪ್ರತಿಕ್ರಿಯೆ ಹೇಗಿರುತ್ತದೆ ಎಂದು ಹೇಳಲಾಗುವುದಿಲ್ಲ ಎಂದು ವೈದ್ಯ ರಮಣ ರಾವ್ ಅವರು ಹೇಳಿದ್ದಾರೆ.