Radish Storage Tips: ಚಳಿಗಾಲದಲ್ಲಿ ಮೂಲಂಗಿಯನ್ನು ಈ ರೀತಿ ಸಂಗ್ರಹಿಸಿಡಿ, ಇಲ್ಲವಾದರೆ ರುಚಿ ಕೆಡುತ್ತೆ
How to Store Radish: ತರಕಾರಿಗಳು ತಾಜಾತನದಿಂದ ಕೂಡಿರಬೇಕು ಎಂದರೆ, ಸೀಸನ್ ಗೆ ತಕ್ಕಂತೆ ಅವನ್ನು ಭಿನ್ನ ರೀತಿಯಲ್ಲಿ ಸಂಗ್ರಹಿಸಿಡಬೇಕು. ಹೆಚ್ಚಿನ ಜನರು ಚಳಿಗಾಲದಲ್ಲಿ ಮೂಲಂಗಿಯನ್ನು ತಿನ್ನಲು ಇಷ್ಟಪಡುತ್ತಾರೆ. ವಿಶೇಷವಾಗಿ ಮೂಲಂಗಿ ಸಲಾಡ್ ಚಳಿಗಾಲದಲ್ಲಿ ಅನೇಕ ಜನರ ಆಹಾರದ ಭಾಗವಾಗಿದೆ.
ನೀವು ಮಾರುಕಟ್ಟೆಯಿಂದ ಹೆಚ್ಚು ಮೂಲಂಗಿಯನ್ನು ಖರೀದಿಸಿದ್ದರೆ, ಅದನ್ನು ಸಂಗ್ರಹಿಸಲು ಕೆಲವು ವಿಶೇಷ ವಿಧಾನಗಳನ್ನು ಅನುಸರಿಸಬೇಕಾಗುತ್ತೆ. ಚಳಿಗಾಲದಲ್ಲಿ ಮೂಲಂಗಿಯನ್ನು ಸಂಗ್ರಹಿಸಲು ಕೆಲವು ಸಲಹೆಗಳನ್ನು ಇಲ್ಲಿ ತಿಳಿಸಲಾಗಿದೆ.
2/ 7
ಇಲ್ಲಿ ತಿಳಿಸಿರುವ ವಿಧಾನದಲ್ಲಿ ಮೂಲಂಗಿಗಳನ್ನು ಸಂಗ್ರಹಿಸಿಟ್ಟರೆ, ಹೆಚ್ಚು ದಿನಗಳ ಕಾಲ ಮೂಲಂಗಿ ತಾಜಾತನದಿಂದ ಕೂಡಿರುತ್ತೆ.
3/ 7
1) ಮೂಲಂಗಿಯನ್ನು ಸಂಗ್ರಹಿಸಲು ಪೇಪರ್ ಟವೆಲ್ ಅನ್ನು ಬಳಸುವುದು ಒಳ್ಳೆಯ ಮಾರ್ಗವಾಗಿದೆ. ಮೂಲಂಗಿಯನ್ನು ಪೇಪರ್ ಟವೆಲ್ ನಲ್ಲಿ ಸುತ್ತಿ ಅದನ್ನು ಆಹಾರ ಸಂಗ್ರಹ ಚೀಲದಲ್ಲಿ ತುಂಬಿಸಿ. ಈಗ ಈ ಚೀಲವನ್ನು ಫ್ರಿಜ್ ನಲ್ಲಿಟ್ಟರೆ 6-8 ದಿನಗಳವರೆಗೆ ಮೂಲಂಗಿ ಹಾಳಾಗುವುದಿಲ್ಲ. ರುಚಿ ಕೂಡ ಚೆನ್ನಾಗಿರುತ್ತೆ.
4/ 7
2) ಮೂಲಂಗಿಗಳನ್ನು ನೀರಿನಲ್ಲಿ ಸಂಗ್ರಹಿಸಿಡಿ. ಮೊದಲಿಗೆ ಮೂಲಂಗಿಗಳನ್ನು ಸಂಪೂರ್ಣವಾಗಿ ತೊಳೆಯಿರಿ. ಎಲೆಗಳು ಮತ್ತು ಬೇರು ತುದಿಯನ್ನು ಕತ್ತರಿಸಿ ಪ್ರತ್ಯೇಕಿಸಿ. ಗಾಳಿಯಾಡದ ಪಾತ್ರೆಯಲ್ಲಿ ನೀರು ತುಂಬಿಸಿ. ಎಲ್ಲಾ ಮೂಲಂಗಿಗಳನ್ನು ಈ ಜಾರ್ ನಲ್ಲಿ ಹಾಕಿ ಫ್ರಿಜ್ ನಲ್ಲಿ ಇರಿಸಿ. ಈ ವಿಧಾನದಿಂದ ಮೂಲಂಗಿಯನ್ನು 2 ವಾರಗಳವರೆಗೆ ತಾಜಾವಾಗಿಡಬಹುದು.
5/ 7
3) ಮಣ್ಣಿನಲ್ಲಿ ಕೂಡ ಮೂಲಂಗಿಗಳನ್ನು ಸಂಗ್ರಹಿಸಿಡಬಹುದು. ಇದಕ್ಕಾಗಿ ಸಾಮಾನ್ಯ ಮಣ್ಣು ಅಥವಾ ಆರ್ದ್ರ ಮರಳನ್ನು ಸಹ ಬಳಸಬಹುದು. ಮೂಲಂಗಿಯನ್ನು ಮಣ್ಣಿನಲ್ಲಿ ಅಥವಾ ಮರಳಿನಲ್ಲಿ ಮುಚ್ಚಿಡುವುದರಿಂದ ಅವುಗಳು 3 ತಿಂಗಳವರೆಗೆ ತಾಜಾ ಆಗಿ ಇರುತ್ತವೆ.
6/ 7
4) ಉಪ್ಪಿನಕಾಯಿ ಮಾಡುವ ಮಾದರಿಯಲ್ಲೂ ಸಂಗ್ರಹಿಸಿಡಬಹುದು. ½ ಕೆಜಿ ಮೂಲಂಗಿಗೆ ½ ಕಪ್ ಸಕ್ಕರೆ, ½ ಬಿಳಿ ವಿನೆಗರ್, ¼ ಕಪ್ ನೀರು ಮತ್ತು 1 ಟೀಚಮಚ ಉಪ್ಪು ಸೇರಿಸಿ. ಈ ರೀತಿಯಾಗಿ ಮೂಲಂಗಿಯು 2-3 ತಿಂಗಳವರೆಗೆ ಕೆಡುವುದಿಲ್ಲ. ಚಳಿಗಾಲದ ನಂತರವೂ ಮೂಲಂಗಿಯನ್ನು ಸವಿಯಬಹುದು.
7/ 7
5) ಮೂಲಂಗಿಯನ್ನು ಖರೀದಿಸುವಾಗ ಸರಿಯಾದ ಮೂಲಂಗಿಯನ್ನು ಆರಿಸುವುದು ಕೂಡ ಮುಖ್ಯ. ಎಳೆ ಮೂಲಂಗಿಗಳನ್ನು ಖರೀದಿಸಿದರೆ ಹಲವು ದಿನಗಳವರೆಗೆ ತಾಜಾವಾಗಿರುತ್ತವೆ. ದೊಡ್ಡ ಗಾತ್ರದ ಮೂಲಂಗಿಗಳನ್ನು ಆಯ್ಕೆ ಮಾಡಬೇಡಿ.