Health Care: ನಿಮ್ಮ ದೇಹದಲ್ಲಿ ಈ ರೀತಿ ಬದಲಾವಣೆಗಲಾಗುತ್ತಿದ್ರೆ, ಕೂಡಲೇ ನಾನ್​ವೆಜ್​ ಬಿಟ್ಟುಬಿಡಿ!

Health Tips: ಯೂರಿಕ್ ಆಮ್ಲದ ಪ್ರಮಾಣವು ಮಿತಿಯನ್ನು ಮೀರಿದರೆ, ಮೂತ್ರಪಿಂಡ ವೈಫಲ್ಯದಂತಹ ಪರಿಸ್ಥಿತಿಗಳು ಸಹ ಸಂಭವಿಸಬಹುದು. ಇಂದು ನಾವು ಮಾಂಸಾಹಾರಿ ಆಹಾರಗಳು ಮತ್ತು ಯೂರಿಕ್ ಆಸಿಡ್​ಗೆ ಸಂಬಂಧಿಸಿದಂತೆ ಕೆಲವು ಗೊಂದಲಗಳಿಗೆ ಉತ್ತರಗಳನ್ನು ನೀಡಿದ್ದೇವೆ.

First published:

  • 17

    Health Care: ನಿಮ್ಮ ದೇಹದಲ್ಲಿ ಈ ರೀತಿ ಬದಲಾವಣೆಗಲಾಗುತ್ತಿದ್ರೆ, ಕೂಡಲೇ ನಾನ್​ವೆಜ್​ ಬಿಟ್ಟುಬಿಡಿ!

    ಇಂದಿನ ಕಾಲದಲ್ಲಿ ಜನ ತಾವು ಆರೋಗ್ಯವಾಗಿರಲು ಆಹಾರ ಮತ್ತು ಪಾನೀಯಗಳ ಮೇಲೆ ವಿಶೇಷ ಗಮನ ಹರಿಸುತ್ತಾರೆ. ಆಹಾರ ಮತ್ತು ಪಾನೀಯಗಳ ವಿಷಯದಲ್ಲಿ ಮಾಡುವ ತಪ್ಪುಗಳಿಂದ ಅನೇಕ ರೋಗಗಳು ಉಂಟಾಗುತ್ತವೆ. ಅದರಲ್ಲಿ ಅಧಿಕ ಯೂರಿಕ್ ಆಮ್ಲ ಸಮಸ್ಯೆಯು ಒಂದಾಗಿದೆ. ಈ ಅಸ್ವಸ್ಥತೆಯು ನಾನ್ವೆಜ್ ತಿನ್ನುವುದರಿಂದ ಉಂಟಾಗಬಹುದು. ಅದರಲ್ಲೂ ನಾನ್ ವೆಜ್ ಫುಡ್ ಇಷ್ಟಪಡುವವರು ಯೂರಿಕ್ ಆಸಿಡ್ ಗೆ ತುತ್ತಾಗುತ್ತಾರೆ. (ಸಾಂದರ್ಭಿಕ ಚಿತ್ರ)

    MORE
    GALLERIES

  • 27

    Health Care: ನಿಮ್ಮ ದೇಹದಲ್ಲಿ ಈ ರೀತಿ ಬದಲಾವಣೆಗಲಾಗುತ್ತಿದ್ರೆ, ಕೂಡಲೇ ನಾನ್​ವೆಜ್​ ಬಿಟ್ಟುಬಿಡಿ!

    ತಜ್ಞರ ಪ್ರಕಾರ, ಯೂರಿಕ್ ಆಮ್ಲದ ಪ್ರಮಾಣವು ಮಿತಿಯನ್ನು ಮೀರಿದರೆ, ಮೂತ್ರಪಿಂಡ ವೈಫಲ್ಯದಂತಹ ಪರಿಸ್ಥಿತಿಗಳು ಸಹ ಸಂಭವಿಸಬಹುದು. ಇಂದು ನಾವು ಮಾಂಸಾಹಾರಿ ಆಹಾರಗಳು ಮತ್ತು ಯೂರಿಕ್ ಆಸಿಡ್ಗೆ ಸಂಬಂಧಿಸಿದಂತೆ ಕೆಲವು ಗೊಂದಲಗಳಿಗೆ ಉತ್ತರಗಳನ್ನು ನೀಡಿದ್ದೇವೆ. (ಸಾಂದರ್ಭಿಕ ಚಿತ್ರ)

