ಚಳಿಗಾಲದಲ್ಲಿ ಚರ್ಮಕ್ಕೆ ಸಂಬಂಧಿಸಿದ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ. ಅದಕ್ಕಾಗಿ ಮಾರುಕಟ್ಟೆಯಲ್ಲಿ ಬಗೆ ಬಗೆಯ ಕ್ರೀಮ್ಗಳು, ಮಾಯಿಶ್ಚರೈಸರ್ಗಳು ಮತ್ತು ಲೋಷನ್ಗಳು ಸಿಗುತ್ತವೆ. ಆದ್ರೆ ಚಳಿಗಾಲದಲ್ಲಿ ಬಹುತೇಕರು ಸನ್ಸ್ಕ್ರೀನ್ ಬಳಕೆ ಮಾಡೋದನ್ನು ಮರೆಯುತ್ತಾರೆ. (ಸಾಂದರ್ಭಿಕ ಚಿತ್ರ)
2/ 9
ಬೇಸಿಗೆಯಲ್ಲಿ ಸೂರ್ಯನ ಕಿರಣಗಳು ತೀವ್ರವಾಗಿರುವ ಕಾರಣ ಸನ್ಸ್ಕ್ರೀನ್ ಬಳಕೆ ಮಾಡುತ್ತಾರೆ. ಆದ್ರೆ ಚಳಿಗಾಲದಲ್ಲಿ ಬಿಸಿಲು ಕಡಿಮೆ ಎಂದು ಸನ್ಸ್ಕ್ರೀನ್ ಬಳಸೋದನ್ನು ಬಿಡುತ್ತಾರೆ. ಆದ್ರೆ ವರ್ಷವಿಡೀ ಸನ್ಸ್ಕ್ರೀನ್ ಬಳಕೆ ಮಾಡಬೇಕು ಎಂದು ತಜ್ಞರು ಹೇಳುತ್ತಾರೆ. (ಸಾಂದರ್ಭಿಕ ಚಿತ್ರ)
3/ 9
ನೀವು ಸನ್ಸ್ಕ್ರೀನ್ ಹೊರಗೆ ಹೋದಾಗ ಮಾತ್ರ ಬಳಕೆ ಮಾಡೋದಲ್ಲ. ಮನೆಯಲ್ಲಿ ಇದ್ರೂ ಸನ್ಸ್ಕ್ರೀನ್ ಬಳಸಬೇಕು ಎಂದು ತಜ್ಞರು ಹೇಳುತ್ತಾರೆ. ಎಲೆಕ್ಟ್ರಾನಿಕ್ ಗ್ಯಾಜೆಟ್ಗಳು ಹೊರಸೂಸುವ ಹಾನಿಕಾರಕ ಕಿರಣಗಳನ್ನು ಈ ಸನ್ಸ್ಕ್ರೀನ್ ತಡೆಯುವ ಕೆಲಸ ಮಾಡುತ್ತವೆ ಎಂದು ಹೇಳುತ್ತಾರೆ. (ಸಾಂದರ್ಭಿಕ ಚಿತ್ರ)
4/ 9
ಚರ್ಮದ ಸ್ಥಿತಿಸ್ಥಾಪಕತ್ವವನ್ನು ಕಾಪಾಡಿಕೊಳ್ಳಲು ಕಾಲಜನ್ ಮುಖ್ಯವಾಗಿದೆ. ಚರ್ಮದ ಹಾನಿ SPF ಸಮೃದ್ಧ ಸೀರಮ್ ಅನ್ನು ಸರಿಪಡಿಸಲು ಕಾಲಜನ್ ಅವಶ್ಯಕವಾಗಿದೆ. ಸನ್ಸ್ಕ್ರೀನ್ ಬಳಕೆ ಚರ್ಮವನ್ನು ತಾಜಾ ಆಗಿರುವಂತೆ ನೋಡಿಕೊಳ್ಳುತ್ತದೆ. (ಸಾಂದರ್ಭಿಕ ಚಿತ್ರ)
