Rat Problems: ನಿಮ್ಮ ಮನೆಯಲ್ಲಿ ಇಲಿಗಳ ಕಾಟ ಜಾಸ್ತಿ ಆಗಿದಿಯಾ? ಈ ಸುಲಭ ಮಾರ್ಗದ ಮೂಲಕ ನಿಯಂತ್ರಿಸಿ

Rats Problem: ಇಲಿಗಳು ಮಾನವನ ದೊಡ್ಡ ಶತ್ರು. ಇದು ಗೃಹೋಪಯೋಗಿ ವಸ್ತುಗಳು ಮತ್ತು ಆಹಾರ ಧಾನ್ಯಗಳನ್ನು ಹಾಳುಮಾಡುತ್ತದೆ. ಜೊತೆಗೆ ಪ್ಲೇಗ್‌ನಂತಹ ಅನೇಕ ರೋಗಗಳನ್ನು ಹರಡುತ್ತದೆ. ಹಾಗಾಗಿ ಅದನ್ನು ಹೋಗಲಾಡಿಸುವುದು ಬಹಳ ಮುಖ್ಯ.

First published:

  • 16

    Rat Problems: ನಿಮ್ಮ ಮನೆಯಲ್ಲಿ ಇಲಿಗಳ ಕಾಟ ಜಾಸ್ತಿ ಆಗಿದಿಯಾ? ಈ ಸುಲಭ ಮಾರ್ಗದ ಮೂಲಕ ನಿಯಂತ್ರಿಸಿ

    ಇಲಿಗಳು ಸಾಮಾನ್ಯವಾಗಿ ಮನುಷ್ಯರು ವಾಸಿಸುವ ಸ್ಥಳದಲ್ಲಿ ವಾಸಿಸಲು ಬಯಸುತ್ತವೆ. ಅವು ನಮ್ಮ ಸುತ್ತಮುತ್ತಲಿನ ಪ್ರದೇಶಗಳಿಗೆ ಸುಲಭವಾಗಿ ಹೊಂದಿಕೊಳ್ಳುತ್ತದೆ. ಇಲಿಗಳು ದಿನಕ್ಕೆ ಕೇವಲ ಒಂದು ಔನ್ಸ್ (28 ಗ್ರಾಂ) ಆಹಾರ ಮತ್ತು ನೀರಿನಿಂದ ಬದುಕಬಲ್ಲವು, ಆದ್ದರಿಂದ ಮಾಂಸ, ಮೀನು, ತರಕಾರಿಗಳು ಮತ್ತು ಧಾನ್ಯಗಳಿಗೆ ಸುಲಭವಾಗಿ ಸಿಗುವ ಮನುಷ್ಯರು ವಾಸಿಸುವ ಪ್ರದೇಶದಲ್ಲಿ ಕಾಣಿಸಿಕೊಳ್ಳುತ್ತವೆ.

    MORE
    GALLERIES

  • 26

    Rat Problems: ನಿಮ್ಮ ಮನೆಯಲ್ಲಿ ಇಲಿಗಳ ಕಾಟ ಜಾಸ್ತಿ ಆಗಿದಿಯಾ? ಈ ಸುಲಭ ಮಾರ್ಗದ ಮೂಲಕ ನಿಯಂತ್ರಿಸಿ

    ಇಲಿಗಳು ಮನೆಗಳು, ರೆಸ್ಟೊರೆಂಟ್‌ಗಳು ಮತ್ತು ದಿನಸಿ ಅಂಗಡಿಗಳಸುತ್ತಮುತ್ತ ಇದ್ದು, ಸುಲಭವಾಗಿ ಜೀವಿಸುತ್ತವೆ. ಆದರೆ, ಇದು ಪಾಳುಬಿದ್ದ ಮೆನ, ಕಸದ ಚೀಲಗಳು ಮತ್ತು ತೊಟ್ಟಿಗಳು, ಸ್ಕ್ರ್ಯಾಪ್‌ಗಳು ಬಿದ್ದ ಜಾಗದಲ್ಲೂ ಇರುತ್ತವೆ. ಎತ್ತರದ ಕಳೆಗಳು ಮತ್ತು ಹುಲ್ಲು, ಬೇಲಿಗಳು ಮತ್ತು ಕಸದ ರಾಶಿ ಇರುವ ಜಾಗಗಳಲ್ಲಿ ಇಲಿಗಳು ಆಶ್ರಯ ಪಡೆಯುತ್ತವೆ.

