Travel Places: ಹೊಸ ವರ್ಷಕ್ಕೆ ಈ ಸ್ಥಳಗಳಿಗೆ ಭೇಟಿ ನೀಡಿ, ಅದ್ಧೂರಿಯಾಗಿ ಆಚರಿಸಿ
Places To Celebrate New Year: ಹೊಸವರ್ಷ ಹೊಸ್ತಿಲಲ್ಲಿದೆ, ಈಗಾಗಲೇ ಪ್ರವಾಸ ಪ್ರಿಯರು ಯಾವ ಸ್ಥಳದಲ್ಲಿ ಹೊಸವರ್ಷವನ್ನು ಬರಮಾಡಿಕೊಳ್ಳುವುದು ಎನ್ನುವ ಪ್ಲ್ಯಾನ್ ಮಾಡ್ತಿದ್ದರೆ. ಭಾರತದ ಹಲವಾರು ಸ್ಥಳಗಳಲ್ಲಿ ಹೊಸವರ್ಷವನ್ನು ಅದ್ಧೂರಿಯಾಗಿ ಆಚರಣೆ ಮಾಡಲಾಗುತ್ತದೆ. ಆ ಸ್ಥಳಗಳು ಯಾವುವು ಎಂಬುದು ಇಲ್ಲಿದೆ.
ಮನಾಲಿ ಹಿಮಾಚಲ ಪ್ರದೇಶದ ಈ ಸುಂದರ ಸ್ಥಳ ಹೊಸವರ್ಷದ ಆಚರಣೆಗೆ ಹೆಸರುವಾಸಿಯಾಗಿದೆ. ಇಲ್ಲಿ ವಿವಿಧ ರೀತಿಯ ಪಾರ್ಟಿಗಳು, ವಿಶೇಷ ಕಾರ್ಯಕ್ರಮಗಳು ನಡೆಯುತ್ತದೆ. ನೀವು ಇಲ್ಲಿಗೆ ನಿಮ್ಮ ಸಂಗಾತಿ ಜೊತೆ ಹೋದರೆ ಹೆಚ್ಚು ಆಫರ್ಗಳು ಇರುತ್ತದೆ.
2/ 8
ಕಸೋಲ್: ನದಿಯ ಕಣಿವೆಯ ಪಕ್ಕದಲ್ಲಿರುವ ಈ ಪುಟ್ಟ ಗ್ರಾಮದಲ್ಲಿ ಹೊಸವರ್ಷವನ್ನು ಆಚರಿಸುವುದು ನಿಜಕ್ಕೂ ಒಂದು ಸುಂದರ ಅನುಭವ ನೀಡುತ್ತದೆ. ಇದು ಸ್ನೇಹಿತರ ಜೊತೆಗೆ ನೀವು ಎಂಜಾಯ್ ಮಾಡಲು ಸೂಕ್ತವಾದ ಸ್ಥಳ.
3/ 8
ಗೋವಾ: ಈ ಬೀಚ್ ಪ್ಲೇಸ್ ಗೋವಾದ ಬಗ್ಗೆ ನಾವು ಹೆಚ್ಚು ಹೇಳುವ ಅವಶ್ಯಕತೆ ಇಲ್ಲ. ಇದು ಪಾರ್ಟಿಗಳಿಗೆ ಹೆಸರುವಾಸಿಯಾಗಿದೆ. ಈ ಸಮಯದಲ್ಲಿ ಕ್ರಿಸ್ಮಸ್ ಮತ್ತು ಹೊಸವರ್ಷದ ಪಾರ್ಟಿಗಳು ಭರ್ಜರಿಯಾಗಿ ನಡೆಯುತ್ತದೆ.
4/ 8
ಪುಷ್ಕರ್: ಶ್ರೀಮಂತ ಸಾಂಸ್ಕೃತಿಕ ಪರಂಪರೆ ಮತ್ತು 52 ಸುಂದರ ಘಾಟ್ಗಳಿಂದ ಆವೃತವಾಗಿದ್ದು, ನಿಮ್ಮ ಒತ್ತಡದ ಜೀವನದಿಂದ ರಿಲ್ಯಾಕ್ಸ್ ಆಗಿರಲು ಈ ಸ್ಥಳ ಸೂಕ್ತ ಎನ್ನಲಾಗುತ್ತದೆ.
5/ 8
ಜೈಸಲ್ಮೇರ್: ಈ ಮರಳುಗಾಡಿನ ನಾಡಿನಲ್ಲಿ ಹೊಸವರ್ಷ ಆಚರಿಸುವುದರ ಮಜಾವೇ ಬೇರೆ. ಭಾರತದ ಗೋಲ್ಡನ್ ಸಿಟಿ ಕೇವಲ ಅತ್ಯಾಕರ್ಷಕ ಮಾತ್ರವಲ್ಲದೇ , ಇಲ್ಲಿ ಹೊಸವರ್ಷದ ಸಮಯದಲ್ಲಿ ನಡೆಯುವ ಪಾರ್ಟಿ ಸಹ ವಿಭಿನ್ನ. ಈಗಲೇ ಪಾರ್ಟಿಗೆ ಟಿಕೆಟ್ ಬುಕ್ ಮಾಡಿ,
6/ 8
ಉದಯಪುರ: ಉದಯಪುರದಲ್ಲಿ ಒಂದು ಸುಂದರ ಸಂಜೆಯನ್ನು ಅನುಭವಿಸುವುದು ಯಾವುದೇ ಸ್ವರ್ಗಕ್ಕೂ ಕಡಿಮೆ ಇಲ್ಲ. ಫತೇ ಸಾಗರ್ ಅಥವಾ ಪಿಚೋಲಾ ಸರೋವರದ ಬಳಿ ಹೊಸವರ್ಷವನ್ನು ಆಚರಿಸುವುದನ್ನು ಮಿಸ್ ಮಾಡಿಕೊಳ್ಳಿ.
7/ 8
ಜೈಪುರ: ಹೊಸವರ್ಷಕ್ಕೆ ರಾಯಲ್ ಟಚ್ ಕೊಡಲು ನೀವು ಈ ಜೈಪುರಕ್ಕೆ ಹೋಗಬಹುದು. ನಹರ್ಗಡ್ ಕೋಟೆ ಮತ್ತು ಜಲ್ ಮಹಲ್ ಹೀಗೆ ಇಲ್ಲಿ ನಿಮಗೆ ನೋಡಲು ಹಲವಾರು ಸ್ಥಳಗಳಿವೆ.
8/ 8
ಗೋಕರ್ಣ: ಗೋವಾದ ರೀತಿಯೇ ಕರ್ನಾಟಕದಲ್ಲಿ ಬೀಚ್ಗಳಿಗೆ ಫೇಮಸ್ ಎಂದರೆ ಗೋಕರ್ಣ. ಹೊಸವರ್ಷವನ್ನು ಈ ಸುಂದರ ಸ್ಥಳದಲ್ಲಿ ಆಚರಿಸಬಹುದು. ಇಲ್ಲಿ ಕೇವಲ ಬೀಚ್ ಮಾತ್ರವಲ್ಲದೇ ದೇವಸ್ಥಾನ ಸಹ ಇದ್ದು, ಹೊಸವರ್ಷ ಆಚರಣೆಗೆ ಬೆಸ್ಟ್ ಪ್ಲೇಸ್ ಇದು ಎನ್ನಬಹುದು.