ಅವರ ಗಮನವನ್ನು ಬೇರೆಡೆಗೆ ತಿರುಗಿಸಿ: ನಿಮ್ಮ ಮಗುವಿಗೆ ಕೈ ಬೆರಳು ಚೀಪುವ ಅಭ್ಯಾಸವಿದ್ದರೆ, ಅವರ ಗಮನವನ್ನು ಬೆರೆಡೆಗೆ ಸೆಳೆಯಲು ಪ್ರಯತ್ನಿಸಬೇಕು. ಮಕ್ಕಳು ಆನಂದಿಸುವ ಇತರ ಚಟುವಟಿಕೆಗಳಲ್ಲಿ ಅವರನ್ನು ತೊಡಗಿಸಿಕೊಳ್ಳುವಂತೆ ಮಾಡಿ, ಈ ಅಭ್ಯಾಸವನ್ನು ಬಿಡಿಸಲು ಪ್ರಯತ್ನಿಸಬೇಕು. ಡ್ರಾಯಿಂಗ್, ಕ್ರಾಫ್ಟ್ಸ್, ಗೇಮ್ಗಳಂತಹ ಹ್ಯಾಂಡ್ಸ್-ಆನ್ ಚಟುವಟಿಕೆಗಳನ್ನು ಮಾಡಿಸುವ ಮೂಲಕ ಅವರಿಗೆ ಬಿಡುವು ಸಿಗದಂತೆ ಮಾಡಬೇಕು. ಇದು ಅವರ ಜ್ಞಾನವನ್ನು ಅಭಿವೃದ್ಧಿಪಡಿಸುವುದರ ಜೊತೆಗೆ ಬೆರಳು ಚೀಪುವ ಅಭ್ಯಾಸ ಬಿಡಿಸಲು ಸಹಾಯಕವಾಗಿದೆ.
ಬೆರಳು ಚೀಪುವ ಸಮಯವನ್ನು ಗಮನಿಸಿ: ನಿಮ್ಮ ಮಗು ಯಾವ ಸಮಯದಲ್ಲಿ ಬೆರಳು ಹೀರುತ್ತಿದೆ ಎಂಬುದನ್ನು ಗಮನಿಸಿ. ಮಲಗುವಾಗ ಮಕ್ಕಳು ಬೆರಳು ಚೀಪುವ ಅಭ್ಯಾಸ ಹೊಂದಿದ್ದರೆ ನೀವು ಅವರನ್ನು ಬೇರೆ ರೀತಿಯಲ್ಲಿ ಸಮಾಧಾನಪಡಿಸಲು ಪ್ರಯತ್ನಿಸುತ್ತೀರಿ. ರಾತ್ರಿ ಹೊತ್ತು ಹಲ್ಲುಜ್ಜುವ ಮುನ್ನ ಒಂದು ಕಪ್ ಬೆಚ್ಚಗಿನ ಹಾಲು ಅಥವಾ ಗಿಡಮೂಲಿಕೆ ಚಹಾವನ್ನು ಕುಡಿಸಿ. ನಿಮ್ಮ ಮಗು ಅತ್ತಾಗ ಅದು ಏಕೆ ಅಳುತ್ತಿದೆ ಎಂದು ಕಾರಣ ತಿಳಿದುಕೊಳ್ಳುವ ಮೂಲಕ ಆತಂಕವನ್ನು ಹೇಗೆ ಎದುರಿಸಬೇಕೆಂದು ಅವರಿಗೆ ಕಲಿಸಿ.