Pineapple Tea: ಸೊಂಟದ ಸುತ್ತಳತೆ ಕಡಿಮೆ ಆಗಲು ಕುಡಿಯಿರಿ ಅನಾನಸ್ ಗ್ರೀನ್ ಟೀ

ಅನಾನಸ್ ಹಣ್ಣಿನಲ್ಲಿ ಪ್ರೋಟೀನ್ ಮತ್ತು ಫೈಬರ್ ಸಮೃದ್ಧವಾಗಿದೆ. ಇದು ಪೋಷಕಾಂಶಗಳ ಕೊರತೆಯನ್ನು ನೀಗಿಸುತ್ತದೆ. ತೂಕ ನಷ್ಟಕ್ಕೆ ಸಹಾಯ ಮಾಡುತ್ತದೆ. ಅನಾನಸ್ ಅನ್ನು ನೀವು ಚಹಾದ ರೂಪದಲ್ಲೂ ತೆಗೆದುಕೊಳ್ಳಬಹುದು. ತೂಕ ನಷ್ಟಕ್ಕೆ ಅನಾನಸ್ ಹಸಿರು ಚಹಾದ ಪಾಕವಿಧಾನದ ಬಗ್ಗೆ ತಿಳಿಯೋಣ.

First published:

  • 18

    Pineapple Tea: ಸೊಂಟದ ಸುತ್ತಳತೆ ಕಡಿಮೆ ಆಗಲು ಕುಡಿಯಿರಿ ಅನಾನಸ್ ಗ್ರೀನ್ ಟೀ

    ಇತ್ತೀಚಿನ ದಿನಗಳಲ್ಲಿ ಜನರು ಫಿಟ್ನೆಸ್ ಮತ್ತು ಆರೋಗ್ಯದ ಬಗ್ಗೆ ಹೆಚ್ಚು ಕಾಳಜಿ ವಹಿಸುತ್ತಿದ್ದಾರೆ. ಜನರು ತಮ್ಮ ದೇಹ ಮತ್ತು ಆಕೃತಿಯ ಬಗ್ಗೆ ಬಹಳಷ್ಟು ಕಾಳಜಿ ವಹಿಸುತ್ತಿದ್ದಾರೆ. ಹೀಗಾಗಿ ಹಲವು ತಾಜಾ ಹಣ್ಣುಗಳು ಮತ್ತು ತರಕಾರಿಗಳ ಸೇವನೆ ಮಾಡುತ್ತಾರೆ. ಅದರಲ್ಲಿ ಅನಾನಸ್ ಒಂದು. ಅನಾನಸ್ ಆರೋಗ್ಯಕರ ಜೀವನಕ್ಕೆ ಮುಖ್ಯವಾಗಿದೆ.

    MORE
    GALLERIES

  • 28

    Pineapple Tea: ಸೊಂಟದ ಸುತ್ತಳತೆ ಕಡಿಮೆ ಆಗಲು ಕುಡಿಯಿರಿ ಅನಾನಸ್ ಗ್ರೀನ್ ಟೀ

    ಮೂಳೆಗಳ ಆರೋಗ್ಯಕ್ಕೆ ಮತ್ತು ತೂಕ ನಷ್ಟಕ್ಕೆ ಅನಾನಸ್ ಉತ್ತಮ ಆಯ್ಕೆ ಆಗಿದೆ. ಅನಾನಸ್ ನ್ನು ನೀವು ಸಲಾಡ್ ಮತ್ತು ಜ್ಯೂಸ್ ರೂಪದಲ್ಲಿ ಸೇವಿಸಬಹುದು. ಜೊತೆಗೆ ಅನಾನಸ್ ನ್ನು ಹಲವು ಖಾದ್ಯಗಳ ರೂಪದಲ್ಲೂ ತಿನ್ನಬಹುದು. ಇದು ಅನೇಕ ಆರೋಗ್ಯ ಸಮಸ್ಯೆಗಳ ನಿವಾರಣೆಗೆ ಪರಿಣಾಮಕಾರಿ ಆಗಿದೆ.

