Pomegranate Peel: ದಾಳಿಂಬೆ ಸಿಪ್ಪೆಯನ್ನು ಈ ರೀತಿ ಬಳಸಿದ್ರೆ ಹಲವಾರು ಸಮಸ್ಯೆಗಳಿಗೆ ಪರಿಹಾರ ಸಿಗುತ್ತೆ
Benefits of Pomegranate Peel: ದಾಳಿಂಬೆ ಹಣ್ಣಿನ ಪ್ರಯೋಜನಗಳ ಬಗ್ಗೆ ನಾವು ಹೆಚ್ಚಾಗಿ ಹೇಳುವ ಅವಶ್ಯಕತೆ ಇಲ್ಲ. ಅನೇಕ ಆರೋಗ್ಯ ಸಮಸ್ಯೆಗಳಿಗೆ ಈ ಹಣ್ಣು ಪರಿಹಾರ ನೀಡುತ್ತದೆ. ಆದರೆ ಅದರ ಸಿಪ್ಪೆಯೂ ಸಹ ಹಲವಾರು ಪ್ರಯೋಜನಗಳನ್ನು ಹೊಂದಿದ್ದು, ದಾಳಿಂಬೆ ಸಿಪ್ಪೆಯಿಂದ ಸಿಗುವ ಲಾಭಗಳೇನು ಎಂಬುದು ಇಲ್ಲಿದೆ.
ನಿಮ್ಮ ಚರ್ಮದ ಸರ್ವ ಸಮಸ್ಯೆಗಳಿಗೆ ಇದು ಪರಿಹಾರ ನೀಡುತ್ತದೆ. ಸ್ವಲ್ಪ ದಾಳಿಂಬೆ ಸಿಪ್ಪೆಯನ್ನು ಒಣಗಿಸಿ ಪುಡಿ ಮಾಡಿಕೊಳ್ಳಿ ಅದಕ್ಕೆ ಸ್ವಲ್ಪ ಅರಿಶಿನ ಹಾಗೂ ಹಾಲು ಹಾಕಿ ಕಲಸಿ ಪೇಸ್ಟ್ ಮಾಡಿಕೊಳ್ಳಿ. ಇದನ್ನು ಮುಖಕ್ಕೆ ಹಚ್ಚುವುದು ಸುಕ್ಕು ಕಡಿಮೆ ಮಾಡಲು ಸಹಾಯ ಮಾಡುತ್ತದೆ.
2/ 8
ಮೊಡವೆಗಳ ವಿರುದ್ಧ ಹೋರಾಡಲು ಸಹಾಯ ಮಾಡುತ್ತದೆ: ಈ ದಾಳಿಂಬೆ ಸಿಪ್ಪೆಯನ್ನು ಬಳಸಿ ಮಾಸ್ಕ್ ತಯಾರಿಸುವುದರಿಂದ ಹಾಗೂ ನೀರಿಗೆ ಹಾಕಿ ಕುದಿಸಿ ಕುಡಿಯುವುದು ಮೊಡವೆ ಹೋಗಲಾಡಿಸಲು ಸಹಾಯ ಮಾಡುತ್ತದೆ.
3/ 8
ಪಿರಿಯಡ್ಸ್ ಹೊಟ್ಟೆ ನೋವಿಗೆ: ಮಹಿಳೆಯರನ್ನು ಕಾಡುವ ಪಿರಿಯಡ್ಸ್ ಹೊಟ್ಟೆ ನೋವಿಗೆ ಈ ದಾಳಿಂಬೆ ಸಿಪ್ಪೆ ಮುಕ್ತಿ ನೀಡುತ್ತದೆ. ಸ್ವಲ್ಪ ದಾಳಿಂಬೆ ಸಿಪ್ಪೆಯನ್ನು ನೀರಿಗೆ ಹಾಕಿ ಕುದಿಸಿ ದಿನಕ್ಕೆ 2 ಬಾರಿ ಕುಡಿಯಿರಿ.
