ಸಂಬಂಧವು ಬೇಸರವಾಗದಂತೆ ನೋಡಿಕೊಳ್ಳುವುದು : ಪ್ರೀತಿಯು ಎಷ್ಟೇ ಮಟ್ಟಿಗಿದ್ದರೂ, ಒಂದು ಹಂತದಲ್ಲಿ ಸಂಬಂಧವು ನೀರಸವಾಗಿ ಕಾಣಿಸಬಹುದು. ಆಗಾಗ ಜಗಳ ಆಗಬಹುದು. ಹಾಗಾಗಿ ಈ ವೇಳೆ ಜಗಳ ಆಡುವುದಿಲ್ಲ ಎಂಬ ಭರವಸೆಗಳನ್ನು ನೀಡಬಹುದು. ನೀವು ಏನನ್ನಾದರೂ 10 ಬಾರಿ ಹೇಳಿದರೂ ನಾನು ಅದನ್ನು ಕೇಳಲು ಎಂದಿಗೂ ಆಯಾಸಗೊಳ್ಳುವುದಿಲ್ಲ ಎಂದು ಹೇಳುವ ಮೂಲಕ ನೀವು ಪ್ರೀತಿಯನ್ನು ವ್ಯಕ್ತಪಡಿಸಬಹುದು.