Healthy Lifestyle: ರಾತ್ರಿ ಮಲಗೋ ಮುನ್ನ ಈ ಅಭ್ಯಾಸಗಳನ್ನು ರೂಢಿಸಿಕೊಂಡ್ರೆ ಹೆಲ್ದಿ ಆಗಿರ್ತೀರಾ!

ಯಾರೇ ಆದರೂ, ತಮ್ಮ ದೈನಂದಿನ ದಿನಚರಿಯ ವೇಳಾಪಟ್ಟಿಯೊಂದಿಗೆ ಕೆಲವು ಅಭ್ಯಾಸಗಳನ್ನು ರೂಢಿಸಿಕೊಳ್ಳುವುದರಿಂದ ಅವರಿಗೆ ಸಾಕಷ್ಟು ಪ್ರಯೋಜನ ಸಿಗುತ್ತದೆ. ಆದರೆ ಇಂದಿನ ಟೆಕ್ನಿಕಲ್ ಜಗತ್ತಿನಲ್ಲಿ ತಮ್ಮ ದೈನಂದಿನ ಚಟುವಟಿಕೆಗಳನ್ನು ನಡೆಸಲು ಕೂಡ ಜನರಿಗೆ ಸಮಯ ಸಿಗುತ್ತಿಲ್ಲ. ಹಾಗಾಗಿ ರಾತ್ರಿ ಮಲಗುವ ವೇಳೆ ಕೆಲ ಅಭ್ಯಾಸಗಳನ್ನು ರೂಢಿಸಿಕೊಳ್ಳುವುದರಿಂದ ನಿಜಕ್ಕೂ ಅವರ ಜೀವನ ಉತ್ತಮವಾಗಿರುತ್ತದೆ.

First published:

  • 18

    Healthy Lifestyle: ರಾತ್ರಿ ಮಲಗೋ ಮುನ್ನ ಈ ಅಭ್ಯಾಸಗಳನ್ನು ರೂಢಿಸಿಕೊಂಡ್ರೆ ಹೆಲ್ದಿ ಆಗಿರ್ತೀರಾ!

    ಪ್ರತಿಯೊಬ್ಬರಿಗೂ ರಾತ್ರಿ ಮಲಗುವಾಗ ಒಂದೊಂದು ಅಭ್ಯಾಸವಿರುತ್ತದೆ. ಕೆಲವರಿಗೆ ಸಿನಿಮಾ ನೋಡಿಕೊಂಡು ಮಲಗುವುದು, ಮತ್ತೆ ಕೆಲವರಿಗೆ ಹಾಡು ಕೇಳುತ್ತಾ ಮಲಗುವ, ಇನ್ನೂ ಕೆಲವರಿಗೆ ಸಾಮಾಜಿಕ ಜಾಲತಾಣಗಳಲ್ಲಿನ ಸುದ್ದಿಯನ್ನು ನೋಡುತ್ತಾ ಮಲಗುವ ಅಭ್ಯಾಸವಿರುತ್ತದೆ. 

    MORE
    GALLERIES

  • 28

    Healthy Lifestyle: ರಾತ್ರಿ ಮಲಗೋ ಮುನ್ನ ಈ ಅಭ್ಯಾಸಗಳನ್ನು ರೂಢಿಸಿಕೊಂಡ್ರೆ ಹೆಲ್ದಿ ಆಗಿರ್ತೀರಾ!

    ಯಾರೇ ಆದರೂ, ತಮ್ಮ ದೈನಂದಿನ ದಿನಚರಿಯ ವೇಳಾಪಟ್ಟಿಯೊಂದಿಗೆ ಕೆಲವು ಅಭ್ಯಾಸಗಳನ್ನು ರೂಢಿಸಿಕೊಳ್ಳುವುದರಿಂದ ಅವರಿಗೆ ಸಾಕಷ್ಟು ಪ್ರಯೋಜನ ಸಿಗುತ್ತದೆ. ಆದರೆ ಇಂದಿನ ಟೆಕ್ನಿಕಲ್ ಜಗತ್ತಿನಲ್ಲಿ ತಮ್ಮ ದೈನಂದಿನ ಚಟುವಟಿಕೆಗಳನ್ನು ನಡೆಸಲು ಕೂಡ ಜನರಿಗೆ ಸಮಯ ಸಿಗುತ್ತಿಲ್ಲ. ಹಾಗಾಗಿ ರಾತ್ರಿ ಮಲಗುವ ವೇಳೆ ಕೆಲ ಅಭ್ಯಾಸಗಳನ್ನು ರೂಢಿಸಿಕೊಳ್ಳುವುದರಿಂದ ನಿಜಕ್ಕೂ ಅವರ ಜೀವನ ಉತ್ತಮವಾಗಿರುತ್ತದೆ.

