ಸೇಂದಿ (ಕಳ್ಳು). ಇದರ ಬಗ್ಗೆ ಸಾಮಾನ್ಯವಾಗಿ ಎಲ್ಲರಿಗೂ ತಿಳಿದೇ ಇರುತ್ತದೆ. ಹೊಸದಾಗಿ ಈ ಬಗ್ಗೆ ಪರಿಚಯ ಮಾಡುವ ಅಗತ್ಯವಿಲ್ಲ. ನೋಡಲು ಬಿಳಿ ಬಣ್ಣದಲ್ಲಿರುವ ಈ ಪಾನೀಯವನ್ನು ಕುಡಿದರೆ ನಶೆ ಏರುತ್ತದೆ. ಈ ಆಲ್ಕೋಹಾಲ್ಯುಕ್ತ ಪಾನೀಯವನ್ನು ಭಾರತಾದ್ಯಂತ ಮಾತ್ರವಲ್ಲದೇ ಪ್ರಪಂಚಾದ್ಯಂತ ಕುಡಿಯುತ್ತಾರೆ. ತಾಳೆ ಮರ, ಈಚಲು ಮರ ಮತ್ತು ತೆಂಗಿನ ಮರದಿಂದಲೂ ತೆಗೆದುಕೊಳ್ಳಬಹುದು.
ಮರದಿಂದ ಫ್ರೆಶ್ ಆಗಿ ತೆಗೆದ ಈ ಪಾನೀಯವನ್ನು ಸೇಂದಿ ಎಂದು ಕರೆಯಲಾಗುತ್ತದೆ. ಇದು ಹುಳಿ ರುಚಿಯನ್ನು ಹೊಂದಿರುತ್ತದೆ. ಜೊತೆಗೆ ಪೊಟ್ಯಾಸಿಯಮ್, ಸೋಡಿಯಂ ಮತ್ತು ಮೆಗ್ನೀಸಿಯಮ್ನಂತಹ ಎಲೆಕ್ಟ್ರೋಲೈಟ್ಗಳನ್ನು ಹೊಂದಿರುತ್ತದೆ. ದೇಹದಲ್ಲಿನ ಬೆವರು ಮತ್ತು ದೈಹಿಕ ಚಟುವಟಿಕೆಯಿಂದಾಗಿ ಸುಸ್ತಾದ ನಿಮಗೆ ನೀರಿನಾಂಶ ಮತ್ತು ಖನಿಜಗಳನ್ನು ಪುನಃ ತುಂಬಿಸಲು ಸಹಾಯ ಮಾಡುತ್ತಾರೆ. ಅದಕ್ಕಾಗಿಯೇ ಈ ಬೇಸಿಗೆಯಲ್ಲಿ ನೀವು ಹಿತಮಿತವಾಗಿ ಸೇಂದಿಯನ್ನು ಕುಡಿಯಬಹುದು. ಹಳ್ಳಿಗಳಲ್ಲಿ ಈ ಪಾನೀಯ ಯಥೇಚ್ಛವಾಗಿ ದೊರೆಯುತ್ತದೆ.
ವಿವಿಧ ಹೆಸರುಗಳಿಂದ ಕರೆಯಲ್ಪಡುವ ಸೇಂದಿಯನ್ನು ತಾಳೆ ಜಾತಿಗೆ ಸೇರಿದ ವಿವಿಧ ಮರಗಳಾದ ತಾಳೆ, ಈಚಲು, ತೆಂಗಿನಕಾಯಿ ಮತ್ತು ಖರ್ಜೂರದಂತಹ ಮರಗಳಿಂದ ತೆಗೆದುಕೊಳ್ಳಲಾಗುತ್ತದೆ. ಉತ್ತರ ಭಾರತದಲ್ಲಿ ಇದನ್ನು ನೀರಾ ಎನ್ನುತ್ತಾರೆ. ಆಂಧ್ರಪ್ರದೇಶದಂತಹ ದಕ್ಷಿಣ ಭಾರತದ ರಾಜ್ಯಗಳಲ್ಲಿ ತಾಳೆ ಮರದ ಕಳ್ಳು ಮತ್ತು ಈಚಲು ಮರದ ಕಳ್ಳನ್ನು ಕುಡಿಯುವವರು ಅನೇಕ ಮಂದಿ ಇದ್ದಾರೆ. ಈ ಬೇಡಿಕೆಯನ್ನು ಗಮನದಲ್ಲಿಟ್ಟುಕೊಂಡು ಹೈದರಾಬಾದ್ನಲ್ಲಿ ನೀರಾ ಕೆಫೆಗಳನ್ನು ಸ್ಥಾಪಿಸಲು ಸರ್ಕಾರ ನಿರ್ಧರಿಸಿದೆ.
