Mental Health: ನಿಮ್ಮ ಮಕ್ಕಳು ಒತ್ತಡಕ್ಕೆ ಒಳಗಾಗ್ತಿದ್ದಾರಾ? ಹಾಗಾದ್ರೆ ಪೋಷಕರು ಮಾಡಬೇಕಿರುವ ಕೆಲಸವೇನು?

Mental Health: ಉದ್ಯೋಗ, ಅಧ್ಯಯನ, ವ್ಯಾಪಾರದಂತಹ ಹಲವಾರು ಕೆಲಸಗಳಿಂದ ಅನೇಕ ಜನರು ಒತ್ತಡಕ್ಕೆ ಒಳಗಾಗುತ್ತಾರೆ. ಅದೇ ರೀತಿ ಮಕ್ಕಳು ಕೂಡ ಒತ್ತಡಕ್ಕೊಳಗಾಗುತ್ತಿದ್ದಾರೆ. ಇದು ಅವರ ಮಾನಸಿಕ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ ಎಂಬುದನ್ನು ಪೋಷಕರು ಅರ್ಥ ಮಾಡಿಕೊಂಡಿದ್ದೀರಾ? ಮಕ್ಕಳ ನಿಜವಾದ ಮಾನಸಿಕ ಆರೋಗ್ಯವನ್ನು ಅರ್ಥಮಾಡಿಕೊಳ್ಳುವುದು ಹೇಗೆ? ಮಕ್ಕಳು ಒತ್ತಡದಲ್ಲಿದ್ದರೆ, ಅದರಿಂದ ಅವರನ್ನು ಹೊರಗೆ ತರುವುದು ಹೇಗೆ ಎಂಬುವುದಕ್ಕೆ ಕೆಲ ಟಿಪ್ಸ್ಗಳನ್ನು ಮನಶಾಸ್ತ್ರಜ್ಞರು ನೀಡುತ್ತಿದ್ದಾರೆ. ಈ ಬಗ್ಗೆ ತಿಳಿದುಕೊಳ್ಳೋಣ!

First published:

  • 17

    Mental Health: ನಿಮ್ಮ ಮಕ್ಕಳು ಒತ್ತಡಕ್ಕೆ ಒಳಗಾಗ್ತಿದ್ದಾರಾ? ಹಾಗಾದ್ರೆ ಪೋಷಕರು ಮಾಡಬೇಕಿರುವ ಕೆಲಸವೇನು?

    ಒತ್ತಡವು ಮಕ್ಕಳ ಮೇಲೆ ಗಂಭೀರ ಪರಿಣಾಮ ಬೀರುತ್ತದೆ. ಒತ್ತಡದ ಚಿಹ್ನೆಗಳನ್ನು ಗುರುತಿಸುವುದು ಮುಖ್ಯ. ಇದು ಪೋಷಕರ ಜವಾಬ್ದಾರಿಯೂ ಆಗಿದೆ. ಮಕ್ಕಳ ಶಿಕ್ಷಣದ ಹೊರತಾಗಿ, ಅವರ ಜೀವನ ಮತ್ತು ಮಾನಸಿಕ ಸ್ಥಿತಿಯ ಬಗ್ಗೆ ವಿಶೇಷ ಕಾಳಜಿ ವಹಿಸಬೇಕು. Image source from Pexels

    MORE
    GALLERIES

  • 27

    Mental Health: ನಿಮ್ಮ ಮಕ್ಕಳು ಒತ್ತಡಕ್ಕೆ ಒಳಗಾಗ್ತಿದ್ದಾರಾ? ಹಾಗಾದ್ರೆ ಪೋಷಕರು ಮಾಡಬೇಕಿರುವ ಕೆಲಸವೇನು?

