ತಾವು ದಿನ ಇಷ್ಟಪಟ್ಟು ತಿನ್ನುತ್ತಿದ್ದ ಆಹಾರಗಳು ಬೇಡವೆನಿಸುತ್ತವೆ. ಯಾವುದೋ ವಿಚಿತ್ರ ವಸ್ತುಗಳು ಇಷ್ಟವಾಗತೊಡಗುತ್ತವೆ. ಕೆಲವರಿಗೆ ಹುಣಸೆ ಹುಳಿ, ಮಾವಿನ ಕಾಯಿ, ಜೊತೆಗೆ ಉಪ್ಪು ಸೇರಿಸಿ ತಿನ್ನುವ ಬಯಕೆ ಆದರೆ, ಮತ್ತೆ ಕೆಲವರಿಗೆ ಸಿಹಿ ತಿಂಡಿ ತಿನ್ನುವ ಬಯಕೆ, ಇನ್ನೂ ಕೆಲವರಿಗೆ ಹೊರಗೆಲ್ಲೊ ಹೋಗಿ ಮಣ್ಣು ತಿನ್ನುವಾಸೆ. ಇದು ಒಬ್ಬರಿಗೆ ಮಾತ್ರವಲ್ಲ ಹೆಚ್ಚಿನ ಗರ್ಭಿಣಿ ಮಹಿಳೆಯರ ಬಯಕೆಯಾಗಿದೆ.
ಉಪ್ಪಿನಕಾಯಿಯಲ್ಲಿ ಬಹಳಷ್ಟು ಸೋಡಿಯಂ ಮತ್ತು ಆಮ್ಲವಿದೆ, ಆದ್ದರಿಂದ ನೀವು ಹುಳಿ ತಿನ್ನಲು ಬಯಸುತ್ತೀರಿ. ಈ ಸಮಯದಲ್ಲಿ ದೇಹದಲ್ಲಿ ಸೋಡಿಯಂ ಮತ್ತು ಆಮ್ಲದ ಬೇಡಿಕೆಯೂ ಹೆಚ್ಚಾಗುತ್ತದೆ. ಹುಳಿ ಮಾತ್ರವಲ್ಲ, ಗರ್ಭಾವಸ್ಥೆಯಲ್ಲಿ ಸಿಹಿ ತಿನ್ನಲು ಬಯಸುತ್ತಾರೆ. (Disclaimer:ಈ ಲೇಖನವು ಸಾರ್ವಜನಿಕ ನಂಬಿಕೆ ಮತ್ತು ಅಂತರ್ಜಾಲದಲ್ಲಿ ಲಭ್ಯವಿರುವ ಮಾಹಿತಿಯನ್ನು ಆಧರಿಸಿದೆ . ನ್ಯೂಸ್ 18 ಇದಕ್ಕೆ ಜವಾಬ್ದಾಯಲ್ಲ)