    MORE
    GALLERIES

  • 37

    Health Care: ನಿಮ್ಮ ದೇಹದಲ್ಲಿ ಈ ರೀತಿ ಬದಲಾವಣೆಗಲಾಗುತ್ತಿದ್ರೆ, ಕೂಡಲೇ ನಾನ್​ವೆಜ್​ ಬಿಟ್ಟುಬಿಡಿ!

    ನಾನ್ ವೆಜ್ ಹೆಚ್ಚು ತಿನ್ನುವುದರಿಂದ ಯೂರಿಕ್ ಆಸಿಡ್ ಸಮಸ್ಯೆ ಹೆಚ್ಚಾಗುತ್ತದೆ ಎಂಬುದರ ಬಗ್ಗೆ ನೀವು ಆಗಾಗ ಕೇಳಿರಬಹುದು. ಈ ಪ್ರಶ್ನೆಗೆ ಸರ್ ಗಂಗಾರಾಮ್ ಆಸ್ಪತ್ರೆಯ ಮೂತ್ರಶಾಸ್ತ್ರ ವಿಭಾಗದ ಹಿರಿಯ ಸಮಾಲೋಚಕ ಡಾ.ಅಮರೇಂದ್ರ ಪಾಠಕ್ ಅವರು, ಮಾಂಸಾಹಾರಿ ಹಾಗೂ ಪ್ರೊಟೀನ್ ಇರುವ ಆಹಾರಗಳನ್ನು ಹೆಚ್ಚು ಸೇವಿಸುವುದರಿಂದ ಯೂರಿಕ್ ಆಸಿಡ್ ಮಟ್ಟ ಹೆಚ್ಚುತ್ತದೆ. (ಸಾಂದರ್ಭಿಕ ಚಿತ್ರ)

    MORE
    GALLERIES

  • 47

    Health Care: ನಿಮ್ಮ ದೇಹದಲ್ಲಿ ಈ ರೀತಿ ಬದಲಾವಣೆಗಲಾಗುತ್ತಿದ್ರೆ, ಕೂಡಲೇ ನಾನ್​ವೆಜ್​ ಬಿಟ್ಟುಬಿಡಿ!

    ಇದು ಹೆಚ್ಚಿನ ಯೂರಿಕ್ ಆಮ್ಲದ ಮುಖ್ಯ ಕಾರಣಗಳಲ್ಲಿ ಒಂದಾಗಿದೆ. ವಿಶೇಷವಾಗಿ ಕೆಂಪು ಮಾಂಸವನ್ನು ಸೇವಿಸುವುದರಿಂದ ಗಮನಾರ್ಹವಾಗಿ ಹೆಚ್ಚಾಗುತ್ತದೆ. ಇದಲ್ಲದೇ, ಯಕೃತ್ತು ಮತ್ತು ಮೂತ್ರಪಿಂಡದ ಸಮಸ್ಯೆಯು ಯೂರಿಕ್ ಆಮ್ಲವನ್ನು ಹೆಚ್ಚಿಸುತ್ತದೆ. ಯೂರಿಕ್ ಆಮ್ಲ ಪುರುಷರಲ್ಲಿ 4 ರಿಂದ 6.5 mg/dl ಮತ್ತು ಮಹಿಳೆಯರಲ್ಲಿ 3.5 ರಿಂದ 6 mg/dl ನಡುವೆ ಸಾಮಾನ್ಯವೆಂದು ಪರಿಗಣಿಸಲಾಗುತ್ತದೆ. ಇದನ್ನು ಮೀರಿ ಹೋದರೆ ಸಮಸ್ಯೆಗಳು ಪ್ರಾರಂಭವಾಗುತ್ತವೆ. (ಸಾಂದರ್ಭಿಕ ಚಿತ್ರ)

    MORE
    GALLERIES

  • 57

    Health Care: ನಿಮ್ಮ ದೇಹದಲ್ಲಿ ಈ ರೀತಿ ಬದಲಾವಣೆಗಲಾಗುತ್ತಿದ್ರೆ, ಕೂಡಲೇ ನಾನ್​ವೆಜ್​ ಬಿಟ್ಟುಬಿಡಿ!

