ದೈಹಿಕ ಮತ್ತು ಮಾನಸಿಕ ಆರೋಗ್ಯಕ್ಕೆ ಧ್ಯಾನ ಮಾಡುವುದು ತುಂಬಾ ಅವಶ್ಯಕ. ಧ್ಯಾನವು ಮಾನವನ ಆರೋಗ್ಯಕ್ಕೆ ವರದಾನವಿದ್ದಂತೆ. ಮಾನಸಿಕ ಆರೋಗ್ಯಕ್ಕೆ ದಿನವೂ ನಿಯಮಿತವಾಗಿ ಅರ್ಧ ಗಂಟೆ ಧ್ಯಾನ ಮಾಡುವುದು ಉತ್ತಮ ಅಂತಾರೆ ತಜ್ಞರು. ಧ್ಯಾನವು ಒತ್ತಡ, ಮಾನಸಿಕ ಕಿರಿಕಿರಿ, ಆತಂಕ, ನಿದ್ರಾಹೀನತೆ ಹಾಗೂ ಮಾನಸಿಕ ಅಸ್ವಸ್ಥತೆ ಕಡಿಮೆ ಮಾಡಲು ಸಹಕಾರಿ.