    MORE
    GALLERIES

  • 36

    Rat Problems: ನಿಮ್ಮ ಮನೆಯಲ್ಲಿ ಇಲಿಗಳ ಕಾಟ ಜಾಸ್ತಿ ಆಗಿದಿಯಾ? ಈ ಸುಲಭ ಮಾರ್ಗದ ಮೂಲಕ ನಿಯಂತ್ರಿಸಿ

    ಆದರೆ ನಿಮ್ಮ ನೆರೆಹೊರೆಯಲ್ಲಿ ಇಲಿಗಳಿದ್ದರೆ, ಅವು ನಿಮ್ಮ ಮನೆಗೆ ಪ್ರವೇಶಿಸದಿದ್ದರೂ, ನೀವು ಕೆಲವು ಕ್ರಮಗಳನ್ನು ತೆಗೆದುಕೊಳ್ಳಬೇಕು. ಇಲಿಗಳು ಸುತ್ತಮುತ್ತಲಿನ ಕಟ್ಟಡಗಳ ಒಳಗೆ ಮತ್ತು ಹೊರಗೆ ಮುಕ್ತವಾಗಿ ತಿರುಗಾಡುತ್ತವೆ. ಆದ್ದರಿಂದ ನಿಮ್ಮ ನೆರೆಹೊರೆಯವರು ತೆಗೆದುಕೊಳ್ಳುವ ಇಲಿ ನಿಯಂತ್ರಣ ಕ್ರಮಗಳಿಗೆ ನೀವು ಕೂಡ ಸಹಾಯ ಮಾಡಬೇಕು. ಏಕೆಂದರೆ ಟೀಮ್ ವರ್ಕ್ ಒಳ್ಳೆಯ ಕೆಲಸ ಮಾಡುತ್ತದೆ. ನೆರೆಹೊರೆಯವರೆಲ್ಲರೂ ಒಮ್ಮೆಲೇ ಇಲಿಯನ್ನು ತಡೆಯಲು ಪ್ರಯತ್ನಿಸಿದರೆ, ಅವುಗಳು ಆಹಾರ ಮತ್ತು ಆಶ್ರಯವನ್ನು ಹುಡುಕಲು ಅನಿವಾರ್ಯವಾಗಿ ಜಾಗ ಖಾಲಿ ಮಾಡುತ್ತವೆ.

    MORE
    GALLERIES

  • 46

    Rat Problems: ನಿಮ್ಮ ಮನೆಯಲ್ಲಿ ಇಲಿಗಳ ಕಾಟ ಜಾಸ್ತಿ ಆಗಿದಿಯಾ? ಈ ಸುಲಭ ಮಾರ್ಗದ ಮೂಲಕ ನಿಯಂತ್ರಿಸಿ

    ಮೂಸಿಕಗಳು ಕಟ್ಟಡಕ್ಕೆ ಹೇಗೆ ಬರುತ್ತವೆ ಎಂದು ನಿಮಗೆ ತಿಳಿದ ನಂತರ, ಅವುಗಳಿಗೆ ನಿಮ್ಮ ಮನೆಯಲ್ಲಿ ಸುಲಭವಾಗಿ ಅಡಗಿಕೊಳ್ಳುವ ಸ್ಥಳಗಳನ್ನು ನೀವು ಪರಿಶೀಲಿಸಬೇಕು. ಮತ್ತು ಅವು ಪ್ರವೇಶಿಸದಂತೆ ತಡೆಯಲು ಕ್ರಮಗಳನ್ನು ತೆಗೆದುಕೊಳ್ಳಬೇಕು. ಇಲಿಗಳು ಕಟ್ಟಡಕ್ಕೆ ಹೇಗೆ ಪ್ರವೇಶಿಸುತ್ತವೆ ಎಂಬುದನ್ನು ಕಂಡುಹಿಡಿದು ನಿರ್ಬಂಧಿಸಬೇಕು.