    ಮಾನಸಿಕ ಅಸ್ವಸ್ಥತೆಯ ಚಿಹ್ನೆಗಳು ಮಕ್ಕಳು ಅಹಿತಕರ ಭಾವನೆ, ಆಗಾಗ್ಗೆ ಅನಾರೋಗ್ಯಕ್ಕೆ ಒಳಗಾಗುವುದು, ಶಾಲೆಯಲ್ಲಿ ಕಲಿಕೆಯಲ್ಲಿ ಹಿಂದೆ ಬೀಳುವುದು, ತಮ್ಮನ್ನು ತಾವು ಟೀಕಿಸಿಕೊಳ್ಳುವುದು ಮತ್ತು ಕೀಳರಿಮೆಯನ್ನು ಅನುಭವಿಸುವುದು. Image source from Pexels

    MORE
    GALLERIES

  • 37

    Mental Health: ನಿಮ್ಮ ಮಕ್ಕಳು ಒತ್ತಡಕ್ಕೆ ಒಳಗಾಗ್ತಿದ್ದಾರಾ? ಹಾಗಾದ್ರೆ ಪೋಷಕರು ಮಾಡಬೇಕಿರುವ ಕೆಲಸವೇನು?

    ಇತ್ತೀಚಿನ ದಿನಗಳಲ್ಲಿ ಅನೇಕ ಪೋಷಕರು ತಮ್ಮ ಕೆಲಸದಲ್ಲಿ ನಿರತರಾಗಿದ್ದಾರೆ ಮತ್ತು ತಮ್ಮ ಮಕ್ಕಳನ್ನು ಸರಿಯಾಗಿ ನೋಡಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಇದರಿಂದ ಪೋಷಕರು ಮತ್ತು ಮಕ್ಕಳ ನಡುವಿನ ಅಂತರ ಹೆಚ್ಚುತ್ತಿದೆ. ಮಕ್ಕಳು ಮತ್ತು ಪೋಷಕರ ನಡುವಿನ ಸಂಬಂಧ ಸರಿಯಿಲ್ಲದಿದ್ದರೆ ಮಕ್ಕಳು ಮಾನಸಿಕ ಅಸ್ವಸ್ಥತೆಗೆ ಒಳಗಾಗುತ್ತಾರೆ ಎಂದು ಅಧ್ಯಯನಗಳು ತಿಳಿಸಿದೆ ಎಂದು ತಜ್ಞರು ಹೇಳುತ್ತಾರೆ. ಮಕ್ಕಳು ಮಾನಸಿಕವಾಗಿ ಆರೋಗ್ಯವಂತರಾಗಿಲ್ಲದಿದ್ದರೆ ಅನೇಕ ಆರೋಗ್ಯ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ. Image source from Pexels

    MORE
    GALLERIES

  • 47

    Mental Health: ನಿಮ್ಮ ಮಕ್ಕಳು ಒತ್ತಡಕ್ಕೆ ಒಳಗಾಗ್ತಿದ್ದಾರಾ? ಹಾಗಾದ್ರೆ ಪೋಷಕರು ಮಾಡಬೇಕಿರುವ ಕೆಲಸವೇನು?

    ಮಕ್ಕಳು ಮನೆಯಲ್ಲಿದ್ದಾರೆ ಎಂಬ ಕಾರಣಕ್ಕೆ ನೀವು ಇಷ್ಟಪಡುವುದನ್ನು ಮಾಡಲು ಅಥವಾ ನೀವು ಹೇಳಿದಂತೆ ಮಾಡಲು ಅವರನ್ನು ಒತ್ತಾಯಿಸಬೇಡಿ. ಅವರಿಗೆ ಸ್ವಾತಂತ್ರ್ಯ ನೀಡಿ. ಅವರು ಇಷ್ಟಪಡುವುದನ್ನು ಹೇಗೆ ಮಾಡಬೇಕೆಂದು ಕಲಿಯಲು ಅವರಿಗೆ ಸಹಾಯ ಮಾಡಿ. ಅವರ ಭಾವನಾತ್ಮಕ ಆರೋಗ್ಯದ ಬಗ್ಗೆ ಜಾಗರೂಕರಾಗಿರಿ. Image source from Pexels

    MORE
    GALLERIES

  • 57

    Mental Health: ನಿಮ್ಮ ಮಕ್ಕಳು ಒತ್ತಡಕ್ಕೆ ಒಳಗಾಗ್ತಿದ್ದಾರಾ? ಹಾಗಾದ್ರೆ ಪೋಷಕರು ಮಾಡಬೇಕಿರುವ ಕೆಲಸವೇನು?

