Health: ಒಮೆಗಾ 3 ಆಹಾರ ಕೊರತೆಯು ಯಾವೆಲ್ಲಾ ಆರೋಗ್ಯ ಸಮಸ್ಯೆ ಉಂಟು ಮಾಡುತ್ತದೆ?

ಒಮೆಗಾ 3 ಆಹಾರ ಪದಾರ್ಥಗಳು ನಿಮ್ಮ ಒಟ್ಟಾರೆ ಆರೋಗ್ಯಕ್ಕೆ ಬೇಕೇ ಬೇಕು. ದೇಹಕ್ಕೆ ಹೇಗೆ ಆರೋಗ್ಯಕರ ಮತ್ತು ಪೋಷಕಾಂಶ ಭರಿತ ಪ್ರೋಟೀನ್, ಜೀವಸತ್ವಗಳು, ಕ್ಯಾಲ್ಸಿಯಂ ಮತ್ತು ಕಬ್ಬಿಣ ಬೇಕೋ ಹಾಗೆಯೇ ಒಮೆಗಾ 3 ಕೊಬ್ಬಿನಾಮ್ಲಗಳು ಬೇಕು. ಇವು ದೇಹ ಮತ್ತು ಮನಸ್ಸನ್ನು ಆರೋಗ್ಯವಾಗಿರಿಸುತ್ತವೆ.

First published:

  • 18

    Health: ಒಮೆಗಾ 3 ಆಹಾರ ಕೊರತೆಯು ಯಾವೆಲ್ಲಾ ಆರೋಗ್ಯ ಸಮಸ್ಯೆ ಉಂಟು ಮಾಡುತ್ತದೆ?

    ಒಮೆಗಾ 3 ಇದು ಬಹುಅಪರ್ಯಾಪ್ತ ಕೊಬ್ಬು. ಇದು ದೇಹದ ಆರೋಗ್ಯ, ಉರಿಯೂತ ಕಡಿಮೆ ಮಾಡಲು ಮತ್ತು ಮೆದುಳು ಮತ್ತು ನರಮಂಡಲ ಚೆನ್ನಾಗಿಡಲು ಮತ್ತು ಬಲಪಡಿಸುತ್ತದೆ. ಒಂದು ದಿನಕ್ಕೆ ಮಕ್ಕಳಿಗೆ 1 ರಿಂದ 1.1 ಗ್ರಾಂ, ಪುರುಷರಿಗೆ 1.6 ಗ್ರಾಂ, ಮಹಿಳೆಯರಿಗೆ 1.1 ಗ್ರಾಂ, ಗರ್ಭಿಣಿಯರಿಗೆ 1.4 ಗ್ರಾಂ ಒಮೆಗಾ 3 ಬೇಕು.

    MORE
    GALLERIES

  • 28

    Health: ಒಮೆಗಾ 3 ಆಹಾರ ಕೊರತೆಯು ಯಾವೆಲ್ಲಾ ಆರೋಗ್ಯ ಸಮಸ್ಯೆ ಉಂಟು ಮಾಡುತ್ತದೆ?

    ದೇಹದಲ್ಲಿನ ಒಮೆಗಾ 3 ಕೊಬ್ಬಿನಾಮ್ಲಗಳ ಕೊರತೆ ಆದಾಗ ಆಲೋಚನಾ ಶಕ್ತಿ ಕಡಿಮೆಯಾಗುವುದು, ಮನಸ್ಥಿತಿ ಅಸ್ವಸ್ಥತೆ, ಖಿನ್ನತೆ ಮತ್ತು ಆತಂಕ, ಹೃದಯ ಕಾಯಿಲೆ, ಚರ್ಮ ರೋಗಗಳು ಮತ್ತು ಕೂದಲಿನ ಸಮಸ್ಯೆ ಉಂಟಾಗುತ್ತದೆ. ಒಮೆಗಾ 3 ಮಕ್ಕಳ ಮೆದುಳು ಮತ್ತು ದೈಹಿಕ ಬೆಳವಣಿಗೆಗೆ ಸಹಕಾರಿ.