    MORE
    GALLERIES

  • 56

    Rat Problems: ನಿಮ್ಮ ಮನೆಯಲ್ಲಿ ಇಲಿಗಳ ಕಾಟ ಜಾಸ್ತಿ ಆಗಿದಿಯಾ? ಈ ಸುಲಭ ಮಾರ್ಗದ ಮೂಲಕ ನಿಯಂತ್ರಿಸಿ

    ಮಾರುಕಟ್ಟೆಯಲ್ಲಿ ಹಲವು ಬಗೆಯ ಇಲಿ ಔಷಧಿಗಳು ಲಭ್ಯವಿವೆ. ಇದು ಪ್ಯಾಕೆಟ್‌ನಲ್ಲಿನ ಸೂಚನೆಗಳನ್ನು ಅನುಸರಿಸಿ ಬಳಸಬೇಕು. ಈ ವೇಳೆ ಅವು ಮಕ್ಕಳು ಮತ್ತು ಸಾಕುಪ್ರಾಣಿಗಳಿಗೆ ಸಿಗದಂತೆ ದೂರವಿಡುವುದನ್ನು ಮರೆಯದಿರಿ. ವಾರ್ಫರಿನ್, ಕ್ಲೋರೊಫಿಕೋನೋನ್ ಮತ್ತು ವಿಷದ ಪಿವಲ್ ಇಲಿಗಳಲ್ಲಿ ಆಂತರಿಕ ರಕ್ತಸ್ರಾವವನ್ನು ಉಂಟುಮಾಡುತ್ತದೆ ಮತ್ತು ಇವರು ಅವುಗಳ ದೇಹ ಸೇರಿದರೆ ತಕ್ಷಣ ಸಾಯುತ್ತವೆ. ಹಿಟ್ಟಿನಲ್ಲಿ ವಿಷ ಪದಾರ್ಥಗಳನ್ನು ಬೆರೆಸಿ ಮನೆಯ ಮೂಲೆ ಮೂಲೆಗಳಲ್ಲಿ ಇಡಿ.

    MORE
    GALLERIES

  • 66

    Rat Problems: ನಿಮ್ಮ ಮನೆಯಲ್ಲಿ ಇಲಿಗಳ ಕಾಟ ಜಾಸ್ತಿ ಆಗಿದಿಯಾ? ಈ ಸುಲಭ ಮಾರ್ಗದ ಮೂಲಕ ನಿಯಂತ್ರಿಸಿ

    ತಂತ್ರಜ್ಞಾನದ ಪ್ರಗತಿಯೊಂದಿಗೆ, ವಿವಿಧ ರೀತಿಯ ಮೌಸ್ ಟ್ರ್ಯಾಪ್ಗಳು ಕೂಡ ಮಾರುಕಟ್ಟೆಗೆ ಬಂದಿವೆ. ಇವುಗಳ ಮೂಲಕ ಇಲಿಗಳನ್ನು ಬಲೆಗೆ ಬೀಳಿಸಬಹುದು. ಈ ಸಾಧನಗಳಿಗೆ ಸಿಲುಕುವ ಇಲಿ ತನ್ನನ್ನು ತಾನೇ ಗಾಯಗೊಳಿಸುತ್ತದೆ. ರಾತ್ರಿಯಿಡೀ ಇಲಿ ಟ್ರ್ಯಾಪ್​ನಲ್ಲಿ ಕೆಲವು ಆಹಾರ ಮತ್ತು ಪಾನೀಯವನ್ನು ಇರಿಸಿ. ಬೆಳಿಗ್ಗೆ ತನಕ ಇಲಿಗಳು ಸಿಕ್ಕಿಬೀಳುವುದನ್ನು ನೀವು ಕಾಣಬಹುದು.

    MORE
    GALLERIES