    MORE
    GALLERIES

  • 38

    Pineapple Tea: ಸೊಂಟದ ಸುತ್ತಳತೆ ಕಡಿಮೆ ಆಗಲು ಕುಡಿಯಿರಿ ಅನಾನಸ್ ಗ್ರೀನ್ ಟೀ

    ಅನಾನಸ್ ಹಣ್ಣಿನಲ್ಲಿ ಪ್ರೋಟೀನ್ ಮತ್ತು ಫೈಬರ್ ಸಮೃದ್ಧವಾಗಿದೆ. ಇದು ಪೋಷಕಾಂಶಗಳ ಕೊರತೆ ಪೂರೈಸುತ್ತದೆ. ತೂಕ ನಷ್ಟಕ್ಕೆ ಸಹಾಯ ಮಾಡುತ್ತದೆ. ಅನಾನಸ್ ನ್ನು ನೀವು ಚಹಾದ ರೂಪದಲ್ಲೂ ಸೇವಿಸಬಹುದು. ಇಲ್ಲಿ ನಾವು ತೂಕ ನಷ್ಟಕ್ಕೆ ಅನಾನಸ್ ಹಸಿರು ಚಹಾದ ಪಾಕವಿಧಾನದ ಬಗ್ಗೆ ತಿಳಿಯೋಣ.

    MORE
    GALLERIES

  • 48

    Pineapple Tea: ಸೊಂಟದ ಸುತ್ತಳತೆ ಕಡಿಮೆ ಆಗಲು ಕುಡಿಯಿರಿ ಅನಾನಸ್ ಗ್ರೀನ್ ಟೀ

    ಅನಾನಸ್ ಗ್ರೀನ್ ಟೀ ಮಾಡಲು ಬೇಕಾದ ಸಾಮಗ್ರಿಗಳು ಹೀಗಿವೆ. ಸಣ್ಣದಾಗಿ ಕೊಚ್ಚಿದ 2 ರಿಂದ 3 ಟೀಸ್ಪೂನ್ ಅನಾನಸ್, 1/2 ಟೀಸ್ಪೂನ್ ಶುಂಠಿ, ದಾಲ್ಚಿನ್ನಿ ಪುಡಿ ಅರ್ಧ ಟೀಚಮಚ, ಅರಿಶಿನ ಪುಡಿ 1 ಟೀಸ್ಪೂನ್, ಹಸಿರು ಚಹಾ ಎಲೆಗಳು 1 ಟೀಸ್ಪೂನ್, ಕಾದ ನೀರು 1 ಲೀಟರ್ ಬೇಕು.

    MORE
    GALLERIES

  • 58

    Pineapple Tea: ಸೊಂಟದ ಸುತ್ತಳತೆ ಕಡಿಮೆ ಆಗಲು ಕುಡಿಯಿರಿ ಅನಾನಸ್ ಗ್ರೀನ್ ಟೀ

    ಅನಾನಸ್ ಗ್ರೀನ್ ಟೀ ಮಾಡುವ ವಿಧಾನ. ಒಂದು ಜಗ್ ತೆಗೆದುಕೊಂಡು ಅದರಲ್ಲಿ ಅನಾನಸ್ ತುಂಡುಗಳನ್ನು ಹಾಕಿ. ಅದಕ್ಕೆ ಅರಿಶಿನ ಪುಡಿ, ದಾಲ್ಚಿನ್ನಿ ಪುಡಿ ಮತ್ತು ಶುಂಠಿ ತುಂಡು ಹಾಕಿ. ಈಗ ಹಸಿರು ಚಹಾ ಎಲೆಗಳನ್ನು ಹಾಕಿ. ಇದಕ್ಕೆ ಬೇಯಿಸಿದ ನೀರನ್ನು ಸೇರಿಸಿ. ಸ್ವಲ್ಪ ಸಮಯ ಬಿಟ್ಟು ಗ್ಲಾಸ್ ಗೆ ಸರ್ವ್ ಮಾಡಿ, ಕುಡಿಯಿರಿ.

