ನಿಮ್ಮ ಮಗುವಿಗೆ 10-12 ವರ್ಷ ವಯಸ್ಸಾಗಿದ್ಯಾ? ನಿಮ್ಮ ಮಗುವಿಗೆ 10 ರಿಂದ 12 ವರ್ಷ ವಯಸ್ಸಾಗಿದ್ದರೆ, ಆಗ ನಿಮ್ಮ ಮಕ್ಕಳಿಗೆ ಮೊದಲ ಬಾರಿಗೆ ಸ್ಮಾರ್ಟ್ಫೋನ್ ಅನ್ನು ಉಡುಗೊರೆಯಾಗಿ ನೀಡಬಹುದು. ಏಕೆಂದರೆ ಈ ವಯಸ್ಸು ಮಕ್ಕಳಿಗೆ ಮೊಬೈಲ್ ಫೂನ್ ನೀಡಲು ಉತ್ತಮವಾಗಿದೆ. ಏಕೆಂದರೆ ಈ ವಯಸ್ಸಿನ ಮಕ್ಕಳು ತಮ್ಮ ಹೆತ್ತವರೊಂದಿಗೆ ತುಂಬಾ ಅಂಟಿಕೊಂಡಿರುತ್ತಾರೆ. ಈ ಸಮಯದಲ್ಲಿ ಮಕ್ಕಳು ಎಲ್ಲವನ್ನು ಅರ್ಥಮಾಡಿಕೊಳ್ಳಲು ಪ್ರಾರಂಭಿಸುವುದರಿಂದ ಮೊಬೈಲ್ ಫೋನ್ ನೀಡಬಹುದು.
ಬಿಲ್ ಗೇಟ್ಸ್ ಮಕ್ಕಳು: ವಿಶ್ವದ ಶ್ರೀಮಂತರಲ್ಲಿ ಒಬ್ಬರಾದ ಬಿಲ್ ಗೇಟ್ಸ್ ತಮ್ಮ ಮಕ್ಕಳಿಗೆ 14 ವರ್ಷ ವಯಸ್ಸಿನವರೆಗೆ ಮೊಬೈಲ್ ಫೋನ್ ಹೊಂದಲು ಬಿಟ್ಟಿರಲಿಲ್ಲ. ಬಿಲ್ ಗೇಟ್ಸ್ ಅವರು ತಮ್ಮ ಮಕ್ಕಳಿಗೆ ಊಟ ಮಾಡುವಾಗ ಡೈನಿಂಗ್ ಟೇಬಲ್ ಮುಂದೆ ಮೊಬೈಲ್ ಫೋನ್ ಬಳಸುವುದಕ್ಕೆ ಅನುಮತಿ ನೀಡುತ್ತಿರಲಿಲ್ಲ. ಬದಲಾಗಿ ಮೊಬೈಲ್ ನೋಡಲು ಸಮಯವನ್ನು ನಿಗದಿಪಡಿಸಿದ್ದರು. ಬೇರೆ ಸಮಯದಲ್ಲಿ ಮೊಬೈಲ್, ಟಿವಿ, ಕಂಪ್ಯೂಟರ್ನಂತಹ ಡಿಜಿಟಲ್ ಸ್ಕ್ರೀನ್ಗಳ ಬಳಕೆ ಮಾಡಲು ಅನುಮತಿ ನೀಡುತ್ತಿರಲಿಲ್ಲ. ಅಲ್ಲದೇ ನನ್ನ ಮಕ್ಕಳನ್ನು ಸರಿಯಾದ ಸಮಯಕ್ಕೆ ಮಲಗಿಸುತ್ತಿದ್ದೆ ಎಂದು ಸಂದರ್ಶನವೊಂದರಲ್ಲಿ ಬಿಲ್ಗೇಟ್ಸ್ ಹೇಳಿದ್ದರು.