    MORE
    GALLERIES

  • 38

    Healthy Lifestyle: ರಾತ್ರಿ ಮಲಗೋ ಮುನ್ನ ಈ ಅಭ್ಯಾಸಗಳನ್ನು ರೂಢಿಸಿಕೊಂಡ್ರೆ ಹೆಲ್ದಿ ಆಗಿರ್ತೀರಾ!

    ಆರೋಗ್ಯಕರ ಜೀವನಶೈಲಿಯ ಪ್ರಮುಖ ಅಂಶಗಳಲ್ಲಿ ನಿದ್ರೆ ಕೂಡ ಒಂದಾಗಿದೆ. ನಾವು ಮಲಗಲು ಹೇಗೆ ತಯಾರಿ ನಡೆಸುತ್ತೇವೆ ಎಂಬುದು ನಮ್ಮ ಜೀವನಶೈಲಿಯ ಬಗ್ಗೆ ಬಹಳಷ್ಟು ಹೇಳುತ್ತದೆ. ಉತ್ತಮ ನಿದ್ರೆಗಾಗಿ, ನೀವು ಕೆಲವು ವಿಷಯಗಳನ್ನು ಅಭ್ಯಾಸ ಮಾಡುವುದು ಮುಖ್ಯವಾಗಿದೆ. ರಾತ್ರಿ ಹೊತ್ತು ಸರಿಯಾಗಿ ನಿದ್ರೆ ಮಾಡಲಿಲ್ಲ ಅಂದರೆ ದೈಹಿಕ ಮತ್ತು ಮಾನಸಿಕ ಆರೋಗ್ಯದ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ. ನಿದ್ರೆಯ ಕೊರತೆಯು ಅನೇಕ ಸಮಸ್ಯೆಗಳನ್ನು ಉಂಟುಮಾಡಬಹುದು.

    MORE
    GALLERIES

  • 48

    Healthy Lifestyle: ರಾತ್ರಿ ಮಲಗೋ ಮುನ್ನ ಈ ಅಭ್ಯಾಸಗಳನ್ನು ರೂಢಿಸಿಕೊಂಡ್ರೆ ಹೆಲ್ದಿ ಆಗಿರ್ತೀರಾ!

    ಆದ್ದರಿಂದ ಆರೋಗ್ಯವಾಗಿರಬೇಕೆಂದರೆ ರಾತ್ರಿ ಹೊತ್ತು ಸರಿಯಾಗಿ ನಿದ್ರೆ ಮಾಡಬೇಕು. ಜೊತೆಗೆ ಮಲಗುವ ಮುನ್ನ ಕೆಲವು ಅಭ್ಯಾಸಗಳನ್ನು ರೂಢಿಸಿಕೊಳ್ಳಬೇಕು. ಉತ್ತಮ ಆರೋಗ್ಯಕ್ಕೆ ಮುಖ್ಯವಾಗಿದೆ. ಆ ಅಭ್ಯಾಸಗಳು ಯಾವುವು ಅಂತೀರಾ? ಇಲ್ಲಿದೆ ನೋಡಿ ಮಾಹಿತಿ. 

    MORE
    GALLERIES

  • 58

    Healthy Lifestyle: ರಾತ್ರಿ ಮಲಗೋ ಮುನ್ನ ಈ ಅಭ್ಯಾಸಗಳನ್ನು ರೂಢಿಸಿಕೊಂಡ್ರೆ ಹೆಲ್ದಿ ಆಗಿರ್ತೀರಾ!

