Power Saving Tips: ಈ ಸಲಹೆಯನ್ನು ಪಾಲಿಸಿದರೆ ಬೇಸಿಗೆಯಲ್ಲಿ ಅರ್ಧದಷ್ಟು ವಿದ್ಯುತ್ ಖರ್ಚು ಉಳಿಸಬಹುದು!

ಹೆಚ್ಚುತ್ತಿರುವ ಪೆಟ್ರೋಲ್, ಡೀಸೆಲ್ ಬೆಲೆ ಹಾಗೂ ವಸ್ತುಗಳ ಬೆಲೆ ಏರಿಕೆಯಿಂದ ಮಾಸಿಕ ಬಜೆಟ್ ನಿಭಾಯಿಸಲು ಪರದಾಡುತ್ತಿರುವ ನಮಗೆ ಕರೆಂಟ್ ಬಿಲ್ ಹೆಚ್ಚುವರಿ ಹೊರೆಯಾಗಲಿದೆ. ಬೇಸಿಗೆಯಲ್ಲಿ ವಿಶೇಷವಾಗಿ ಎಸಿ ಹೆಚ್ಚಿನ ವಿದ್ಯುತ್ ಅನ್ನು ಹೀರಿಕೊಳ್ಳುತ್ತದೆ. ಅದೇ ಸಮಯದಲ್ಲಿ, ಇದು ಸೂರ್ಯನನ್ನು ತಡೆದುಕೊಳ್ಳುವಷ್ಟು ತಂಪು ನೀಡುತ್ತದೆ. ಆದಾಗ್ಯೂ, ಈ ಸಲಹೆಯೊಂದಿಗೆ ನೀವು ಖಂಡಿತವಾಗಿಯೂ ವಿದ್ಯುತ್ ಉಳಿಸುವ ಮೂಲಕ ಬಿಲ್​ ಕಡಿಮೆ ಮಾಡಬಹುದು.

First published:

  • 17

    Power Saving Tips: ಈ ಸಲಹೆಯನ್ನು ಪಾಲಿಸಿದರೆ ಬೇಸಿಗೆಯಲ್ಲಿ ಅರ್ಧದಷ್ಟು ವಿದ್ಯುತ್ ಖರ್ಚು ಉಳಿಸಬಹುದು!

    ಬೇಸಿಗೆ ಬಂತೆಂದರೆ ಮನೆಯಲ್ಲಿ ಫ್ಯಾನ್, ಫ್ರಿಡ್ಜ್, ಎಸಿ, ಏರ್ ಕೂಲರ್ ನಂತಹ ತಂಪಾದ ಉಪಕರಣಗಳ ಬಳಕೆ ಹೆಚ್ಚುತ್ತದೆ. ಇದರಿಂದ ವಿದ್ಯುತ್ ಬಿಲ್ ಸಾಮಾನ್ಯಕ್ಕಿಂತ ಹೆಚ್ಚಳವಾಗಿ ಬರುತ್ತದೆ. ಪೆಟ್ರೋಲ್ ಮತ್ತು ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ಈಗಾಗಲೇ ತಿಂಗಳ ಬಜೆಟ್ ನಿಭಾಯಿಸಲು ಹೆಣಗಾಡುತ್ತಿರುವ ನಮಗೆ ಇದು ಹೆಚ್ಚುವರಿ ಹೊರೆಯಾಗಲಿದೆ.

    MORE
    GALLERIES

  • 27

    Power Saving Tips: ಈ ಸಲಹೆಯನ್ನು ಪಾಲಿಸಿದರೆ ಬೇಸಿಗೆಯಲ್ಲಿ ಅರ್ಧದಷ್ಟು ವಿದ್ಯುತ್ ಖರ್ಚು ಉಳಿಸಬಹುದು!