ಸಮೀಕ್ಷೆ: ಪ್ಯೂ ರಿಸರ್ಚ್ ಸೆಂಟರ್ನ ಸಮೀಕ್ಷೆಯ ಪ್ರಕಾರ, 13 ರಿಂದ 17 ವರ್ಷ ವಯಸ್ಸಿನ ಸುಮಾರು 95% ಹದಿಹರೆಯದವರು ಸ್ಮಾರ್ಟ್ಫೋನ್ಗಳನ್ನು ಬಳಸುತ್ತಾರೆ. 2022 ರ ಸಮೀಕ್ಷೆಯ ಈ ಡೇಟಾವು 2014-2015 ರ ವರದಿಗಿಂತ ಹೆಚ್ಚು ಹದಿಹರೆಯದವರು ಮೊಬೈಲ್ ಫೋನ್ಗಳನ್ನು ಬಳಸುತ್ತಿದ್ದಾರೆ. 13-14 ವರ್ಷ ವಯಸ್ಸಿನವರಿಗಿಂತ 15-17 ವರ್ಷ ವಯಸ್ಸಿನವರು ಹೆಚ್ಚು ಸ್ಮಾರ್ಟ್ ಫೋನ್ಗಳನ್ನು ಬಳಸುತ್ತಾರೆ ಎಂದು ತಿಳಿಸುತ್ತದೆ.
ಕೊರೊನಾ ಹೆಚ್ಚಳವಾಗಿದ್ದ ವೇಳೆ ಶಾಲಾ-ಕಾಲೇಜುಗಳನ್ನು ಮುಚ್ಚಲಾಗಿತ್ತು. ಹಾಗಾಗಿ ವಿದ್ಯಾರ್ಥಿಗಳು ಸುಮಾರು 2 ವರ್ಷಗಳ ಕಾಲ ಆನ್ಲೈನ್ ಕ್ಲಾಸ್ಗೆ ಹಾಜರಾಗಿದ್ದರು. ಆ ಸಂದಿಗ್ಧ ಕಾಲದಲ್ಲಿ ಮಕ್ಕಳು ತಮ್ಮ ಶಿಕ್ಷಣವನ್ನು ಮುಂದುವರಿಸಲು ಸ್ಮಾರ್ಟ್ಫೋನ್ಗಳು ಸಹಾಯ ಮಾಡಿತು. 10 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಿಗೆ, ಸ್ಮಾರ್ಟ್ ಫೋನ್ ಅಗತ್ಯವಿಲ್ಲ. ಆದರೆ ಹದಿಹರೆಯದವರಿಗೆ ಮೊಬೈಲ್ ಅತ್ಯಗತ್ಯ. ಹಾಗಾಗಿ ನಿಮ್ಮ ಹದಿಹರೆಯದ ಮಕ್ಕಳು ಅಪಾಯಕ್ಕೆ ಸಿಲುಕದಂತೆ ಅವರ ಮೊಬೈಲ್ ಬಳಕೆಯನ್ನು ನೀವು ಮೇಲ್ವಿಚಾರಣೆ ಮಾಡಬೇಕಾಗುತ್ತದೆ. ಆಗಾಗ ಮೊಬೈಲ್ನಲ್ಲಿ ಬ್ರೌಸಿಂಗ್ ಹಿಸ್ಟ್ರಿಯನ್ನು ಪರಿಶೀಲಿಸುವುದು ನಿಮ್ಮ ಮುಖ್ಯ ಜವಾಬ್ದಾರಿಯಾಗಿರಬಹುದು. (Disclaimer: ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿಯು ಸಾಮಾನ್ಯ ಊಹೆಗಳನ್ನು ಆಧರಿಸಿದೆ. news18ಗೂ ಇದಕ್ಕೂ ಸಂಬಂಧವಿಲ್ಲ ಮತ್ತು ನ್ಯೂಸ್ 18 ಇದಕ್ಕೆ ಜವಾಬ್ದಾರಿಯಲ್ಲ)