    ಎಲೆಕ್ಟ್ರಾನಿಕ್ ಗ್ಯಾಜೆಟ್ಗಳು: ಸಾಮಾನ್ಯವಾಗಿ ಕಂಪ್ಯೂಟರ್ಗಳು, ಟೆಲಿವಿಷನ್ಗಳು, ಸ್ಮಾರ್ಟ್ಫೋನ್ಗಳು ಮತ್ತು ಟ್ಯಾಬ್ಲೆಟ್ಗಳು ಸೇರಿದಂತೆ ಎಲೆಕ್ಟ್ರಾನಿಕ್ ಸಾಧನಗಳು ಹೆಚ್ಚಾಗಿ ಬಳಸುವುದರಿಂದ ಅದರ ಬಲವಾದ ನೀಲಿ ಬೆಳಕನ್ನು ಹೊರಸೂಸುತ್ತವೆ. ಆದ್ದರಿಂದ, ರಾತ್ರಿ ಮಲಗುವ ಮುನ್ನ ಈ ಸಾಧನಗಳನ್ನು ಬಳಸುವಾಗ, ಆ ನೀಲಿ ಬೆಳಕು ನಿಮ್ಮ ಮೆದುಳು ವಿಶ್ರಾಂತಿಯ ಸ್ಥಿತಿಗೆ ಹೋಗುವುದನ್ನು ತಡೆಯುತ್ತದೆ. ಅಲ್ಲದೇ, ಇದು ನಿಮ್ಮ ಮೆದುಳನ್ನು ರಾತ್ರಿಯೂ ಹಗಲು ಎಂದು ಯೋಚಿಸುವಂತೆ ಮಾಡುತ್ತದೆ. ಪರಿಣಾಮವಾಗಿ, ನಿಮ್ಮ ಮೆದುಳು ಮೆಲಟೋನಿನ್ ಉತ್ಪಾದನೆಯನ್ನು ಪ್ರತಿಬಂಧಿಸುತ್ತದೆ ಮತ್ತು ರಾತ್ರಿಯಲ್ಲಿ ನಿದ್ರಿ ಮಾಡದಂತೆ ನಿಮ್ಮನ್ನು ಎಚ್ಚರವಾಗಿರಿಸುತ್ತದೆ.

    MORE
    GALLERIES

  • 68

    Healthy Lifestyle: ರಾತ್ರಿ ಮಲಗೋ ಮುನ್ನ ಈ ಅಭ್ಯಾಸಗಳನ್ನು ರೂಢಿಸಿಕೊಂಡ್ರೆ ಹೆಲ್ದಿ ಆಗಿರ್ತೀರಾ!

    ಆರೋಗ್ಯಕರ ಕೊಬ್ಬಿನ ಆಹಾರಗಳು: ಆರೋಗ್ಯಕರ ಕೊಬ್ಬಿನ ಆಹಾರಗಳನ್ನು ಬೆಳಗ್ಗೆ ತಿನ್ನುವುದು ನಿಮ್ಮ ಹಾರ್ಮೋನುಗಳನ್ನು ಸಾಕಷ್ಟು ಸಮತೋಲನಗೊಳಿಸಲು ಸಹಾಯ ಮಾಡುತ್ತದೆ. ಅಲ್ಲದೇ, ಇದು ನಿಮ್ಮ ತೂಕವನ್ನು ಕಳೆದುಕೊಳ್ಳಲು ಮತ್ತು ನಿಮ್ಮ ಸಕ್ಕರೆ ಮಟ್ಟವನ್ನು ಸ್ಥಿರವಾಗಿಡಲು ಸಹಾಯ ಮಾಡುತ್ತದೆ. ಈ ಅಭ್ಯಾಸವನ್ನು ರೂಢಿಸಿಕೊಳ್ಳುವುದರಿಂದ, ನೀವು ಬಾದಾಮಿಯಂತಹ ಬೀಜಗಳನ್ನು ರಾತ್ರಿ ನೆನೆಸಿ ಬೆಳಗ್ಗೆ ತಿನ್ನಬಹುದು. ಅವು ಕಾರ್ಬೋಹೈಡ್ರೇಟ್ಗಳನ್ನು ಹೊಂದಿರದ ಕಾರಣ, ರಕ್ತದಲ್ಲಿನ ಗ್ಲೂಕೋಸ್ ಮಟ್ಟವು ಹೆಚ್ಚಾಗುವುದಿಲ್ಲ. ಹೆಚ್ಚುವರಿಯಾಗಿ, ಇದು ಇನ್ಸುಲಿನ್ ಪ್ರತಿರೋಧವನ್ನು ಸುಧಾರಿಸುತ್ತದೆ.

    MORE
    GALLERIES

  • 78

    Healthy Lifestyle: ರಾತ್ರಿ ಮಲಗೋ ಮುನ್ನ ಈ ಅಭ್ಯಾಸಗಳನ್ನು ರೂಢಿಸಿಕೊಂಡ್ರೆ ಹೆಲ್ದಿ ಆಗಿರ್ತೀರಾ!

