Gastrointestinal issues : ಕೆಲವರಿಗೆ ಹೊಟ್ಟೆಯ ಸಮಸ್ಯೆ ಇರುತ್ತದೆ. ಅವರು ಏನು ತಿಂದರೂ ಅವರಿಗೆ ಗ್ಯಾಸ್ಟ್ರಿಕ್ಟ್ ಆಗುತ್ತದೆ. ಹೊಟ್ಟೆ ಉರಿಯಂತಹ ಕರುಳಿನ ಸಹಲಕ್ಷಣಗಳಿಂದ (IBS) ಬಳಲುತ್ತಿದ್ದಾರೆ. ಸಿಹಿ ಪದಾರ್ಥಗಳನ್ನು ತಿಂದರೆ, ಹೊಟ್ಟೆಯಲ್ಲಿ ವ್ಯತ್ಯಾಸವಾಗುತ್ತದೆ. ಹೊಟ್ಟೆ ಉಬ್ಬುವುದು, ಗ್ಯಾಸ್, ಅತಿಸಾರ ಸಮಸ್ಯೆಗಳು ಬರುತ್ತದೆ. ಅಂತಹವರು ಮಾವಿನ ಹಣ್ಣನ್ನು ಸೇವಿಸಬಾರದು.
ಮಾವಿನ ಹಣ್ಣನ್ನು ಹೆಚ್ಚು ತಿಂದರೆ ಹೊಟ್ಟೆಯಲ್ಲಿ ಬದಲಾವಣೆ ಆಗಬಹುದು. ಗ್ಯಾಸ್-ಪ್ರಚೋದಕ ಆಹಾರದೊಂದಿಗೆ ಮಾವಿನಹಣ್ಣುಗಳನ್ನು ತಿನ್ನುವುದು ಗಂಭೀರ ಹೊಟ್ಟೆ ಸಮಸ್ಯೆಗಳಿಗೆ ಕಾರಣವಾಗಬಹುದು. ಆದ್ದರಿಂದ ಒಂದೇ ಸಮಯದಲ್ಲಿ ಹೆಚ್ಚು ಮಾವಿನಹಣ್ಣು ತಿನ್ನಬೇಡಿ. ಆದರೆ ಜ್ಯೂಸ್ ಮಾಡಿ ಕುಡಿಯಬಹುದು. ಸಕ್ಕರೆ ಮಾತ್ರ ಹಾಕದೇ ಇರುವುದು ಒಳ್ಳೆಯದಲ್ಲ. ನಿಮಗೆ ಯಾವುದೇ ಆರೋಗ್ಯ ಸಮಸ್ಯೆಗಳಿದ್ದರೆ, ಮಾವು ತಿನ್ನಬೇಕೆ ಅಥವಾ ಬೇಡವೇ ಎಂದು ನಿಮ್ಮ ವೈದ್ಯರನ್ನು ಕೇಳಬೇಕು.