Potato chips: ಬಾಯಿ ರುಚಿಸುವ ಆಲೂಗಡ್ಡೆ ಚಿಪ್ಸ್ ಎಷ್ಟು ಡೇಂಜರ್ ಗೊತ್ತಾ? ಮಕ್ಕಳಿಗೆ ಕೊಡೋ ಮುನ್ನ ಯೋಚಿಸಿ!
ಆಲೂಗಡ್ಡೆ ಚಿಪ್ಸ್ ಅಂದ್ರೆ ಯಾರಿಗೆ ತಾನೇ ಇಷ್ಟ ಇಲ್ಲ ಹೇಳಿ? ಎಲ್ಲರಿಗೂ ಇಷ್ಟ. ಮೊಮ್ಮಕ್ಕಳಿಂದ ಹಿಡಿದು ಅಜ್ಜಿಯ ತನಕ ಈ ಚಿಪ್ಸ್ ಎಲ್ಲರಿಗೂ ಬೇಕು. ಆದ್ರೆ ಇದು ಎಷ್ಟು ಡೇಂಜರ್ ಅಂತ ನೋಡಿ.
ನಾವು ಯಾವಾಗಲೂ ಆರೋಗ್ಯಕ್ಕಿಂತ ಬಾಯಿ ರುಚಿಯನ್ನು ನೋಡುತ್ತೇವೆ. ಇರುವಷ್ಟು ದಿನ ಚೆನ್ನಾಗಿ ತಿಂದು ಮಜಾ ಮಾಡಬೇಕು ಅಂದುಕೊಳ್ತೇವೆ. ತಿನ್ನುವುದರಲ್ಲೂ ಆರೋಗ್ಯವಾದದ್ದನ್ನೇ ತಿನ್ನಿ ಎನ್ನುವುದು ವೈದ್ಯರ ಸಲಹೆ.
2/ 8
ಆಲೂಗಡ್ಡೆ ಚಿಪ್ಸ್ ಅಂದ್ರೆ ಮನೆಯಲ್ಲಿ ತಿನ್ನಲು ಎಲ್ಲರೂ ಒಂದು ಹೆಜ್ಜೆ ಮುಂದೆ ಇರ್ತಾರೆ. ಎಲ್ಲರೂ ತಮಗೆ ಬೇಕು. ತಮಗೆ ಬೇಕು ಎಂದು ಹೇಳ್ತಾರೆ.
3/ 8
ಅದರಲ್ಲೂ ಪುಟ್ಟ ಮಕ್ಕಳ ಕಣ್ಣಿಗೆ ಚಿಪ್ಸ್ ಬಿದ್ರೆ ಮುಗೀತು, ಅದನ್ನು ತಿಂದು ಖಾಲಿ ಮಾಡುವವರೆಗೂ ಅವರಿಗೆ ಸಮಾಧಾನ ಇರಲ್ಲ. ಚಿಪ್ಸ್ ಆ ರೀತಿ ಮೋಡಿ ಮಾಡಿದೆ.
4/ 8
ಆದ್ರೆ ಆಲೂಗಡ್ಡೆ ಚಿಪ್ಸ್ ತುಂಬಾ ಡೇಂಜರ್. ಆಲೂಗಡ್ಡೆ ಚಿಪ್ಸ್ ಉಪ್ಪು ಮತ್ತು ಕೊಬ್ಬು ಎನ್ನುವ ಎರಡು ಅಂಶಗಳನ್ನು ಹೊಂದಿದೆ. ಇವೆರಡು ನಮ್ಮ ದೇಹಕ್ಕೆ ಒಳ್ಳೆಯದಲ್ಲ ಎಂದು ನಮಗೆ ಗೊತ್ತಿದೆ.
5/ 8
ಉಪ್ಪಿರುವ ಆಲೂಗಡ್ಡೆ ಚಿಪ್ಸ್ ತಿಂದ್ರೆ, ನಮ್ಮ ದೇಹದಲ್ಲಿನ ಡೋಪಮೈನ್ ಹಾರ್ಮೋನಿನ ಉತ್ಪತ್ತಿಯನ್ನು ಪ್ರಚೋದಿಸಿ, ನಮ್ಮ ಮೆದುಳು ಆಹ್ಲಾದಕರ ಅನುಭವ ಹೊಂದುವಂತೆ ಮಾಡುತ್ತೆ. ಅದಕ್ಕೆ ನಾವು ಮತ್ತೆ ಮತ್ತೆ ಚಿಪ್ಸ್ ತಿನ್ನುತ್ತೇವೆ.
6/ 8
100 ಗ್ರಾಂ ಚಿಪ್ಸ್ ನಲ್ಲಿ 500 ಕ್ಯಾಲೋರಿಗಳು ಇರುತ್ತೆ. ಇದು ನಮ್ಮ ದೇಹಕ್ಕೆ ಹಾನಿಯನ್ನುಂಟು ಮಾಡುತ್ತೆ. ಒಂದೇ ಒಂದು ಔನ್ಸು ಚಿಪ್ಸ್ ನಲ್ಲಿ 10 ಗ್ರಾಮ್ ನಷ್ಟು ಕೊಬ್ಬು, 1.1 ಎಂಜಿ ಕೊಲೆಸ್ಟ್ರಾಲ್, 136 ಎಂಜಿ ಸೋಡಿಯಂ ಹೊಂದಿರುತ್ತದೆ.
7/ 8
ಅದಕ್ಕೆ ಆದಷ್ಟು ನೀವು ಚಿಪ್ಸ್ ತಿನ್ನುವುದನ್ನು ನಿಯಂತ್ರಣ ಮಾಡಿ. ಆಗ ನಿಮ್ಮ ಆರೋಗ್ಯದ ಮೇಲೆ ಯಾವುದೇ ಕೆಟ್ಟ ಪರಿಣಾಮ ಬೀರಲ್ಲ. ಸಂತೋಷದ ಜೀವನ ಕಳೆಯಬಹುದು.
8/ 8
ಅದರಲ್ಲೂ ಮಕ್ಕಳಿಗೆ ಚಿಪ್ಸ್ ಕೊಡುವ ಮೊದಲು ನೂರು ಬಾರಿ ಯೋಚನೆ ಮಾಡಿ. ಅದು ಮಕ್ಕಳ ಆರೋಗ್ಯದ ಮೇಲೂ ಗಂಭೀರ ಸಮಸ್ಯೆ ಉಂಟು ಮಾಡುತ್ತೆ.