ಗರ್ಭಾವಸ್ಥೆಯು ಮಹಿಳೆಯರ ಜೀವನದಲ್ಲಿ ಪ್ರಮುಖ ಹಂತವಾಗಿದೆ. ಈ ಸಂತಸದ ಸಮಯದಲ್ಲಿ ಪ್ರತಿ ಗರ್ಭಿಣಿ ಮಹಿಳೆಯರು ಹಲವಾರು ದೈಹಿಕ ಮತ್ತು ಮಾನಸಿಕ ಬದಲಾವಣೆಗಳಿಗೆ ಒಳಗಾಗುತ್ತಾರೆ. ಈ ಸಮಯದಲ್ಲಿ, ಅವರು ಅನೇಕ ಆರೋಗ್ಯ ಸಮಸ್ಯೆಗಳನ್ನು ಎದುರಿಸುತ್ತಾರೆ. ಆದರೆ ಇಂತಹ ಸಮಯದಲ್ಲಿ ಮಾನಸಿಕ ಒತ್ತಡಕ್ಕೆ ಒಳಗಾಗದೇ ಆರೋಗ್ಯಕರ ಜೀವನಶೈಲಿಯನ್ನು ಅನುಸರಿಸಬೇಕು.ಅವರು ತಿನ್ನುವ ಆಹಾರದ ಬಗ್ಗೆ ಹೆಚ್ಚು ಗಮನ ಹರಿಸಬೇಕು. ಏಕೆಂದರೆ ಅವರು ಸೇವಿಸುವ ಆಹಾರದಲ್ಲಿರುವ ಪೋಷಕಾಂಶಗಳು ಭ್ರೂಣಕ್ಕೂ ತಲುಪುತ್ತವೆ. ಆದ್ದರಿಂದ ಸಮತೋಲಿತ ಮತ್ತು ಪೌಷ್ಟಿಕ ಆಹಾರವನ್ನು ತೆಗೆದುಕೊಳ್ಳಿ. (Image:Unplash)
ಮುಖ್ಯವಾಗಿ ಈ ಹಣ್ಣಿನಲ್ಲಿ ಉತ್ತಮ ಕೊಬ್ಬಿನಾಂಶ, ಕರಗುವ ನಾರಿನಂಶ, ಕಬ್ಬಿಣಾಂಶ, ವಿಟಮಿನ್, ಮಿನರಲ್ಸ್ ಮತ್ತು ಆ್ಯಂಟಿಆಕ್ಸಿಡೆಂಟ್ ಅಂಶ ಹೇರಳವಾಗಿರುವುದರಿಂದ ಗರ್ಭಿಣಿಯರು ಈ ಹಣ್ಣನ್ನು ಮಿತವಾಗಿ ಸೇವಿಸುವುದು ತುಂಬಾ ಒಳ್ಳೆಯದು. ಮುಖ್ಯವಾಗಿ ಈ ಹಣ್ಣನ್ನು ಸೇವಿಸುವುದರಿಂದ ದೇಹದಲ್ಲಿನ ಸಕ್ಕರೆಯ ಅಂಶವು ರಕ್ತಹೀನತೆಯಂತಹ ಸಮಸ್ಯೆಗಳಿಂದ ಮುಕ್ತಿ ಹೊಂದುತ್ತದೆ ಮತ್ತು ಎದೆಯಲ್ಲಿ ಹಾಲು ಉತ್ಪಾದನೆಯನ್ನು ಹೆಚ್ಚಿಸುತ್ತದೆ.
ದಿನಕ್ಕೆ ಒಂದು ಸೇಬು ತಿನ್ನುವುದು ಆರೋಗ್ಯಕ್ಕೆ ಒಳ್ಳೆಯದು ಎಂದು ನಮಗೆಲ್ಲರಿಗೂ ತಿಳಿದಿದೆ. ಗರ್ಭಿಣಿಯರಿಗೂ ಈ ಹಣ್ಣು ಒಳ್ಳೆಯದು. ಮುಖ್ಯವಾಗಿ ಸೇಬಿನ ಹಣ್ಣಿನಲ್ಲಿ ಪೋಷಕಾಂಶಗಳು, ವಿಟಮಿನ್, ಆ್ಯಂಟಿಆಕ್ಸಿಡೆಂಟ್, ಫೈಟೊನ್ಯೂಟ್ರಿಯೆಂಟ್, ಫ್ಲೇವನಾಯ್ಡ್ ಮತ್ತು ಕರಗುವ ನಾರಿನಂಶ ಹೇರಳವಾಗಿರುವುದರಿಂದ ಗರ್ಭಿಣಿಯರ ಆರೋಗ್ಯವನ್ನು ಸುಧಾರಿಸುವಲ್ಲಿ ಈ ಹಣ್ಣು ತುಂಬಾ ಪ್ರಯೋಜನಕಾರಿ ಆಗಿದೆ.
ಆದರೆ ಸೇಬು ತಿನ್ನುವ ಮುನ್ನ ಅದನ್ನು ಸರಿಯಾಗಿ ತೊಳೆಯಬೇಕು. ಏಕೆಂದರೆ ಈ ಹಣ್ಣುಗಳನ್ನು ನೇರವಾಗಿ ಮಾರುಕಟ್ಟೆಯಿಂದ ಖರೀದಿಸುವುದರಿಂದ ಅವುಗಳ ಮೇಲೆ ಕೀಟನಾಶಕಗಳನ್ನು ಬಳಸುವ ಸಾಧ್ಯತೆ ಹೆಚ್ಚಾಗಿರುತ್ತದೆ. ಇಲ್ಲಿ ಗಮನಿಸಬೇಕಾದ ಒಂದು ಪ್ರಮುಖ ಅಂಶವೆಂದರೆ ಈ ಹಣ್ಣಿನ ಬೀಜದಲ್ಲಿ ಸೈನೈಡ್ ಇದೆ. ಆದ್ದರಿಂದ ಇದನ್ನು ತಿನ್ನಬೇಡಿ, ಏಕೆಂದರೆ ಇದು ಅಡ್ಡಪರಿಣಾಮಗಳಿಗೆ ಕಾರಣವಾಗಬಹುದು.