ಕ್ಯಾನ್ಸರ್ ತಪಾಸಣೆ: ತಾಜಾ ಸೇಂದಿಯಲ್ಲಿ ಆ್ಯಂಟಿಆಕ್ಸಿಡೆಂಟ್ ಆಗಿರುವ ವಿಟಮಿನ್ ಬಿ2 ಇದೆ. ಕ್ಯಾನ್ಸರ್ ಉಂಟುಮಾಡುವ ಫ್ರೀ ರಾಡಿಕಲ್ ವಿರುದ್ಧ ಹೋರಾಡಲು ದೇಹಕ್ಕೆ ಅಗತ್ಯವಾದ ಶಕ್ತಿಯನ್ನು ಒದಗಿಸುವಲ್ಲಿ ಇದು ಪ್ರಮುಖ ಪಾತ್ರ ವಹಿಸುತ್ತದೆ. ಇತ್ತೀಚಿನ ಪಿಎಚ್ಡಿ ಪ್ರಬಂಧವು ಇದನ್ನು ದೃಢಪಡಿಸಿದೆ. ಅದಕ್ಕಾಗಿಯೇ ಇದನ್ನು ಅನೇಕ ದೇಶಗಳಲ್ಲಿ ಕ್ಯಾನ್ಸರ್ ವಿರೋಧಿ ಔಷಧವಾಗಿಯೂ ಬಳಸಲಾಗುತ್ತದೆ.
ಹೃದಯದ ಆರೋಗ್ಯ: ಮಿತವಾಗಿ ಕಳ್ಳು ಕುಡಿಯುವುದರಿಂದ ಹೃದ್ರೋಗದ ಅಪಾಯ ಕಡಿಮೆಯಾಗುತ್ತದೆ. ಏಕೆಂದರೆ ಇದರಲ್ಲಿರುವ ಪೊಟ್ಯಾಶಿಯಂ ಹೃದಯದ ಆರೋಗ್ಯವನ್ನು ಸುಧಾರಿಸುತ್ತದೆ. ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡುವಲ್ಲಿ ಕಳ್ಳು ಪ್ರಮುಖ ಪಾತ್ರ ವಹಿಸುತ್ತದೆ ಎಂದು ಕೆಲವು ಅಧ್ಯಯನಗಳು ಸೂಚಿಸುತ್ತವೆ. ಇದು ರಕ್ತದೊತ್ತಡವನ್ನೂ ಕಡಿಮೆ ಮಾಡುತ್ತದೆ. ಆದರೆ, ಹೆಚ್ಚು ಕಳ್ಳನ್ನು ಕುಡಿಯುವುದರಿಂದ ನಿಮ್ಮ ಆರೋಗ್ಯಕ್ಕೆ ಹಾನಿಯಾಗುತ್ತದೆ. ಯಕೃತ್ತು ಹಾನಿಯಾಗುವ ಅಪಾಯವೂ ಇದೆ. ಆದ್ದರಿಂದ, ಮಿತವಾಗಿ ಕುಡಿಯಿರಿ.
ಅಡ್ಡ ಪರಿಣಾಮಗಳು: ಕಳ್ಳನ್ನು ಅತಿಯಾಗಿ ಸೇವಿಸುವುದರಿಂದ ದೇಹದ ಮೇಲೆ ದುಷ್ಪರಿಣಾಮ ಉಂಟಾಗುತ್ತದೆ. ಇದು ಯಕೃತ್ತನ್ನು ಹಾನಿಗೊಳಿಸುತ್ತದೆ, ಇದು ಅಧಿಕ ರಕ್ತದೊತ್ತಡಕ್ಕೆ ಕಾರಣವಾಗುತ್ತದೆ. ನರಗಳ ಮೇಲೆ ಪರಿಣಾಮ ಬೀರುತ್ತದೆ, ರಕ್ತ ಹೆಪ್ಪುಗಟ್ಟುವ ಸಾಮರ್ಥ್ಯವನ್ನು ಕಡಿಮೆ ಮಾಡುತ್ತದೆ. ಹೃದಯ ಸ್ನಾಯುವನ್ನು ದುರ್ಬಲಗೊಳಿಸುತ್ತದೆ. ಈ ಪಾನೀಯವು ಗರ್ಭಿಣಿಯರಿಗೂ ಹಾನಿಕಾರಕವಾಗಿದೆ. ಯಾವುದಾದರೂ ಆರೋಗ್ಯ ಸಮಸ್ಯೆ ಇರುವವರು ಸೇಂದಿಯನ್ನು ಕುಡಿಯಬಾರದು.