5/ 9
ಎಲ್ಲಾ ಋತುಗಳಲ್ಲಿ ಸನ್ಸ್ಕ್ರೀನ್ ಬಳಕೆ ಮಾಡುವದರಿಂದ ಚರ್ಮದ ಆರೋಗ್ಯ ಕಾಪಾಡುತ್ತದೆ. ಚರ್ಮ ಕಾಂತಿಯುತವಾಗಿ ಹೊಳೆಯುತ್ತದೆ. (ಸಾಂದರ್ಭಿಕ ಚಿತ್ರ)
6/ 9
ಸೂರ್ಯನ ನೇರಳಾತೀತ ಕಿರಣಗಳಿಗೆ ಒಡ್ಡಿಕೊಳ್ಳುವುದರಿಂದ ಚರ್ಮದ ಕ್ಯಾನ್ಸರ್ ಕೂಡ ಉಂಟಾಗುತ್ತದೆ. ಆದ್ದರಿಂದ ಚಳಿಗಾಲದಲ್ಲಿಯೂ ಸನ್ಸ್ಕ್ರೀನ್ ಬಳಕೆ ಮಾಡಬೇಕು ಎಂದು ಸಲಹೆ ನೀಡಲಾಗುತ್ತದೆ. (ಸಾಂದರ್ಭಿಕ ಚಿತ್ರ)
7/ 9
ಚಳಿಗಾಲದಲ್ಲಿ ವಾತಾವರಣದ ತೇವಾಂಶ ಇಳಿಕೆಯಾಗಿರುವ ಕಾರಣ ಚರ್ಮ ಒಣಗುತ್ತದೆ. ಇದರಿಂದ ಚರ್ಮದ ಸೋಂಕು ಉಂಟಾಗುವ ಸಾಧ್ಯತೆಗಳಿರುತ್ತವೆ. ಆದ್ದರಿಂದ ಸನ್ಸ್ಕ್ರೀನ್ ಬಳಸಲು ಸಲಹೆ ನೀಡಲಾಗುತ್ತದೆ. (ಸಾಂದರ್ಭಿಕ ಚಿತ್ರ
8/ 9
ಚರ್ಮದಲ್ಲಿ ಅತಿಯಾದ ಮೆಲನಿನ್ ಉತ್ಪಾದನೆ ಪಿಗ್ಮೆಂಟೇಶನ್ ಸಮಸ್ಯೆಗಳಿಗೆ ಕಾರಣವಾಗುತ್ತದೆ. ಸೂರ್ಯನ ಬೆಳಕು, ಮಾಲಿನ್ಯ ಮತ್ತು ಧೂಳಿಗೆ ನಿರಂತರವಾಗಿ ಒಡ್ಡಿಕೊಳ್ಳುವಿಕೆ ಚಳಿಗಾಲದಲ್ಲಿ ಚರ್ಮವನ್ನು ಗಂಭೀರವಾಗಿ ಹಾನಿಗೊಳಿಸುತ್ತದೆ. (ಸಾಂದರ್ಭಿಕ ಚಿತ್ರ)
9/ 9
ಸನ್ಸ್ಕ್ರೀನ್ ಅನ್ನು ನಿಯಮಿತವಾಗಿ ಬಳಸುವುದರಿಂದ ಚರ್ಮದ ಸುಕ್ಕುಗಟ್ಟುವುದನ್ನು ತಡೆಯಬಹುದು. (Disclaimer: ಈ ಲೇಖನವು ಸಾರ್ವಜನಿಕ ನಂಬಿಕೆ ಮತ್ತು ಅಂತರ್ಜಾಲದಲ್ಲಿ ಲಭ್ಯವಿರುವ ಮಾಹಿತಿಯನ್ನು ಆಧರಿಸಿದೆ. ನ್ಯೂಸ್ 18 ಇದನ್ನು ಪರಿಶೀಲಿಸಿಲ್ಲ. ಯಾವುದೇ ಪುರಾವೆಗಳಿಲ್ಲ.)