ಹಣ್ಣುಗಳು ಮತ್ತು ತರಕಾರಿಗಳು ಪೋಷಕಾಂಶಗಳು ಹಾಗೂ ಉತ್ಕರ್ಷಣ ನಿರೋಧಕಗಳಲ್ಲಿ ಸಮೃದ್ಧವಾಗಿವೆ. ಇವುಗಳಲ್ಲಿ ದಾಳಿಂಬೆ ಪ್ರಮುಖವಾದುದು. ಯಾವುದೇ ಆರೋಗ್ಯ ಸಮಸ್ಯೆಗೆ ದಾಳಿಂಬೆ ಅತ್ಯುತ್ತಮ ಹಣ್ಣು. ದಾಳಿಂಬೆಯನ್ನು ತಿನ್ನುವುದರಿಂದ ಹೃದಯದ ಆರೋಗ್ಯದಿಂದ ಹಿಡಿದು ಜೀರ್ಣಕ್ರಿಯೆಯವರೆಗೆ ಎಲ್ಲಾ ಪ್ರಯೋಜನಗಳನ್ನು ಪಡೆಯಬಹುದು. ದಾಳಿಂಬೆ ರಸವು ಅತ್ಯುತ್ತಮವಾದ ನೈಸರ್ಗಿಕ ಹಣ್ಣಿನ ರಸವಾಗಿದ್ದು, ಇದು ಅನೇಕ ಆರೋಗ್ಯ ಪ್ರಯೋಜನಗಳನ್ನು ನೀಡುತ್ತದೆ.
ಅನೇಕ ಮಂದಿ ಸಕ್ಕರೆ ಪಾನೀಯಗಳಾದ ಸೋಡಾ, ತಂಪು ಪಾನೀಯಗಳು ಮತ್ತು ಪ್ಯಾಕೇಜ್ ಮಾಡಿದ ಹಣ್ಣಿನ ಜ್ಯೂಸ್ಗಳಿಗೆ ವ್ಯಸನಿಯಾಗಿದ್ದಾರೆ. ಇದು ಸಕ್ಕರೆಯನ್ನು ಮಾತ್ರವಲ್ಲದೇ ಹೆಚ್ಚಿನ ಪ್ರಮಾಣದ ಸಂರಕ್ಷಕಗಳನ್ನು ಹೊಂದಿರುತ್ತದೆ. ಇವುಗಳನ್ನು ಪ್ರತಿನಿತ್ಯ ಸೇವಿಸುವುದರಿಂದ ದೇಹದಲ್ಲಿ ಒಂದು ರೀತಿಯ ಕೊಬ್ಬು ಸಂಗ್ರಹವಾಗುತ್ತದೆ. ಆದರೆ ಪ್ರತಿದಿನ ಬೆಳಗಿನ ಉಪಾಹಾರದೊಂದಿಗೆ ದಾಳಿಂಬೆ ಜ್ಯೂಸ್ ಕುಡಿಯುವುದರಿಂದ ದೇಹಕ್ಕೆ ಸಾಕಷ್ಟು ಮೆಗ್ನೀಸಿಯಮ್, ಪೊಟ್ಯಾಸಿಯಮ್, ಕ್ಯಾಲ್ಸಿಯಂ, ಕಬ್ಬಿಣಾಂಶ ಮತ್ತು ವಿಟಮಿನ್ ಸಿ ದೊರೆಯುತ್ತದೆ.