ಕೆಲವರಿಗೆ ನಾನ್ವೆಜ್ ಅಂದ್ರೆ ತುಂಬಾ ಇಷ್ಟ. ಹಾಗಾಗಿ ಭಾನುವಾರ ಬರುವುದನ್ನೇ ಜನ ಕಾಯುತ್ತಿರುತ್ತಾರೆ. ಮತ್ತೊಂದೆಡೆ ಮಾಂಸಾಹಾರ ಸೇವಿಸುವುದಿಲ್ಲ ಎಂದು ಕೂಡ ಹೇಳುವವರಿದ್ದಾರೆ. ಹೀಗಿರುವಾಗ ಮಾಂಸಾಹಾರ ಆರೋಗ್ಯಕ್ಕೆ ಹೆಚ್ಚು ಹಾನಿಕರ ಎಂಬ ಸುದ್ದಿ ಆಘಾತಕಾರಿ ಸಂಗತಿಯೊಂದು ಹೊರಬಿದ್ದಿದೆ. ಮಾಂಸಾಹಾರವನ್ನು ಅತಿಯಾಗಿ ಸೇವಿಸುವುದರಿಂದ ಹಲವಾರು ಆರೋಗ್ಯ ಸಮಸ್ಯೆಗಳು ಉಂಟಾಗುತ್ತವೆ ಎಂದು ಹೇಳಲಾಗುತ್ತಿದೆ.
ನಾನ್ವೆಜ್ ಹೆಚ್ಚು ಯೂರಿಕ್ ಆಮ್ಲದ ರಚನೆಯನ್ನು ಉತ್ತೇಜಿಸುತ್ತದೆ ಎಂದು ಹೇಳಲಾಗುತ್ತದೆ. ಯೂರಿಕ್ ಆಮ್ಲವು ರಕ್ತದಲ್ಲಿ ಕಂಡುಬರುವ ತ್ಯಾಜ್ಯ ಉತ್ಪನ್ನವಾಗಿದೆ. ಇದು ದೇಹವು ಪ್ಯೂರಿನ್ ಎಂಬ ರಾಸಾಯನಿಕಗಳನ್ನು ಬಿಡುಗಡೆ ಮಾಡಿದಾಗ ಉತ್ಪತ್ತಿಯಾಗುವ ಆಮ್ಲವಾಗಿದೆ. ಅಧಿಕ ಯೂರಿಕ್ ಆಮ್ಲದ ಸ್ರವಿಸುವಿಕೆಯನ್ನು ಹೈಪರ್ಯುರಿಸೆಮಿಯಾ ಎಂದು ಕರೆಯಲಾಗುತ್ತದೆ. ಇದು ಗೌಟ್ ನಂತಹ ಹಲವು ರೀತಿಯ ಕಾಯಿಲೆಗಳಿಗೆ ಕಾರಣವಾಗಬಹುದು. ಮಾಂಸಾಹಾರವನ್ನು ಹೆಚ್ಚು ಸೇವಿಸುವವರಿಗೆ ರಕ್ತದಲ್ಲಿ ಯೂರಿಕ್ ಆಮ್ಲದ ಸ್ರವಿಸುವಿಕೆಯು ಹೆಚ್ಚಾಗುತ್ತದೆ ಎಂದು ಹೇಳಲಾಗುತ್ತದೆ. ಇದಕ್ಕೆ ಕಾರಣ ಏನು ಎಂದು ತಿಳಿದುಕೊಳ್ಳೋಣ.
ಮಾಂಸಾಹಾರಿ ಆಹಾರಗಳು ಯೂರಿಕ್ ಆಸಿಡ್ ಮಟ್ಟವನ್ನು ಏಕೆ ಹೆಚ್ಚಿಸುತ್ತವೆ?
ಡಾ. ಅಮ್ರೇಂದ್ರ ಪಾಠಕ್ ಅವರ ಪ್ರಕಾರ, ಹೆಚ್ಚಿನ ಪ್ರೋಟೀನ್ ಮತ್ತು ಪ್ಯೂರಿನ್ ಆಹಾರವನ್ನು ಸೇವಿಸುವುದರಿಂದ ಯೂರಿಕ್ ಆಮ್ಲದ ಮಟ್ಟವನ್ನು ಹೆಚ್ಚಿಸಬಹುದು. ವಿಶೇಷವಾಗಿ ಕೆಂಪು ಮಾಂಸದಲ್ಲಿ ಪ್ಯೂರಿನ್ಗಳು ಅಧಿಕವಾಗಿದ್ದು, ಇದು ಯೂರಿಕ್ ಆಮ್ಲದ ಉತ್ಪಾದನೆಯನ್ನು ಹೆಚ್ಚಿಸುತ್ತದೆ. ಅನೇಕ ಜನರು ಯೂರಿಕ್ ಆಸಿಡ್ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಸಮತೋಲಿತ ಆಹಾರದಿಂದ ಇದನ್ನು ಸುಲಭವಾಗಿ ನಿಯಂತ್ರಿಸಬಹುದು. ಯೂರಿಕ್ ಆಸಿಡ್ ಸಮಸ್ಯೆ ಇರುವುದು ಪತ್ತೆಯಾದರೆ ವಾರದೊಳಗೆ ಸುಲಭವಾಗಿ ಗುಣಮುಖರಾಗಬಹುದು ಎಂದು ತಿಳಿಸಿದ್ದಾರೆ.