    MORE
    GALLERIES

  • 38

    Health: ಒಮೆಗಾ 3 ಆಹಾರ ಕೊರತೆಯು ಯಾವೆಲ್ಲಾ ಆರೋಗ್ಯ ಸಮಸ್ಯೆ ಉಂಟು ಮಾಡುತ್ತದೆ?

    ಮಾನವನ ದೇಹವು ಒಮೆಗಾ 3 ಉತ್ಪಾದಿಸುವುದಿಲ್ಲ. ಇದು ಸಮೃದ್ದವಾಗಿರುವ ಪದಾರ್ಥ ತಿನ್ನಬೇಕಾಗುತ್ತದೆ. ಸಾಲ್ಮನ್, ಸಾರ್ಡೀನ್‌, ಫ್ಲಾಕ್ಸ್ ಸೀಡ್ಸ್, ಚಿಯಾ ಬೀಜಗಳು, ವಾಲ್ನಟ್ಸ್ ಮತ್ತು ಸೋಯಾಬೀನ್‌, ಮೀನು, ಮೊಟ್ಟೆ, ಮೊಸರು, ಜ್ಯೂಸ್, ಹಾಲು, ಅಗಸೆ ಬೀಜ ಎಣ್ಣೆ, ಸೋಯಾಬೀನ್ ಎಣ್ಣೆ ಮತ್ತು ಕ್ಯಾನೋಲ ಎಣ್ಣೆಯಲ್ಲಿ ಹೇರಳವಾಗಿದೆ.

    MORE
    GALLERIES

  • 48

    Health: ಒಮೆಗಾ 3 ಆಹಾರ ಕೊರತೆಯು ಯಾವೆಲ್ಲಾ ಆರೋಗ್ಯ ಸಮಸ್ಯೆ ಉಂಟು ಮಾಡುತ್ತದೆ?

    ಒಮೆಗಾ 3 ದೇಹದಲ್ಲಿ ಕೊರತೆಯಾದಾಗ ಗಮನ ಕೇಂದ್ರೀಕರಿಸುವಲ್ಲಿ ತೊಂದರೆಯಾಗುತ್ತದೆ. ಸುಲಭವಾಗಿ ವಿಚಲಿತರಾಗುತ್ತೀರಿ. ಯಾವುದೇ ಕೆಲಸದಲ್ಲಿ ಆಸಕ್ತಿ ಮತ್ತು ಗಮನವಿರಲ್ಲ. ಒಮೆಗಾ 3 ಮೆದುಳಿನ ಕಾರ್ಯ ನಿರ್ವಹಣೆಗೆ ಸಹಕಾರಿ.

    MORE
    GALLERIES

  • 58

    Health: ಒಮೆಗಾ 3 ಆಹಾರ ಕೊರತೆಯು ಯಾವೆಲ್ಲಾ ಆರೋಗ್ಯ ಸಮಸ್ಯೆ ಉಂಟು ಮಾಡುತ್ತದೆ?

    ಮನಸ್ಥಿತಿಯ ಏರು ಪೇರು ಉಂಟಾದಾಗಲೂ ಒಮೆಗಾ 3 ಕೊಬ್ಬಿನಾಮ್ಲದ ಕೊರತೆ ಉಂಟಾಗಿರಬಹುದು ಎಂದು ಅಂದಾಜಿಸಲಾಗುತ್ತದೆ. ಒಮೆಗಾ 3 ಮೆದುಳಿನ ಕಾರ್ಯ ನಿರ್ವಹಣೆ ಸುಧಾರಿಸುತ್ತದೆ. ದೇಹದಲ್ಲಿ ಈ ಪೋಷಕಾಂಶದ ಕೊರತೆಯು ಆಲೋಚನಾ ಶಕ್ತಿ, ಜ್ಞಾಪಕ ಶಕ್ತಿ ಕಡಿಮೆ ಮತ್ತು ಹಲವು ನರವೈಜ್ಞಾನಿಕ ಅಸ್ವಸ್ಥತೆ ಉಂಟು ಮಾಡುತ್ತದೆ.

