Pregnancy Tips: ಪಪ್ಪಾಯಿ ಮಾತ್ರವಲ್ಲ, ಗರ್ಭಿಣಿಯರು ಈ ಹಣ್ಣುಗಳನ್ನು ಸೇವಿಸುವುದು ಕೂಡ ಡೇಂಜರ್
ಪ್ರತಿಯೊಬ್ಬ ಹೆಣ್ಣಿಗೂ ಗರ್ಭಾವಸ್ಥೆ ತಂಬಾನೇ ಮುಖ್ಯವಾದ ಘಟ್ಟ. ಈ ಸಮಯದಲ್ಲಿ ಆಹಾರದ ವಿಚಾರವಾಗಿ ಅನೇಕ ಎಚ್ಚರಿಕೆಗಳನ್ನು ತೆಗೆದುಕೊಳ್ಳಬೇಕಾಗುತ್ತೆ. ಕೆಲವೊಂದು ಆಹಾರ ಪದಾರ್ಥಗಳು ಒಳ್ಳೆಯದಾದರೂ ಗರ್ಭಿಣಿಯರು ತಿನ್ನುವುದು ಸೂಕ್ತವಲ್ಲ.
ಗರ್ಭಿಣಿಯರಿಗೆ ಹೆಚ್ಚಿನ ಪೋಷಕಾಂಶಗಳ ಅವಶ್ಯಕತೆ ಇರುತ್ತದೆ. ಇದಕ್ಕಾಗಿ ಹಣ್ಣುಗಳನ್ನು ಹೆಚ್ಚಾಗಿ ಸೇವಿಸಲು ಹೇಳಲಾಗುತ್ತೆ. ಹಣ್ಣುಗಳು ಒಳ್ಳೆಯದಾದರೂ ಕೆಲವೊಂದು ಹಣ್ಣುಗಳು ಗರ್ಭಾವಸ್ಥೆಯಲ್ಲಿ ತಿನ್ನುವುದು ನಿಷಿದ್ಧ.
2/ 7
ಎಲ್ಲರಿಗೂ ತಿಳಿದಿರುವಂತೆ ಗರ್ಭಿಣಿಯರು ಪಪ್ಪಾಯಿ ಹಣ್ಣನ್ನು ತಿನ್ನಬಾರದು. ಇದರಿಂದ ಗರ್ಭಪಾತದ ಸಾಧ್ಯತೆಗಳು ಹೆಚ್ಚಿರುತ್ತದೆ. ಆದರೆ ಇದೊಂದೇ ಹಣ್ಣಲ್ಲ ಇನ್ನು ಕೆಲವು ಹಣ್ಣುಗಳನ್ನು ಗರ್ಭಿಣಿಯರು ಸೇವಿಸುವುದು ಅಪಾಯಕಾರಿ.
3/ 7
ಗರ್ಭಾವಸ್ಥೆಯಲ್ಲಿ ದ್ರಾಕ್ಷಿ ಮತ್ತು ಅನಾನಸ್ ತಿನ್ನಬಾರದು. ಅಕಸ್ಮಾತ್ ತಿಂದರೆ ಏನೆಲ್ಲಾ ಆಗುತ್ತೆ ಎಂದು ತಿಳಿಯಿರಿ.
4/ 7
ದ್ರಾಕ್ಷಿಯ ಬಗ್ಗೆ ಕೆಲವು ಭಿನ್ನಾಭಿಪ್ರಾಯಗಳಿವೆ. ಗರ್ಭಾವಸ್ಥೆಯಲ್ಲಿ ದ್ರಾಕ್ಷಿಯನ್ನು ತಿನ್ನಬಾರದು ಎಂದು ಕೆಲವು ವೈದ್ಯರು ಹೇಳಿದರೆ, ಇತರರು ತಿನ್ನಬಹುದು ಎಂದು ಹೇಳುತ್ತಾರೆ. ದ್ರಾಕ್ಷಿಯಲ್ಲಿನ ಕೀಟಗಳನ್ನು ಸುಲಭವಾಗಿ ಹೋಗಿಸಲು ಬೆಳೆಗಾರರು ಕೀಟನಾಶಕಗಳನ್ನು ವ್ಯಾಪಕವಾಗಿ ಬಳಸಿರುತ್ತಾರೆ.
5/ 7
ಇದು ಗರ್ಭಿಣಿ ಮತ್ತು ಹುಟ್ಟಲಿರುವ ಮಗುವಿಗೆ ಹಾನಿ ಮಾಡುತ್ತದೆ. ಮತ್ತೊಂದೆಡೆ, ದ್ರಾಕ್ಷಿಯಲ್ಲಿ ವಿಟಮಿನ್ ಎ ಮತ್ತು ಸಿ ಸಮೃದ್ಧವಾಗಿದೆ. ಇದು ಶಿಶುಗಳು ಮತ್ತು ತಾಯಂದಿರಿಗೆ ಒಳ್ಳೆಯದು. ಹಾಗಾಗಿ ವೈದ್ಯರ ಸಲಹೆ ಇಲ್ಲದೆ ದ್ರಾಕ್ಷಿಯನ್ನು ಸೇವಿಸಬೇಡಿ.
6/ 7
ಇನ್ನು ಪಪ್ಪಾಯಿ ಕಾಯಿಯಾಗಿದ್ದರೆ ಅದರಲ್ಲಿನ ಅಂಶ ಗರ್ಭಾಶಯದ ಸಂಕೋಚನವನ್ನು ಉಂಟು ಮಾಡುತ್ತದೆ. ಇದು ಗರ್ಭಪಾತದ ಸಾಧ್ಯತೆಯನ್ನು ಹೆಚ್ಚಿಸುತ್ತದೆ. ಆದರೆ ಇದರಲ್ಲಿರುವ ವಿಟಮಿನ್ ಸಿ ಮತ್ತು ಉತ್ಕರ್ಷಣ ನಿರೋಧಕಗಳು ಗರ್ಭಾವಸ್ಥೆಯಲ್ಲಿ ಆಮ್ಲೀಯತೆ ಮತ್ತು ಮಲಬದ್ಧತೆಯನ್ನು ಗುಣಪಡಿಸಲು ಸಹಾಯ ಮಾಡುತ್ತದೆ. ಆದರೂ ಇದನ್ನು ಸೇವಿಸದೇ ಇರುವುದು ಉತ್ತಮ.
7/ 7
ಅನಾನಸ್ ನಲ್ಲಿರುವ ಬ್ರೋಮೆಲಿನ್ ಗರ್ಭಕಂಠದ ಸಂಕೋಚನಕ್ಕೆ ಕಾರಣವಾಗುತ್ತದೆ. ಹೆರಿಗೆ ನೋವು ಅವಧಿಗೂ ಮುನ್ನವೇ ಕಾಣಿಸಿಕೊಳ್ಳಬಹುದು. ಮೊದಲ ತ್ರೈಮಾಸಿಕದಲ್ಲಿ ಅನಾನಸ್ ಅನ್ನು ತಪ್ಪಿಸಿ. ಹೆರಿಗೆಯ ಮೊದಲು ಮಹಿಳೆಯರು ಅನಾನಸ್ ರಸವನ್ನು ಹೆಚ್ಚಾಗಿ ಸೇವಿಸುತ್ತಾರೆ. ಇದರಿಂದ ಗರ್ಭಕಂಠವು ಸಂಕುಚಿತಗೊಳ್ಳಲು ಸುಲಭವಾಗುತ್ತದೆ.