ಇವುಗಳ ಪಟ್ಟಿಯಲ್ಲಿ ಪಿಸ್ತಾ ಕೂಡ ನಿದ್ರೆಯ ಸಮಸ್ಯೆಗಳಿಗೆ ಪರಿಹಾರವಾಗಿದೆ. ಪಿಸ್ತಾ ಸೇವಿಸುವುದರಿಂದ ಉತ್ತಮವಾದ ನಿದ್ರೆ ಪಡೆಯಬಹುದು ಎಂದು ಸಾಬೀತಾಗಿದೆ. ಅದರಂತೆ, ಪ್ರಸಿದ್ಧ ಆಯುರ್ವೇದ ತಜ್ಞ ದಿಕ್ಸಾ ಭಾವಸರ್ ಸವಲಿಯಾ ಅವರು ತಮ್ಮ ಇನ್ಸ್ಟಾಗ್ರಾಮ್ನಲ್ಲಿ ಪಿಸ್ತಾ ಸೇವಿಸುವುದರಿಂದ ರಾತ್ರಿ ಚೆನ್ನಾಗಿ ನಿದ್ರೆ ಬರುತ್ತದೆ ಎಂದು ತಿಳಿಸಿದ್ದಾರೆ. ಪಿಸ್ತಾದಲ್ಲಿ ಮೆಲಟೋನಿನ್ ಅಧಿಕವಾಗಿದ್ದು, ಈ ಹಿನ್ನೆಲೆ ಉತ್ತಮ ನಿದ್ರೆ ಮಾಡಲು ಸಹಾಯಕವಾಗಿವೆ ಎಂದು ತಮ್ಮ ಇನ್ಸ್ಟಾಗ್ರಾಮ್ನಲ್ಲಿ ಪೋಸ್ಟ್ ಮಾಡಿದ್ದಾರೆ.
ಪಿಸ್ತಾ ನಿಮಗೆ ಬೇಗ ನಿದ್ರೆ ಬರಲು ಸಹಾಯಕವಾಗಿದೆ. ನಿದ್ರೆಯ ಗುಣಮಟ್ಟವನ್ನು ಸುಧಾರಿಸುವುದರ ಜೊತೆಗೆ, ಎಲ್ಲಾ ದೈಹಿಕ, ಮಾನಸಿಕ-ಆರೋಗ್ಯ ಮತ್ತು ಸ್ವಯಂ ನಿರೋಧಕ ಅಸ್ವಸ್ಥತೆಗಳನ್ನು ಗುಣಪಡಿಸಲು ಇದು ಪಿಸ್ತಾ ಅತ್ಯಂತ ಮುಖ್ಯ ಪಾತ್ರ ವಹಿಸುತ್ತದೆ ಎಂದು ಹೇಳಲಾಗುತ್ತದೆ. ಅಲ್ಲದೇ ಪ್ರತಿದಿನ ಮಿತವಾಗಿ ಪಿಸ್ತಾ ತಿನ್ನುವುದರಿಂದ ನಮ್ಮ ದೇಹಕ್ಕೆ ಮೆಗ್ನೀಸಿಯಮ್ ಮತ್ತು ವಿಟಮಿನ್ ಬಿ 6 ದೊರೆಯುತ್ತದೆ ಎಂದು ಕೂಡ ಬಹಿರಂಗಪಡಿಸಿದ್ದಾರೆ. ಮೆಗ್ನೀಸಿಯಮ್ ನಮಗೆ ನಿದ್ರಿಸಲು ಸಹಾಯ ಮಾಡುತ್ತದೆ. ವಿಟಮಿನ್ B6 GABA, ಟ್ರಿಪ್ಟೊಫಾನ್ ಮತ್ತು ಸಿರೊಟೋನಿನ್ ಸಂಶ್ಲೇಷಣೆಯಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತದೆ, ಇವೆಲ್ಲವೂ ನಿದ್ರೆಯ ಮೇಲೆ ಪರಿಣಾಮ ಬೀರುತ್ತವೆ.
ಟ್ರಿಪ್ಟೊಫಾನ್ ಒಂದು ಅಮೈನೋ ಆಮ್ಲವಾಗಿದ್ದು, ಸಿರೊಟೋನಿನ್ ಉತ್ಪಾದನೆಯಲ್ಲಿ ಪಾತ್ರವಹಿಸುತ್ತದೆ. ಇದು ನಮ್ಮ ಮನಸ್ಥಿತಿಯನ್ನು ಬಲವಾಗಿಡಲು ಸಹಾಯ ಮಾಡುವ "ಸಂತೋಷದ ಹಾರ್ಮೋನ್". ಅದೇ ರೀತಿ ಆಯುರ್ವೇದದ ಪ್ರಕಾರ ಆತಂಕ, ನಿದ್ರಾಹೀನತೆ, ಖಿನ್ನತೆಗೆ ಒಳಗಾದ ಹಸಿವು ಮತ್ತು ಸ್ಥೂಲಕಾಯತೆ ಇರುವವರಿಗೆ ಇವು ಉತ್ತಮವಾಗಿವೆ. ಪಿಸ್ತಾ ಸೇವನೆಯು ಹಸಿವು, ಲೈಂಗಿಕ ಶಕ್ತಿ, ಮನಸ್ಥಿತಿ ಮತ್ತು ನಿದ್ರೆಯನ್ನು ಸುಧಾರಿಸುತ್ತದೆ. ಇವು ಹೃದಯದ ಆರೋಗ್ಯಕ್ಕೂ ಒಳ್ಳೆಯದು ಎನ್ನಲಾಗಿದೆ. ಉತ್ತಮ ನಿದ್ರೆ ಪಡೆಯಲು ಜನರು ಮಲಗಲು 1 ಗಂಟೆಗೂ ಮುನ್ನ ಒಂದು ಹಿಡಿ ಪಿಸ್ತಾವನ್ನು ತಿನ್ನಬಹುದು. ನಿದ್ರೆಗಾಗಿ ಮೆಗ್ನೀಸಿಯಮ್ ಮತ್ತು ಮೆಲಟೋನಿನ್ ಮಾತ್ರೆಗಳನ್ನು ಅವಲಂಬಿಸುವ ಅಗತ್ಯವಿಲ್ಲ ಎಂದು ತಿಳಿಸಿದ್ದಾರೆ.
ನಿದ್ರಾಹೀನತೆ, ನಿದ್ರಾ ಭಂಗ, ಅತಿಯಾದ ಚಿಂತನೆ, ಆತಂಕ ಮತ್ತು ಉದ್ವೇಗ – ಆಯುರ್ವೇದ ಗಿಡಮೂಲಿಕೆಗಳಾದ ಬ್ರಾಹ್ಮಿ, ಅಶ್ವಗಂಧ, ಜಟಮಾನ್ಸಿ, ಟಾಗರ್, ಶಕಪುಷ್ಪಿ ಮತ್ತು ಆಯುರ್ವೇದ ಗಿಡಮೂಲಿಕೆಗಳು ಒತ್ತಡವನ್ನು ಕಡಿಮೆ ಮಾಡುತ್ತದೆ ಮತ್ತು ರಾತ್ರಿ ಹೊತ್ತು ಹಾಲು ಕುಡಿಯುದರಿಂದ ನಿದ್ರೆಯಲ್ಲಿ ಸುಧಾರಣೆ ಕಾಣಬಹುದು ಎಂದು ತಜ್ಞರು ತಮ್ಮ ಪೋಸ್ಟ್ನಲ್ಲಿ ಶಿಫಾರಸು ಮಾಡಿದ್ದಾರೆ.