Pregnancy Tips: ತಾಯ್ತನ ಎಂಬುದು ಪ್ರತಿಯೊಂದು ಹೆಣ್ಣಿಗೂ ದೇವರು ಕೊಟ್ಟಿರುವ ವರ ಅಂತಲೇ ಹೇಳಬಹುದು. ತನ್ನೊಡಲಿನಲ್ಲಿ ಮುದ್ದು ಮಗುವೊಂದು ಚಿಗುರೊಡೆಯುತ್ತಿದೆ ಎಂದು ತಿಳಿದಾಕ್ಷಣ ಆ ತಾಯಿಯ ಸಂತೋಷಕ್ಕೆ ಪಾರವೇ ಇರುವುದಿಲ್ಲ. ಆದರೆ ಆ ಖುಷಿಯ ನಡುವೆಯೇ ಗರ್ಭಾವಸ್ಥೆಯಲ್ಲಿ ಹಾರ್ಮೋನ್ ಬದಲಾವಣೆಗಳಿಂದಾಗಿ ತಾಯಿಯಲ್ಲಿ ಕೆಲವು ದೈಹಿಕ ಮತ್ತು ಮಾನಸಿಕ ಬದಲಾವಣೆಗಳು ಆಗುತ್ತವೆ. ಗರ್ಭ ಧರಿಸಿದ ಮೊದಲ ಮೂರು ತಿಂಗಳು ವಾಕರಿಕೆ, ವಾಂತಿ, ಸುಸ್ತು ಆಗುವುದು ಸರ್ವೇ ಸಾಮಾನ್ಯ. ಕೆಲವರಿಗಂತೂ ಯಾವ ವಾಸನೆಯನ್ನು ಸಹಿಸಲು ಆಗುವುದೇ ಇಲ್ಲ. ಊಟವೂ ಸೇರುವುದಿಲ್ಲ. ವಿಪರೀತ ವಾಂತಿಯಾಗುತ್ತಿರುತ್ತದೆ. ಅಂತಹವರಿಗೆ ಸುಲಭವಾದ ಮನೆ ಮದ್ದುಗಳು ಇಲ್ಲಿವೆ.
ಚಳಿಗಾಲದಲ್ಲಿ ಸಂಜೆಯ ವೇಳೆ ನಿಂಬೆ ಜ್ಯೂಸ್ ಕುಡಿಯುವುದು ಒಳ್ಳೆಯದಲ್ಲ. ಮಲಬದ್ಧತೆಯ ಸಮಸ್ಯೆ ಇದ್ದರೆ ಬೆಳಗ್ಗೆ ಅಥವಾ ಸಂಜೆ ಶುಂಠಿ ಟೀ ಕುಡಿಯಬಹುದು. ಇನ್ನು, ನಾಲ್ಕೈದು ಪುದೀನಾ ಎಲೆಗಳನ್ನು ತಿಂದರೆ ವಾಂತಿಯಾಗುವುದು ನಿಲ್ಲುತ್ತದೆ. (ಹಕ್ಕು ನಿರಾಕರಣೆ : ಈ ಲೇಖನವು ಸಾರ್ವಜನಿಕ ನಂಬಿಕೆ ಮತ್ತು ಅಂತರ್ಜಾಲದಲ್ಲಿ ಲಭ್ಯವಿರುವ ಮಾಹಿತಿಯನ್ನು ಆಧರಿಸಿದೆ. ನ್ಯೂಸ್ 18 ಇದನ್ನು ಪರಿಶೀಲಿಸಿಲ್ಲ. ಯಾವುದೇ ಪುರಾವೆಗಳಿಲ್ಲ.)