    ವಿಶೇಷವಾಗಿ AC ಹೆಚ್ಚಿನ ವಿದ್ಯುತ್ ಅನ್ನು ಹೀರಿಕೊಳ್ಳುವುದರಿಂದ ವಿದ್ಯುತ್ ಬಿಲ್ ಹೆಚ್ಚಾಗಿ ಬರುತ್ತದೆ. ಆದರೆ ಈ ಸಮಯದಲ್ಲಿ AC ಅನ್ನು16 ಡಿಗ್ರಿಯ ಬದಲು 24 ಡಿಗ್ರಿಯಲ್ಲಿ ಹಾಕಿದರೆ ನಿಮಗೆ ಬೇಕಾದ ಕೂಲಿಂಗ್ ಸಿಗುತ್ತದೆ. ಅದೇ ಸಮಯದಲ್ಲಿ ವಿದ್ಯುತ್ ಬಿಲ್ ಕೂಡ ಕಡಿಮೆಯಾಗುತ್ತದೆ

    MORE
    GALLERIES

  • 37

    Power Saving Tips: ಈ ಸಲಹೆಯನ್ನು ಪಾಲಿಸಿದರೆ ಬೇಸಿಗೆಯಲ್ಲಿ ಅರ್ಧದಷ್ಟು ವಿದ್ಯುತ್ ಖರ್ಚು ಉಳಿಸಬಹುದು!

    ಮನೆಯಲ್ಲಿ ವಿವಿಧ ಬಲ್ಬ್​ಗಳನ್ನು ಬಳಸುತ್ತಿರಬಹುದು. ಆದರೆ, ಅವೆಲ್ಲಕ್ಕಿಂತ LED ಬಲ್ಬ್ ಗಳು ಬಳಕೆ ಉತ್ತಮಾಗಿರುತ್ತದೆ. ಇತರೆ ಬಲ್ಬ್ ಗಳಿಗಿಂತ ಶೇ.90ರಷ್ಟು ಕಡಿಮೆ ವಿದ್ಯುತ್ ನ್ನು ಇದು ಬಳಸುತ್ತದೆ. ಆದ್ದರಿಂದ ಮನೆಯ LED ಬಲ್ಬ್‌ಗಳ ಬಳಕೆಗೆ ಆದ್ಯತೆ ನೀಡಿ.

    MORE
    GALLERIES

  • 47

    Power Saving Tips: ಈ ಸಲಹೆಯನ್ನು ಪಾಲಿಸಿದರೆ ಬೇಸಿಗೆಯಲ್ಲಿ ಅರ್ಧದಷ್ಟು ವಿದ್ಯುತ್ ಖರ್ಚು ಉಳಿಸಬಹುದು!

    ಹೆಚ್ಚಾಗಿ ನಾವು ಟಿವಿ ಅನ್ನು ರಿಮೋಟ್​ನಲ್ಲಿ ಆಫ್ ಮಾಡುತ್ತೇವೆ, ಅಂತೆಯೇ ಮೊಬೈಲ್ ಚಾರ್ಜರ್ ಅನ್ನು ಸಹ ಫೊನ್ ಚಾರ್ಜ್ ಆದ ಬಳಿಕೆ ಸ್ವಿಚ್​ ತೆಗೆಯದೆನೇ ಹಾಗೆಯೇ ಬಿಟ್ಟಿರುತ್ತೇವೆ. ಇದರಿಮದ ಸ್ವಲ್ಪ ಪ್ರಮಾಣದ ವಿದ್ಯುತ್ ಬಿಲ್​ ಹೆಚ್ಚಳವಾಗುವ ಸಾಧ್ಯತೆಗಳಿರುತ್ತದೆ. ಆದರೆ ಇವುಗಳನ್ನು ಸರಿಯಾದ ರೀತಿಯಲ್ಲಿ ಆಫ್​ ಮಾಡಿದ್ದಲ್ಲಿ ವಿದ್ಯುತ್ ಬಿಲ್‌ನ ಶೇಕಡಾ 5ರಷ್ಟು ಉಳಿಸಬಹುದಾಗಿದೆ.

