ಬೆಸ್ಟ್ ಫ್ರೆಂಡ್ ಜೊತೆಗೆ ಪ್ರೀತಿಯನ್ನು ಹೇಗೆ ಹೇಳಿಕೊಳ್ಳುವುದು? ಪ್ರೀತಿಯ ಜೊತೆಗೆ ಸ್ನೇಹ ಕೂಡ ಮುಖ್ಯ. ಕೆಲವರು ಪ್ರೀತಿಯಲ್ಲಿ ಬಿದ್ದ ನಂತರ ಸ್ನೇಹಿತರಾಗುತ್ತಾರೆ. ಇನ್ನೂ ಕೆಲವರು ತಮ್ಮ ಬೆಸ್ಟ್ ಫ್ರೆಂಡ್ ಜೊತೆಗೆ ಪ್ರೀತಿಯಲ್ಲಿ ಬೀಳುತ್ತಾರೆ. ಬೆಸ್ಟ್ ಫ್ರೆಂಡ್ ಅನ್ನು ಪ್ರೀತಿಸುವುದು ಸಹಜ. ಆದರೆ ಪ್ರೀತಿಯನ್ನು ಹೇಳಿಕೊಂಡರೆ ಎಲ್ಲಿ ಸ್ನೇಹ ಮುರಿದು ಬೀಳುತ್ತದೆಯೋ ಎಂಬ ಭಯದಿಂದ ತಮ್ಮ ಭಾವನೆಗಳನ್ನು ಅದೆಷ್ಟೋ ಮಂದಿ ಮರೆಮಾಚುತ್ತಾರೆ.
ಸುಳಿವು ನೀಡಲು ಪ್ರಯತ್ನಿಸಿ: ನಿಮ್ಮ ಸ್ನೇಹಿತರಿಗೆ ನೇರವಾಗಿ ಪ್ರೀತಿಯನ್ನು ವ್ಯಕ್ತಪಡಿಸುವ ಬದಲು, ನೀವು ಅವರಿಗೆ ಮುಂಚಿತವಾಗಿ ಒಂದು ಸಣ್ಣ ಸುಳಿವು ನೀಡಬಹುದು. ಇದಕ್ಕಾಗಿ ನೀವು ಸ್ನೇಹಿತನೊಂದಿಗೆ ಫ್ಲರ್ಟಿಂಗ್ ಮತ್ತು ಅವರ ಬಗ್ಗೆ ಹೆಚ್ಚಿನ ಕಾಳಜಿ ವಹಿಸುವಂತಹ ಸಲಹೆಗಳನ್ನು ಅನುಸರಿಸಬಹುದು. ಅಂತಹ ಪರಿಸ್ಥಿತಿಯಲ್ಲಿ, ನಿಮ್ಮ ನಡವಳಿಕೆಯಲ್ಲಿನ ಈ ಬದಲಾವಣೆಯನ್ನು ಸ್ನೇಹಿತರು ಇಷ್ಟಪಟ್ಟರೆ, ಅವರಿಗೂ ನೀವು ಇಷ್ಟ ಎಂದರ್ಥ.
ನೆಚ್ಚಿನ ಸ್ಥಳದಲ್ಲಿ ಪ್ರಸ್ತಾಪಿಸಿ: ನಿಮ್ಮ ಫ್ರೆಂಡ್ಗೆ ಪ್ರೀತಿಯನ್ನು ವ್ಯಕ್ತಪಡಿಸಲು ಅವರ ಫೆವರೇಟ್ ಪ್ಲೇಸ್ ಆಯ್ಕೆ ಮಾಡಬಹುದು. ಈ ವೇಳೆ ನಿಮ್ಮ ಫ್ರೆಂಡ್ ಅನ್ನು ಅವರ ನೆಚ್ಚಿನ ತಾಣಕ್ಕೆ ಕರೆದೊಯ್ಯುವ ಮೂಲಕ ಆಶ್ಚರ್ಯಗೊಳಿಸಿ ಮತ್ತು ನಿಮ್ಮ ಮನಸ್ಸಿನಲ್ಲಿರುವುದರ ಬಗ್ಗೆ ನೇರವಾಗಿ ಹೇಳಿ. ನೀವು ಪ್ರೀತಿಸಲು ಕಾರಣವೇನು ಎಂಬ ಕಾರಣವನ್ನೂ ಹೇಳಿ. ಇದರಿಂದ ನಿಮ್ಮ ಫ್ರೆಂಡ್ ನಿಮಗೆ ತಕ್ಷಣವೇ ಓಕೆ ಅಂತ ಕೂಡ ಹೇಳಬಹದು.