Beauty Treatments: ಮದುವೆ ಫಿಕ್ಸ್ ಆಗಿದೆಯೇ? ಸುಂದರವಾಗಿ ಕಾಣಲು ಈ ಬ್ಯೂಟಿ ಟ್ರೀಟ್ಮೆಂಟ್ಗಳನ್ನು ಮರೆಯದಿರಿ
ಹೆಣ್ಣುಮಕ್ಕಳ ಜೀವನದಲ್ಲಿ ಮದುವೆಯ ದಿನ ಅತ್ಯಂತ ಮಹತ್ವದ ದಿನ. ಪ್ರತಿಯೊಬ್ಬ ಹುಡುಗಿಯೂ ಮದುವೆಯಲ್ಲಿ ತಾನು ಸುಂದರವಾಗಿ ಕಾಣಬೇಕೆಂದು ಬಯಸುತ್ತಾಳೆ. ಪಾರ್ಲರ್ಗಳಲ್ಲಿ ಯಾವ ಬಗೆಯ ಬ್ಯುಟಿ ಟ್ರಿಟ್ಮೆಂಟ್ ತೆಗೆದುಕೊಳ್ಳಬೇಕು ಅನ್ನೋದು ಗೊತ್ತಿರೋದಿಲ್ಲ ಅಂತವರಿಗೆ ಬೆಸ್ಟ್ ಟಿಪ್ಸ್ ಇಲ್ಲಿದೆ.
ಮದುವೆಯಲ್ಲಿ ಎಲ್ಲರ ಕಣ್ಣುಗಳು ವಧುವಿನ ಮೇಲಿರುತ್ತದೆ. ಹೀಗಾಗಿ ಸುಂದರವಾಗಿ ಕಾಣಲು ಹೆಣ್ಣು ಮಕ್ಕಳು ಮದುವೆಗೂ ಮುನ್ನ ಕೆಲವೊಂದು ಸಿಂಪಲ್ ಟ್ರೀಟ್ ಮೆಂಟ್ ಗಳನ್ನು ಮಾಡಿಸಿಕೊಳ್ಳೋದು ಉತ್ತಮ
2/ 9
ಐಬ್ರೋ ಥ್ರೆಡಿಂಗ್ : ಮದುವೆ ಅಥವಾ ಮನೆಯಲ್ಲಿ ಯಾವುದೇ ವಿಶೇಷ ಕಾರ್ಯವಾಗಲಿ ಹೆಣ್ಣು ಮಕ್ಕಳು ಐಬ್ರೋ ಥ್ರೆಡಿಂಗ್ ಮಾಡಿಕೊಳ್ತಾರೆ. ಹುಬ್ಬುಗಳು ಶೇಪ್ ಚೆನ್ನಾಗಿದ್ರೆ ನಿಮ್ಮ ಮುಖ ಮತ್ತಷ್ಟು ಸುಂದರವಾಗಿ ಕಾಣುತ್ತದೆ.
3/ 9
ಫೇಶಿಯಲ್: ಮುಖವು ಸೌಂದರ್ಯದ ಪ್ರಮುಖ ಅಂಶ. ಆದ್ದರಿಂದ ಖಂಡಿತವಾಗಿಯೂ ಮುಖಕ್ಕೆ ಹೆಚ್ಚಿನ ಕಾಳಜಿಯ ಅಗತ್ಯವಿದೆ. ಫೇಶಿಯಲ್ ಮೂಲಕ ಮುಖದ ಸೌಂದರ್ಯವನ್ನು ಮತ್ತಷ್ಟು ಹೆಚ್ಚಿಸಬಹುದು. ಒಳ್ಳೆ ಫೇಶಿಯಲ್ ಮಾಡಿಸಿಕೊಳ್ಳಿ
4/ 9
ಟೋಟಲ್ ಬಾಡಿ ಪಾಲಿಶಿಂಗ್ : ಬಾಡಿ ಪಾಲಿಶಿಂಗ್ ನಯವಾದ, ಕಾಂತಿಯುತ ಮತ್ತು ಸುಂದರ ತ್ವಚೆಗಾಗಿ ತ್ವಚೆಯನ್ನು ಎಫ್ಫೋಲಿಯೇಟ್ ಮಾಡುತ್ತದೆ. ಇದು ನಿಮ್ಮ ಚರ್ಮವನ್ನು ಹೈಡ್ರೀಕರಿಸಿ, ಫ್ರೆಶ್ ಹಾಗೂ ಕಾಂತಿಯುತವಾಗಿ ಕಾಣಲು ಸಹಕಾರಿಯಾಗಿದೆ.