    MORE
    GALLERIES

  • 57

    Power Saving Tips: ಈ ಸಲಹೆಯನ್ನು ಪಾಲಿಸಿದರೆ ಬೇಸಿಗೆಯಲ್ಲಿ ಅರ್ಧದಷ್ಟು ವಿದ್ಯುತ್ ಖರ್ಚು ಉಳಿಸಬಹುದು!

    ನಿಮ್ಮ AC ಯುನಿಟ್ ನೆರಳಿನಲ್ಲಿ ಇರಬೇಕು: ಹೊರಾಂಗಣ AC ಹೊರಾಂಗಣ ಘಟಕವು ನೇರ ಸೂರ್ಯನ ಬೆಳಕಿನಲ್ಲಿದ್ದರೆ ಸ್ವಲ್ಪ ಹೆಚ್ಚು ವಿದ್ಯುತ್ ಬಳಸುತ್ತದೆ. ನೆರಳು ನೀಡಲು ಸುತ್ತಲೂ ಮರವನ್ನು ಬೆಳೆಸಿದರೆ ಸ್ವಲ್ಪ ಲಾಭವಿದ್ದು, ಬಿಲ್ ಸಹ ಕಡಿಮೆ ಬರುತ್ತದೆ. 

    MORE
    GALLERIES

  • 67

    Power Saving Tips: ಈ ಸಲಹೆಯನ್ನು ಪಾಲಿಸಿದರೆ ಬೇಸಿಗೆಯಲ್ಲಿ ಅರ್ಧದಷ್ಟು ವಿದ್ಯುತ್ ಖರ್ಚು ಉಳಿಸಬಹುದು!

    ಸ್ವಯಂಚಾಲಿತ ಹೀಟ್ ಕಟ್ ಆಫ್ ವೈಶಿಷ್ಟ್ಯವನ್ನು ಹೊಂದಿರುವ ಐರನ್ ಬಾಕ್ಸ್ ಅನ್ನು ಖರೀದಿಸಿದರೆ, ನೀವು ವಿದ್ಯುತ್ ಬಿಲ್‌ನಲ್ಲಿ ಸ್ವಲ್ಪ ಉಳಿಸಬಹುದು. ಬಟ್ಟೆಗಳು ಒಣಗಿದ ಮೇಲೆ ಇಸ್ತ್ರಿ ಮಾಡಿದರೆ ಉತ್ತಮ ರೀತಿಯಲ್ಲಿ ಇಸ್ತ್ರಿಯಾಗುತ್ತದೆ ಮತ್ತು ಈ ಮೂಲಕ ವಿದ್ಯುತ್ ಉಳಿತಾಯವಾಗುತ್ತದೆ.

    MORE
    GALLERIES

  • 77

    Power Saving Tips: ಈ ಸಲಹೆಯನ್ನು ಪಾಲಿಸಿದರೆ ಬೇಸಿಗೆಯಲ್ಲಿ ಅರ್ಧದಷ್ಟು ವಿದ್ಯುತ್ ಖರ್ಚು ಉಳಿಸಬಹುದು!

    ಫ್ರಿಡ್ಜ್ ಇಡುವ ಜಾಗದಲ್ಲಿ ಚನ್ನಾಗಿ ಗಾಳಿ ಆಡುತ್ತಿದ್ದರೆ ಬೇಗ ಫ್ರಿಡ್ಜ್ ತಂಪಾಗುತ್ತದೆ. ಇದರಿಂದ ವಿದ್ಯುತ್ ಬಳಕೆ ಕಡಿಮೆ ಸಾಕಾಗುತ್ತದೆ. ಹಾಗಾಗಿ ಚೆನ್ನಾಗಿ ಗಾಳಿ ಇರುವ ಪ್ರದೇಶದಲ್ಲಿ ಫ್ರಿಡ್ಜ್ ಇರಿಸಿ.

    MORE
    GALLERIES