    ಕೆಲವು ಮಕ್ಕಳನ್ನು ನೋಡಿದಾಗಲೆಲ್ಲಾ ಮನೆಯಲ್ಲಿಯೇ ಇರುತ್ತಾರೆ. ಯಾರ ಜೊತೆಗೂ ಬೇಗ ಬೆರೆಯುವುದಿಲ್ಲ. ಹೊರಗಿನವರ ಜೊತೆಗೆ ಹೆಚ್ಚು ಮಾತನಾಡುವುದಿಲ್ಲ. ಹಾಗಾಗಿ ಪೋಷಕರು ಅವರನ್ನು ಆಗಾಗ ಹೊರಗೆ ಕರೆದೊಯ್ಯಬೇಕು. ಕೆಲವೊಮ್ಮೆ ಸಂಬಂಧಿಕರ ಮನೆಗೆ ಕೊಂಡೊಯ್ದರೆ ಭಯ ದೂರವಾಗುತ್ತದೆ. Image source from Pexels

    MORE
    GALLERIES

  • 67

    Mental Health: ನಿಮ್ಮ ಮಕ್ಕಳು ಒತ್ತಡಕ್ಕೆ ಒಳಗಾಗ್ತಿದ್ದಾರಾ? ಹಾಗಾದ್ರೆ ಪೋಷಕರು ಮಾಡಬೇಕಿರುವ ಕೆಲಸವೇನು?

    ನಿಮ್ಮ ಮಗುವಿನ ಶಿಕ್ಷಕರೊಂದಿಗೆ ನಿಯಮಿತವಾಗಿ ಮಾತನಾಡಿ. ನಿಮ್ಮ ಮಕ್ಕಳಿಗಾಗಿ ವೇಳಾಪಟ್ಟಿಯನ್ನು ತಯಾರಿಸಿ. ಬೆಳೆದ ಮಕ್ಕಳಿಗೆ ಕ್ಲಾಸ್ ಕೊಡಬೇಡಿ. ಹಾಗೆಯೇ ಶಿಕ್ಷಣವೇ ಜಗತ್ತು ಎಂಬಂತೆ ಮಕ್ಕಳನ್ನು ಬೆಳೆಸಬೇಡಿ. ಶಾಲೆಯಿಂದ ಮನೆಗೆ ಬಂದ ಕೂಡಲೇ ಪುಸ್ತಕಗಳನ್ನು ತೆಗೆದುಕೊಂಡು ಓದಿಸುವ ಅಭ್ಯಾಸವನ್ನು ನಿಲ್ಲಿಸಿ. Image source from Pexels

    MORE
    GALLERIES

  • 77

    Mental Health: ನಿಮ್ಮ ಮಕ್ಕಳು ಒತ್ತಡಕ್ಕೆ ಒಳಗಾಗ್ತಿದ್ದಾರಾ? ಹಾಗಾದ್ರೆ ಪೋಷಕರು ಮಾಡಬೇಕಿರುವ ಕೆಲಸವೇನು?

    ಪೋಷಕರ ಆಪ್ತತೆಯಿಂದಾಗಿ ಮಕ್ಕಳು ಖಿನ್ನತೆಗೆ ಒಳಗಾಗುವ ಸಾಧ್ಯತೆ ತೀರಾ ಕಡಿಮೆಯಾಗಿರುತ್ತದೆ. ಕಥೆಗಳನ್ನು ಹೇಳುವ ಮೂಲಕ ಮತ್ತು ಮಕ್ಕಳೊಂದಿಗೆ ಸಮಯ ಕಳೆಯುವ ಮೂಲಕ ಪೋಷಕರು ಅವರ ಮಾನಸಿಕ ಬೆಳವಣಿಗೆಯನ್ನು ಬೆಂಬಲಿಸಬಹುದು ಎಂದು ತಜ್ಞರ ಅಭಿಪ್ರಾಯ. Image source from Pexels

    MORE
    GALLERIES