5/ 9
ಫುಲ್ ಬಾಡಿ ವ್ಯಾಕ್ಸಿಂಗ್, ಫೇಸ್ ಥ್ರೆಡಿಂಗ್ ಮತ್ತು ಬಿಕಿನಿ ವ್ಯಾಕ್ಸ್ : ಫುಲ್ ಬಾಡಿ ವ್ಯಾಕ್ಸಿಂಗ್ ಅಂದ್ರೆ ಫುಲ್ ಬಾಡಿ ವ್ಯಾಕ್ಸಿಂಗ್ ಎಂದರೆ ತ್ವಚೆಯಲ್ಲಿರುವ ಅನಗತ್ಯ ಕೂದಲು, ಕೊಳೆ, ಸತ್ತ ಚರ್ಮವನ್ನು ತೆಗೆದು ಚರ್ಮವನ್ನು ಸ್ವಚ್ಛವಾಗಿ ಕ್ರಮವಾಗಿದೆ.
6/ 9
ಪೆಡಿಕ್ಯೂರ್-ಮೆನಿಕ್ಯೂರ್: ಕೈ ಮತ್ತು ಪಾದಗಳ ಸ್ವಚ್ಛತೆಯು ಮುಖ್ಯವಾಗಿದೆ. ಪೆಡಿಕ್ಯೂರ್-ಮೆನಿಕ್ಯೂರ್ ಮಾಡಿಸಿ. ಇದ್ರಿಂದ ಕೈ ಮತ್ತು ಪಾದಗಳು ಇನ್ನಷ್ಟು ಸುಂದರಗೊಳಿಸುತ್ತದೆ. ಉಗುರುಗಳಿಗೆ ಉತ್ತಮ ಆಕಾರ ನೀಡಿ ತಕ್ಕ ನೇಲ್ ಪಾಲಿಷ್ ಹಚ್ಚಿ
7/ 9
ಕೂದಲಿನ ಬಣ್ಣ: ಕೂದಲು ಇಲ್ಲದೆ ಮೇಕಪ್ ಹೇಗೆ ಪೂರ್ಣಗೊಳ್ಳುತ್ತದೆ? ಕೂದಲ ಸೌಂದರ್ಯದ ವಿಷಯಕ್ಕೆ ಬಂದರೆ ಮೊದಲು ನೆನಪಿಗೆ ಬರುವುದು ಕೂದಲಿನ ಬಣ್ಣ. ನಿಮ್ಮ ಕೂದಲನ್ನು ಕಪ್ಪು ಅಥವಾ ಇನ್ನಾವುದೇ ಬಣ್ಣದಿಂದ ಚೆಂದ ಮಾಡಬಹುದು.
8/ 9
ಟ್ಯಾನ್ ರಿಮೂವಿಂಗ್: ಟ್ಯಾನಿಂಗ್ ಎಂದರೆ ದೇಹದಿಂದ ಸನ್ ಟ್ಯಾನ್ ತೆಗೆಯುವುದು. ಇದನ್ನು ಟ್ಯಾನ್ ರಿಮು ಎಂದೂ ಕರೆಯುತ್ತಾರೆ.
9/ 9
ಉತ್ತಮ ನಿದ್ರೆ; ನಮ್ಮ ಮಾನಸಿಕ ಆರೋಗ್ಯಕ್ಕೆ ಮಾತ್ರವಲ್ಲ ಸೌಂದರ್ಯಕ್ಕೂ ನಿದ್ದೆ ಅತ್ಯಗತ್ಯ. ಹಾಗಾಗಿ ನಿಮ್ಮ ಮದುವೆ ಫಿಕ್ಸ್ ಆಗಿದ್ದರೆ ಈಗಿನಿಂದಲೇ ಬ್ಯೂಟಿ ಸ್ಲಿಪ್ ತೆಗೆದುಕೊಳ್ಳಲು ಶುರುಮಾಡಿ.