ನೀವು ಕೂಡ ಈ ಸಮಸ್ಯೆಯಿಂದ ಬಳಲುತ್ತಿದ್ದರೆ, ಅನೇಕ ಆಹಾರ ಪದ್ಧತಿಗಳನ್ನು ಅನುಸರಿಸಬೇಕು. ಇದರ ಜೊತೆಗೆ ಆಹಾರದಲ್ಲಿ ವಿವಿಧ ರೀತಿಯ ಹಣ್ಣುಗಳನ್ನು ಸೇವಿಸಬೇಕು. ನಿಮ್ಮ ಆಹಾರದ ಜೊತೆಗೆ ಪಪ್ಪಾಯಿಯನ್ನು ಖಂಡಿತವಾಗಿ ತಿನ್ನಬೇಕು ಎನ್ನುತ್ತಾರೆ ಆರೋಗ್ಯ ತಜ್ಞರು. ಆದರೆ ನಾವಿಂದು ಆಹಾರವಾಗಿ ಪಪ್ಪಾಯಿಯನ್ನು ಹೇಗೆ ಸೇವಿಸಬೇಕು? ಇದರಿಂದ ಆಗುವ ಪ್ರಯೋಜನಗಳೇನು ಎಂಬುವುದನ್ನು ತಿಳಿಸುತ್ತೇವೆ ಬನ್ನಿ.
ಪಪ್ಪಾಯಿ ಸಲಾಡ್ ಅನ್ನು ಮಧ್ಯಾಹ್ನದ ಊಟವಾಗಿಯೂ ಸೇವಿಸಬಹುದು. ಉತ್ತಮ ರಿಸಲ್ಟ್ ಪಡೆಯಲು ಈ ಸಲಾಡ್ ಅನ್ನು ಲೆಟಿಸ್, ಟೊಮೆಟೊ, ಉಪ್ಪು, ಬೆಳ್ಳುಳ್ಳಿ ಮತ್ತು ನಿಂಬೆ ರಸದೊಂದಿಗೆ ಬೆರೆಸಬೇಕು. ಈ ಸಲಾಡ್ ತೆಗೆದುಕೊಂಡ ನಂತರ ನೀವು ಪಪ್ಪಾಯಿಯಿಂದ ಮಾಡಿದ ಜ್ಯೂಸ್ ಅನ್ನು ಸಹ ತೆಗೆದುಕೊಳ್ಳಬಹುದು. ಇದನ್ನು ನಿಯಮಿತವಾಗಿ ಸೇವಿಸುವುದರಿಂದ ನೀವು ವೇಗವಾಗಿ ತೂಕವನ್ನು ಕಳೆದುಕೊಳ್ಳಬಹುದು.