    MORE
    GALLERIES

  • 68

    Pineapple Tea: ಸೊಂಟದ ಸುತ್ತಳತೆ ಕಡಿಮೆ ಆಗಲು ಕುಡಿಯಿರಿ ಅನಾನಸ್ ಗ್ರೀನ್ ಟೀ

    ಅನಾನಸ್ ಗ್ರೀನ್ ಟೀ ತೂಕ ಕಡಿಮೆ ಮಾಡಲು ಪರಿಣಾಮಕಾರಿ. ಇದು ನಿರ್ಜಲೀಕರಣ ತಡೆಯುತ್ತದೆ. ದೇಹದಲ್ಲಿ ನೀರಿನ ಕೊರತೆ ಇರುವುದಿಲ್ಲ. ರುಚಿಯಲ್ಲಿ ಹುಳಿ ಸಿಹಿ ರಸಭರಿತ ಅನಾನಸ್ ಹಣ್ಣು, ಶೇ. 86 ರಷ್ಟು ನೀರು ಹೊಂದಿದೆ. ಇದರಲ್ಲಿ ಅನೇಕ ಜೀವಸತ್ವಗಳು ಮತ್ತು ಖನಿಜಗಳು ಕಂಡು ಬರುತ್ತವೆ.

    MORE
    GALLERIES

  • 78

    Pineapple Tea: ಸೊಂಟದ ಸುತ್ತಳತೆ ಕಡಿಮೆ ಆಗಲು ಕುಡಿಯಿರಿ ಅನಾನಸ್ ಗ್ರೀನ್ ಟೀ

    ಅನಾನಸ್ ಗ್ರೀನ್ ಟೀ, ದೀರ್ಘಕಾಲದವರೆಗೆ ಹಸಿವನ್ನು ನಿಯಂತ್ರಿಸುತ್ತದೆ. ದೀರ್ಘಕಾಲ ಹೊಟ್ಟೆ ತುಂಬಿಸಿಡುತ್ತದೆ. ಇದರಲ್ಲಿರುವ ಫೈಬರ್ ಆರೋಗ್ಯಕ್ಕೆ ಉತ್ತಮ. ಇದು ಜೀರ್ಣಾಂಗ ವ್ಯವಸ್ಥೆಯನ್ನು ಉತ್ತೇಜಿಸುತ್ತದೆ. ಬೊಜ್ಜು ಮತ್ತು ಅಧಿಕ ತೂಕದ ಸಮಸ್ಯೆ ಪರಿಹರಿಸುತ್ತದೆ. ದಿನಕ್ಕೆ 2 ರಿಂದ 3 ಕಪ್ ಅನಾನಸ್ ಹಸಿರು ಚಹಾವನ್ನು ಕುಡಿಯಬಹುದು.

    MORE
    GALLERIES

  • 88

    Pineapple Tea: ಸೊಂಟದ ಸುತ್ತಳತೆ ಕಡಿಮೆ ಆಗಲು ಕುಡಿಯಿರಿ ಅನಾನಸ್ ಗ್ರೀನ್ ಟೀ

    ಆಂಟಿಆಕ್ಸಿಡೆಂಟ್-ಸಮೃದ್ಧ ಅನಾನಸ್ ಫಲವತ್ತತೆ ಹೆಚ್ಚಿಸುತ್ತದೆ. ಸಂತಾನೋತ್ಪತ್ತಿ ವ್ಯವಸ್ಥೆಗೆ ಸಹಕಾರಿ. ಅಸ್ತಮಾ ರೋಗಿಗಳಿಗೆ ಪ್ರಯೋಜನಕಾರಿ. ಅನಾನಸ್ ನಲ್ಲಿ ಬೀಟಾ ಕ್ಯಾರೋಟಿನ್ ಇದೆ. ಇದು ಅಸ್ತಮಾದ ಅಪಾಯವನ್ನು ಕಡಿಮೆ ಮಾಡುತ್ತದೆ. ಅನಾನಸ್‌ನಲ್ಲಿರುವ ಬ್ರೊಮೆಲಿನ್ ಅಂಶವು ಶ್ವಾಸನಾಳದ ಉರಿಯೂತ ಕಡಿಮೆ ಮಾಡುತ್ತದೆ. ಖಾಲಿ ಹೊಟ್ಟೆಯಲ್ಲಿ ಅನಾನಸ್ ಚಹಾ ಕುಡಿದರೆ ಉತ್ತಮ.

    MORE
    GALLERIES