ವಾಸ್ತವವಾಗಿ ಹೇಳಬೇಕೆಂದರೆ ಮಗುವಿನ ಪೋಷಣೆ ಮಾಡುವಾಗ ಅತಿಯಾದ ಕಾಳಜಿವಹಿಸುವುದು ಮತ್ತು ನಿರ್ಲಕ್ಷ್ಯವಹಿಸುವುದು ಎರಡೂ ಕೂಡ ತಪ್ಪು. ಮಕ್ಕಳ ಅಗತ್ಯತೆಗಳನ್ನು ಅರಿತು ಅವುಗಳನ್ನು ಪೂರೈಸಬೇಕು. ಮಗುವಿನ ಆರೋಗ್ಯಕ್ಕೆ ಸಂಬಂಧಿಸಿದಂತೆ ಯಾವ ಸಮಸ್ಯೆಗಳು ಉದ್ಭವಿಸುತ್ತವೆ ಎಂಬುದನ್ನು ನಾವು ತಿಳಿದುಕೊಳ್ಳಬೇಕು ಮತ್ತು ಕಾರ್ಯನಿರ್ವಹಿಸಬೇಕು. ಇದು ಅನಗತ್ಯ ಒತ್ತಡವನ್ನು ತಪ್ಪಿಸುತ್ತದೆ.