    ಡಾ. ಅಮರೇಂದ್ರ ಪಾಠಕ್ ಪ್ರಕಾರ, ಸರಿಯಾದ ಚಿಕಿತ್ಸೆಯಿಂದ ಯೂರಿಕ್ ಆಸಿಡ್ ಮಟ್ಟವನ್ನು ಸಂಪೂರ್ಣವಾಗಿ ನಿಯಂತ್ರಿಸಬಹುದು. ಒಬ್ಬ ವ್ಯಕ್ತಿಯು ಮೂತ್ರಪಿಂಡ ಮತ್ತು ಯಕೃತ್ತಿನ ಕಾಯಿಲೆಯಿಂದ ಬಳಲುತ್ತಿದ್ದರೆ, ಅಂತಹ ಸ್ಥಿತಿಯಲ್ಲಿ ಯೂರಿಕ್ ಆಮ್ಲವು ತುಂಬಾ ಅಪಾಯಕಾರಿಯಾಗಿದೆ. ತೀವ್ರತರವಾದ ಪ್ರಕರಣಗಳಲ್ಲಿ ಹೆಚ್ಚಿದ ಯೂರಿಕ್ ಆಮ್ಲವು ಮೂತ್ರಪಿಂಡದ ವೈಫಲ್ಯಕ್ಕೆ ಕಾರಣವಾಗಬಹುದು. ಅನೇಕ ಸಂದರ್ಭಗಳಲ್ಲಿ ಇದನ್ನು ಸುಲಭವಾಗಿ ನಿಯಂತ್ರಿಸಲಾಗುತ್ತದೆ. ಸರಿಯಾದ ಚಿಕಿತ್ಸೆ ಮತ್ತು ಉತ್ತಮ ಆಹಾರ ಸೇವನೆಯಿಂದ ಯೂರಿಕ್ ಆಸಿಡ್ ಸಮಸ್ಯೆಯನ್ನು ಸಂಪೂರ್ಣವಾಗಿ ನಿವಾರಿಸಬಹುದು. ಹಾಗಾಗಿ ಈ ಸಮಸ್ಯೆಯನ್ನು ಮೊದಲೇ ತಿಳಿದುಕೊಂಡರೆ, ಎಂದಿಗೂ ಅಪಾಯವಾಗುವುದಿಲ್ಲ. (ಸಾಂದರ್ಭಿಕ ಚಿತ್ರ)

    MORE
    GALLERIES

  • 67

    Health Care: ನಿಮ್ಮ ದೇಹದಲ್ಲಿ ಈ ರೀತಿ ಬದಲಾವಣೆಗಲಾಗುತ್ತಿದ್ರೆ, ಕೂಡಲೇ ನಾನ್​ವೆಜ್​ ಬಿಟ್ಟುಬಿಡಿ!