    ಪಟ್ಟಿಯನ್ನು ಬರೆಯಿರಿ: ನಾಳೆ ನೀವು ಮಾಡಬೇಕಾದ ಕೆಲಸಗಳನ್ನು ನೆನಪಿನಲ್ಲಿಟ್ಟುಕೊಂದು ನಾಳೆ ಆರಂಭವಾಗುವುದಕ್ಕೂ ಮುನ್ನ ಹಿಂದಿನ ರಾತ್ರಿಯೇ ಪಟ್ಟಿ ಮಾಡಿ. ಆಗ ಬೆಳಗ್ಗೆ ಎದ್ದೇಳುತ್ತಿದ್ದಂತೆಯೇ ನೀವು ಮರುದಿನವನ್ನು ಪ್ರಾರಂಭಿಸಲು ಸುಲಭವಾಗುತ್ತದೆ ಮತ್ತು ಎಲ್ಲಾ ಕೆಲಸಗಳು ಸುಗಮವಾಗಿ ನಡೆಯುತ್ತದೆ. ಮರುದಿನದ ತಯಾರಿಗಾಗಿ ಪ್ರತಿ ಸಂಜೆ 15 - 30 ನಿಮಿಷಗಳನ್ನು ಮೀಸಲಿಡಿ. ಹೀಗೆ ಮಾಡಿದರೆ ಬೆಳಗಿನ ಜಾವದಲ್ಲಿ ಯಾವುದೇ ಒತ್ತಡವಿಲ್ಲದೇ ನಿರಾಳವಾಗಿ ಕೆಲಸ ಮುಗಿಸಬಹುದು. ಅಲ್ಲದೇ, ನೀವು ಮಲಗಲು ಹೋದಾಗ ಮನಸ್ಸಿನ ಶಾಂತಿ ಸಹ ಸಿಗುತ್ತದೆ. 

    MORE
    GALLERIES

  • 88

    Healthy Lifestyle: ರಾತ್ರಿ ಮಲಗೋ ಮುನ್ನ ಈ ಅಭ್ಯಾಸಗಳನ್ನು ರೂಢಿಸಿಕೊಂಡ್ರೆ ಹೆಲ್ದಿ ಆಗಿರ್ತೀರಾ!

    ಡಿ-ಸ್ಟ್ರೆಸ್: ದಿನವಿಡೀ ನೀವು ಓಡುವ ಆಯಾಸದಿಂದ ನಿಮ್ಮ ಮನಸ್ಸನ್ನು ಶಾಂತಿಗೊಳಿಸಲು ನೀವು ಇಷ್ಟಪಡುವುದನ್ನು ಮಾಡಿ. ಅದು ಧ್ಯಾನ, ಉಸಿರಾಟದ ವ್ಯಾಯಾಮ, ಪುಸ್ತಕ ಓದುವುದು, ಲಘು ಸಂಗೀತವನ್ನು ಕೇಳುವುದು ಅಥವಾ ಕುಟುಂಬದ ಸದಸ್ಯರೊಂದಿಗೆ ಮಾತನಾಡುವುದು ಯಾವುದಾದರೂ ಆಗಿರಬಹುದು. ಇವು ಮನಸ್ಸು ಮತ್ತು ದೇಹವನ್ನು ವಿಶ್ರಾಂತಿಗೊಳಿಸುತ್ತದೆ. ಒತ್ತಡವನ್ನು ನಿವಾರಿಸುತ್ತದೆ ಮತ್ತು ನಿದ್ರೆಯ ಗುಣಮಟ್ಟವನ್ನು ಸುಧಾರಿಸುತ್ತದೆ. ಅಲ್ಲದೇ, ಮರುದಿನ ಬೆಳಗ್ಗೆ ಉಲ್ಲಾಸ ಮತ್ತು ಶಕ್ತಿಯುತವಾಗಿ ಎಚ್ಚರಗೊಳ್ಳಲು ಮತ್ತು ನಿಮ್ಮ ಕಾರ್ಯಗಳನ್ನು ಪರಿಣಾಮಕಾರಿಯಾಗಿ ನಿರ್ವಹಿಸಲು ಇದು ನಿಮಗೆ ಸಹಾಯ ಮಾಡುತ್ತದೆ.

    MORE
    GALLERIES