Skin Care Tips: ಈ ತರಕಾರಿ ಅಡುಗೆಗೆ ಮಾತ್ರ ಅಲ್ಲ, ನಿಮ್ಮ ಸೌಂದರ್ಯ ಹೆಚ್ಚಿಸಲೂ ಸಹಕಾರಿ
Potato Benefits for Skin: ಪ್ರತಿಯೊಬ್ಬರೂ ಸುಂದರವಾಗಿ ಕಾಣಬೇಕೆಂದು ಬಯಸುತ್ತಾರೆ. ಅದಕ್ಕಾಗಿ ಹಲವಾರು ಬ್ಯೂಟಿ ಟಿಪ್ಸ್ ಫಾಲೋ ಮಾಡುತ್ತಾರೆ. ಕೆಲವೊಮ್ಮೆ ಸಮಯವಿಲ್ಲದ ಕಾರಣ ತ್ವಚೆಯ ಆರೈಕೆ ಮಾಡಲು ಆಗುವುದಿಲ್ಲ. ನಿಮ್ಮ ತ್ವಚೆಯ ಸೌಂದರ್ಯವನ್ನು ಇಮ್ಮಡಿಗೊಳಿಸಲು ಇಲ್ಲೊಂದು ಸುಲಭ ಮಾರ್ಗವಿದೆ.
ಹುಡುಗಿಯರು ಸುಂದರವಾಗಿ ಕಾಣಬೇಕೆಂದು ಬಯಸುತ್ತಾರೆ. ಅದಕ್ಕಾಗಿ ಹಲವು ಪ್ರಯತ್ನಗಳನ್ನು ಮಾಡುತ್ತಾರೆ. ಮುಖ ಸುಂದರವಾಗಿ ಕಾಣಲು ಬಗೆಬಗೆಯ ಕ್ರೀಮ್ ಗಳನ್ನು ಬಳಸುತ್ತಾರೆ. ಸೌಂದರ್ಯವನ್ನು ಹೆಚ್ಚಿಸಲು ಸಿಕ್ಕ ಸಿಕ್ಕ ಕ್ರೀಮ್ ಬಳಸುವ ಬದಲು ಮನೆಯಲ್ಲಿಯೇ ಕೆಲ ವಸ್ತುಗಳನ್ನು ಬಳಸಬಹುದು.
2/ 8
ನಿಮ್ಮ ಚರ್ಮವನ್ನು ತಾಜಾವಾಗಿಡಲು ಆರೈಕೆ ಮಾಡುವುದು ಅತ್ಯಗತ್ಯ. ವಿಶೇಷವಾಗಿ ಚಳಿಗಾಲದಲ್ಲಿ ಚರ್ಮದ ಆರೈಕೆ ಬಹಳ ಮುಖ್ಯ. ನಮ್ಮ ಅಡುಗೆಮನೆಯಲ್ಲಿ ನಮ್ಮ ಸೌಂದರ್ಯವನ್ನು ಇಮ್ಮಡಿಗೊಳಿಸುವ ಹಲವಾರು ವಸ್ತುಗಳಿದ್ದು, ಅದರ ಬಗ್ಗೆ ನಮಗೆ ತಿಳಿದಿರುವುದಿಲ್ಲ.
3/ 8
ಆದರೆ ಮದುವೆ, ಫಂಕ್ಷನ್, ಪಾರ್ಟಿಗಳಿಗೆ ಹೋಗುವಾಗ ನಮ್ಮ ತ್ವಚೆಯು ಕ್ಷಣಮಾತ್ರದಲ್ಲಿ ಹೊಳೆಯಬೇಕೆಂದರೆ ಆಲೂಗಡ್ಡೆ ಮತ್ತು ಮೆಂತ್ಯದ ಈ ಫೇಸ್ ಪ್ಯಾಕ್ ಮಾಡಿ ನೋಡಿ, ಕೆಲವೇ ಕ್ಷಣಗಳಲ್ಲಿ ನಮ್ಮ ಮುಖದ ಅಂದ ಹೆಚ್ಚಾಗುತ್ತದೆ.