    ವೈದ್ಯರ ಪ್ರಕಾರ, ಯೂರಿಕ್ ಆಮ್ಲವು ತುಂಬಾ ಹೆಚ್ಚಾದಾಗ, ಅದು ನಿಮ್ಮ ದೇಹದ ಕೀಲುಗಳಲ್ಲಿ ಸಂಗ್ರಹವಾಗುತ್ತದೆ. ನಿಮ್ಮ ಕೈ ಮತ್ತು ಕಾಲುಗಳ ಸಣ್ಣ ಕೀಲುಗಳಲ್ಲಿ ನಿಮಗೆ ತೀವ್ರವಾದ ನೋವು ಉಂಟು ಮಾಡುತ್ತದೆ. ಇದರಿಂದ ಸಾಕಷ್ಟು ಮಂದಿ ನಡೆಯಲು ಸಾಧ್ಯವಾಗುವುದಿಲ್ಲ. ಇದನ್ನು ಗೌಟ್ ಎಂದು ಕರೆಯುತ್ತಾರೆ, ಒಂದು ರೀತಿಯ ಸಂಧಿವಾತ. ಯೂರಿಕ್ ಆಸಿಡ್ ಹೆಚ್ಚಾದಾಗ ಮತ್ತು ನೋವು ಅಸಹನೀಯವಾಗಿದ್ದಾಗ ಅನೇಕ ರೋಗಿಗಳಲ್ಲಿ ಮೂತ್ರಪಿಂಡದ ಕಲ್ಲುಗಳು ರೂಪುಗೊಳ್ಳುತ್ತವೆ. ಯೂರಿಕ್ ಆಮ್ಲದ ಲಕ್ಷಣಗಳು ಸಾಮಾನ್ಯವಾಗಿ ಗೋಚರಿಸುವುದಿಲ್ಲ, ಆದ್ದರಿಂದ ರಕ್ತ ಪರೀಕ್ಷೆಗಳನ್ನು ನಿಯತಕಾಲಿಕವಾಗಿ ಮಾಡಬೇಕು. ಇದು ಯೂರಿಕ್ ಆಸಿಡ್ ಮಟ್ಟವನ್ನು ಬಹಿರಂಗಪಡಿಸುತ್ತದೆ. (ಸಾಂದರ್ಭಿಕ ಚಿತ್ರ)

    MORE
    GALLERIES

  • 77

    Health Care: ನಿಮ್ಮ ದೇಹದಲ್ಲಿ ಈ ರೀತಿ ಬದಲಾವಣೆಗಲಾಗುತ್ತಿದ್ರೆ, ಕೂಡಲೇ ನಾನ್​ವೆಜ್​ ಬಿಟ್ಟುಬಿಡಿ!

    ಡಾ.ಅಮರೇಂದ್ರ ಪಾಠಕ್ ಪ್ರಕಾರ, ನೈಸರ್ಗಿಕ ವಿಧಾನಗಳ ಮೂಲಕವೂ ಯೂರಿಕ್ ಆಮ್ಲವನ್ನು ನಿಯಂತ್ರಿಸಬಹುದು. ಇದಕ್ಕಾಗಿ ರೆಡ್ ಮೀಟ್ ಮತ್ತು ನಾನ್ ವೆಜ್ ನಿಂದ ಸಂಪೂರ್ಣ ಅಂತರವನ್ನು ಪಾಲಿಸಬೇಕು. ಹೆಚ್ಚಿನ ಪ್ರೋಟೀನ್ ಹೊಂದಿರುವ ಆಹಾರವನ್ನು ಸೇವಿಸುವುದನ್ನು ತಪ್ಪಿಸಿ. ಹೈಡ್ರೇಟೆಡ್ ಆಗಿರಲು ಹೆಚ್ಚು ನೀರು ಕುಡಿಯಿರಿ. ಆಹಾರ ಮತ್ತು ಜೀವನಶೈಲಿಯಲ್ಲಿ ಬದಲಾವಣೆ ಮಾಡಿಕೊಳ್ಳುವ ಮೂಲಕ ಇದನ್ನು ನಿಯಂತ್ರಿಸಬಹುದು. ವ್ಯಾಯಾಮ ಮತ್ತು ದೈಹಿಕ ಚಟುವಟಿಕೆಯನ್ನು ಪ್ರಸ್ತುತ ಯೂರಿಕ್ ಆಮ್ಲವನ್ನು ನಿಯಂತ್ರಿಸಲು ಉತ್ತಮ ಮಾರ್ಗವೆಂದು ಪರಿಗಣಿಸಲಾಗಿದೆ. ಆದರೂ ಯೂರಿಕ್ ಆಸಿಡ್ ನಿಯಂತ್ರಣದಲ್ಲಿಲ್ಲದಿದ್ದರೆ ವೈದ್ಯರ ಸಲಹೆ ಪಡೆದು ಔಷಧ ತೆಗೆದುಕೊಳ್ಳಬೇಕು. (ಸಾಂದರ್ಭಿಕ ಚಿತ್ರ)

    MORE
    GALLERIES