4/ 8
ಗಂಟಲು ನೋವಿಗೆ ಪರಿಹಾರ ನೀಡುತ್ತದೆ: ದಾಳಿಂಬೆ ಸಿಪ್ಪೆಯನ್ನು ಚೆನ್ನಾಗಿ ಕುದಿಸಿ ಅದಕ್ಕೆ ಶುಂಠಿಯ ರಸವನ್ನು ಹಾಕಿ ಕುಡಿಯಿರಿ. ಇದು ನಿಮ್ಮ ಗಂಟಲು ನೋವು ಕಡಿಮೆ ಮಾಡಲು ಸಹಾಯ ಮಾಡುತ್ತದೆ.
5/ 8
ಕೆಮ್ಮಿಗೆ ಪರಿಹಾರ ಇದು: ಚಳಿಗಾಲದಲ್ಲಿ ಶೀತ ಹಾಗೂ ಕೆಮ್ಮು ಸಾಮಾನ್ಯ. ಅದಕ್ಕೆ ಹಲವಾರು ಮನೆಮದ್ದುಗಳನ್ನು ಬಳಸುತ್ತೇವೆ. ಹಾಗೆಯೇ ದಾಳಿಂಬೆ ಸಿಪ್ಪೆ ಸಹ ನಿಮಗೆ ಪ್ರಯೋಜನ ನೀಡುತ್ತದೆ. ದಾಳಿಂಬೆ ಸಿಪ್ಪೆಯ ಕಷಾಯ ಮಾಡಿಕೊಂಡು ಕುಡಿಯಿರಿ.
6/ 8
ಮೂಳೆಗಳ ಆರೋಗ್ಯಕ್ಕೆ: ಮೂಳೆಗಳ ಆರೋಗ್ಯ ಕಾಪಾಡಿಕೊಳ್ಳಲು ಈ ದಾಳಿಂಬೆ ಸಿಪ್ಪೆ ಸಹಾಯ ಮಾಡುತ್ತದೆ. ದಾಳಿಂಬೆ ಸಿಪ್ಪೆಯನ್ನು ಕೇವಲ ನೀರಿನ ಜೊತೆ ಕುಡಿಯುವ ಬದಲು ಅದಕ್ಕೆ ಸ್ವಲ್ಪ ಜೀರಿಗೆ ಹಾಗೂ ಶುಂಠಿ ಹಾಕಿ ಕುಡಿಯಿರಿ.
7/ 8
ಜೀರ್ಣಕ್ರಿಯೆ ಸಮಸ್ಯೆಗೆ: ಜೀರ್ಣಕ್ರಿಯೆ ಸಮಸ್ಯೆಗೆ ಸಹ ಈ ದಾಳಿಂಬೆ ಸಿಪ್ಪೆ ಪ್ರಯೋಜನ ನೀಡುತ್ತದೆ. ಇದರ ಪುಡಿಯನ್ನು ಬೆಚ್ಚಗಿನ ನೀರಿಗೆ ಹಾಕಿ ದಿನಕ್ಕೆ 3 ಬಾರಿ ಸೇವಿಸಿ ಸಾಕು. ಇದರಿಂದ ಅಜೀರ್ಣ ಸಮಸ್ಯೆಗೆ ಪರಿಹಾರ ಸಿಗುತ್ತದೆ.
8/ 8
ಬಾಯಿಯ ಆರೋಗ್ಯಕ್ಕೆ: ದಾಳಿಂಬೆ ಸಿಪ್ಪೆ ನಿಮ್ಮ ಬಾಯಿಯ ಆರೋಗ್ಯ ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ. ಬಾಯಿಯ ದುರ್ವಾಸನೆ ಹೋಗಲಾಡಿಸುವಲ್ಲಿ ಇದು ಪ್ರಮುಖ ಪಾತ್ರವಹಿಸುತ್ತದೆ. ಸ್ವಲ್ಪ ದಾಳಿಂಬೆ ಪುಡಿಯನ್ನು ಜೇನುತುಪ್ಪದ ಜೊತೆ ದಿನಕ್ಕೆ ಒಮ್ಮೆ ಸೇವಿಸಿ.