4/ 8
ಒಂದು ಮಿಕ್ಸಿ ಜಾರ್ ತೆಗೆದುಕೊಂಡು ಅದರಲ್ಲಿ ಎರಡು ಚಮಚ ಮೆಂತ್ಯೆಯನ್ನು ಹಾಕಿ ಚೆನ್ನಾಗಿ ರುಬ್ಬಿಕೊಳ್ಳಿ. ನೀವು ಮೆಂತ್ಯೆಯನ್ನು ನೆನಸಿ ಬಳಸುವುದು ಹೆಚ್ಚು ಪ್ರಯೋಜನ ನೀಡುತ್ತದೆ. ಈ ಮೆಂತ್ಯೆ ಪೇಸ್ಟ್ ಮಾಡಿಕೊಂಡು ಇಟ್ಟುಕೊಳ್ಳಿ.
5/ 8
ನಂತರ ಆಲೂಗಡ್ಡೆಯ ಸಿಪ್ಪೆಯ ತೆಗೆದುಹಾಕಿ, ಅದನ್ನು ನೀರಿನಲ್ಲಿ ಚೆನ್ನಾಗಿ ತೊಳೆದು ಸಣ್ಣ ತುಂಡುಗಳಾಗಿ ಕತ್ತರಿಸಿಕೊಳ್ಳಿ. ಈ ತುಂಡುಗಳನ್ನು ಮಿಕ್ಸಿ ಜಾರ್ ಗೆ ಹಾಕಿ ತುಂಬಾ ನುಣ್ಣಗೆ ರುಬ್ಬಿಕೊಳ್ಳಿ. ನಂತರ ರುಬ್ಬಿದ ಮಿಶ್ರಣದಿಂದ ಆಲೂಗೆಡ್ಡೆ ರಸವನ್ನು ಬೇರ್ಪಡಿಸಬೇಕು.
6/ 8
ಈಗ ಒಂದು ಬೌಲ್ ತೆಗೆದುಕೊಂಡು ಅದರಲ್ಲಿ ಎರಡು ಚಮಚ ಮೆಂತ್ಯೆ ಪೇಸ್ಟ್ ಹಾಕಿ. ಒಂದು ಚಮಚ ಮೊಸರನ್ನು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ. ಅದರ ನಂತರ ಅರ್ಧ ಚಮಚ ಅರಿಶಿನ, ಒಂದು ಚಮಚ ಗ್ರೀನ್ ಟೀ ಪುಡಿ ಮತ್ತು ಆಲೂಗಡ್ಡೆ ರಸವನ್ನು ಸೇರಿಸಿ ಮತ್ತೆ ಚೆನ್ನಾಗಿ ಮಿಶ್ರಣ ಮಾಡಿ.
7/ 8
ಈ ಮಿಶ್ರಣವನ್ನು ಮುಖದ ಮೇಲೆ ದಪ್ಪವಾಗಿ ಹಚ್ಚಿ ಇಪ್ಪತ್ತರಿಂದ ಮೂವತ್ತು ನಿಮಿಷಗಳ ಕಾಲ ಒಣಗಲು ಬಿಡಿ. ಅದು ಸಂಪೂರ್ಣವಾಗಿ ಒಣಗಿದ ನಂತರ, ಸ್ವಲ್ಪ ನಿಧಾನವಾಗಿ ಮುಖದ ಮೇಲೆ ಸ್ಕ್ರಬ್ ಮಾಡಿ. 2 ನಿಮಿಷ ಸ್ಕ್ರಬ್ ಮಾಡಿ , ನಂತರ ತಣ್ಣನೆಯ ನೀರಿನಂದ ಮುಖ ತೊಳೆಯಿರಿ.
8/ 8
ಹೀಗೆ ಮಾಡುವುದರಿಂದ ತ್ವಚೆಯ ಮೇಲೆ ಸಂಗ್ರಹವಾಗಿರುವ ಎಲ್ಲಾ ಡೆಡ್ ಸ್ಕಿನ್ ಸುಲಭವಾಗಿ ನಿವಾರಣೆಯಾಗುತ್ತದೆ. ಇದಲ್ಲದೆ, ಚರ್ಮವು ತುಂಬಾ ಪ್ರಕಾಶಮಾನವಾಗಿ ಹೊಳೆಯುತ್ತದೆ. ಈ ಸರಳ ಸಲಹೆಯಿಂದ ನೀವು ನಿಮ್ಮ ಸೌಂದರ್ಯವನ್ನು ಹೆಚ್ಚಿಸಿಕೊಳ್ಳಬಹುದು.