    MORE
    GALLERIES

  • 68

    Health: ಒಮೆಗಾ 3 ಆಹಾರ ಕೊರತೆಯು ಯಾವೆಲ್ಲಾ ಆರೋಗ್ಯ ಸಮಸ್ಯೆ ಉಂಟು ಮಾಡುತ್ತದೆ?

    ಆಯಾಸ ಮತ್ತು ನಿದ್ರಾಹೀನತೆ ಸಮಸ್ಯೆಗೂ ಕೆಲವೊಮ್ಮೆ ಒಮೆಗಾ 3 ಕೊಬ್ಬಿನಾಮ್ಲದ ಕೊರತೆ ಕಾರಣವಾಗಿರುತ್ತದೆ. ಒಮೆಗಾ 3 ಕೊರತೆಯು ಆಯಾಸ ಮತ್ತು ಮಲಗುವಾಗ ಮತ್ತು ನಿದ್ರೆಗೆ ತೊಂದರೆ ಉಂಟು ಮಾಡುತ್ತದೆ.

    MORE
    GALLERIES

  • 78

    Health: ಒಮೆಗಾ 3 ಆಹಾರ ಕೊರತೆಯು ಯಾವೆಲ್ಲಾ ಆರೋಗ್ಯ ಸಮಸ್ಯೆ ಉಂಟು ಮಾಡುತ್ತದೆ?

    ಚರ್ಮ, ಕೂದಲು ಮತ್ತು ಉಗುರು ಸಮಸ್ಯೆಗೆ ಒಮೆಗಾ 3 ಕೊರತೆಯು ಕಾರಣವಾಗುತ್ತದೆ. ಒಮೆಗಾ 3 ಪೋಷಕಾಂಶವು ಚರ್ಮ ಮತ್ತು ಕೂದಲಿನ ಆರೋಗ್ಯಕ್ಕೆ ಬಹಳ ಮುಖ್ಯ. ಒಮೆಗಾ 3 ಕೊಬ್ಬಿನಾಮ್ಲಗಳ ಕೊರತೆಯಾದರೆ ಒಣ ಚರ್ಮ, ಫ್ಲಾಕಿ ಸ್ಕಿನ್ ಮತ್ತು ಸುಲಭವಾಗಿ ಕೂದಲು ಉದುರುವಿಕೆ ಉಂಟಾಗುತ್ತದೆ.

    MORE
    GALLERIES

  • 88

    Health: ಒಮೆಗಾ 3 ಆಹಾರ ಕೊರತೆಯು ಯಾವೆಲ್ಲಾ ಆರೋಗ್ಯ ಸಮಸ್ಯೆ ಉಂಟು ಮಾಡುತ್ತದೆ?

    ಆಗಾಗ್ಗೆ ಮೂತ್ರ ವಿಸರ್ಜನೆ ಸಮಸ್ಯೆಗೂ ಒಮೆಗಾ 3 ಕೊರತೆ ಕಾರಣವಾಗುತ್ತದೆ. ಪದೆ ಪದೇ ಬಾಯಿ ಒಣಗುವುದು, ಪದೇ ಪದೇ ನಿರ್ಜಲೀಕರಣ ಸಮಸ್ಯೆ ಕಾಡುತ್ತದೆ. ಜೊತೆಗೆ ಆಗಾಗ್ಗೆ ಮೂತ್ರ ವಿಸರ್ಜನೆ ಪ್ರಚೋದನೆ ಸಿಗುವುದು, ಪೋಷಕಾಂಶದ ಕೊರತೆಯ ಸಂಕೇತವಾಗಿದೆ.

    MORE
    GALLERIES