Sleeping Before Foods: ರಾತ್ರಿ ಮಲಗೋ ಮುನ್ನ ಈ ಪದಾರ್ಥಗಳನ್ನು ತಿನ್ನಬೇಡಿ; ಹುಷಾರ್, ಅನಾರೋಗ್ಯಕ್ಕೆ ಇವುಗಳೇ ಕಾರಣವಾಗಬಹುದು!

ಇತ್ತೀಚಿನ ದಿನಗಳಲ್ಲಿ ತುಂಬಾ ಜನರು ತಡರಾತ್ರಿಯವರೆಗೆ ಎಚ್ಚರವಾಗಿರುತ್ತಾರೆ. ಹೀಗಿದ್ದಾಗ ತಡರಾತ್ರಿಯವರೆಗೆ ಮೊಬೈಲ್, ಸಾಮಾಜಿಕ ಜಾಲತಾಣಗಳಲ್ಲಿ ಮತ್ತು ಕಂಪ್ಯೂಟರ್ ಗಳಲ್ಲಿ ಬ್ಯುಸಿ ಆಗ್ತಾರೆ. ಇದು ತಡರಾತ್ರಿ ಹಸಿವು ಉಂಟು ಮಾಡುತ್ತದೆ. ತಡರಾತ್ರಿ ತಿನ್ನುವ ಕ್ರೇವಿಂಗ್ ನಿಂದಾಗಿ ಅನಾರೋಗ್ಯಕರ ಆಹಾರ ಸೇವಿಸುತ್ತಾರೆ. ಇದು ಬೊಜ್ಜು ಸಮಸ್ಯೆಗೆ ಕಾರಣವಾಗುತ್ತದೆ.

First published:

  • 18

    Sleeping Before Foods: ರಾತ್ರಿ ಮಲಗೋ ಮುನ್ನ ಈ ಪದಾರ್ಥಗಳನ್ನು ತಿನ್ನಬೇಡಿ; ಹುಷಾರ್, ಅನಾರೋಗ್ಯಕ್ಕೆ ಇವುಗಳೇ ಕಾರಣವಾಗಬಹುದು!

    ತಡರಾತ್ರಿ ಎಚ್ಚರವಾಗಿರುವುದು ಮತ್ತು ಹಸಿವಿನಿಂದ ಚಿಪ್ಸ್, ಆಲೂ ಫಿಂಗರ್ ಚಿಪ್ಸ್ ತಿನ್ನುವುದು, ಪಿಜ್ಜಾ, ಬರ್ಗರ್ ತಿನ್ನುವುದು, ಫ್ರಿಡ್ಜ್​ನಲ್ಲಿರಿಸಿದ ತಂಪು ಪಾನೀಯ ಸೇವಿಸುವುದು, ಬನ್, ಬ್ರೆಡ್ ತಿನ್ನುವುದು ಇದೆಲ್ಲ ಮಲಗುವ ಮೊದಲು ಇಂತಹ ಆಹಾರ ಸೇವನೆ ತ್ವರಿತವಾಗಿ ತೂಕ ಹೆಚ್ಚಿಸುತ್ತದೆ. ಇದು ದೇಹಕ್ಕೆ ಹಾನಿಯುಂಟು ಮಾಡುತ್ತದೆ.

    MORE
    GALLERIES

  • 28

    Sleeping Before Foods: ರಾತ್ರಿ ಮಲಗೋ ಮುನ್ನ ಈ ಪದಾರ್ಥಗಳನ್ನು ತಿನ್ನಬೇಡಿ; ಹುಷಾರ್, ಅನಾರೋಗ್ಯಕ್ಕೆ ಇವುಗಳೇ ಕಾರಣವಾಗಬಹುದು!

    ಮಲಗುವ ಮೊದಲು ನೀವು ಸೇವಿಸುವ ಪಾಸ್ತಾ, ನ್ಯೂಡಲ್ಸ್ ಹಾಗೂ ಮೈದಾ ಪದಾರ್ಥಗಳ ಸೇವನೆಯು ಚಯಾಪಚಯ ಹಾನಿ ಮಾಡುತ್ತದೆ. ದೇಹವು ಸಾರ್ವಕಾಲಿಕ ದಣಿದ ಭಾವನೆ ಅನುಭವಿಸುತ್ತದೆ. ಇದನ್ನು ತಪ್ಪಿಸಿ, ನೀವು ಫಿಟ್ ಮತ್ತು ಆರೋಗ್ಯವಾಗಿರಲು ಉತ್ತಮ ಆಹಾರ ಕ್ರಮ ಫಾಲೋ ಮಾಡಿ.

    MORE
    GALLERIES

  • 38

    Sleeping Before Foods: ರಾತ್ರಿ ಮಲಗೋ ಮುನ್ನ ಈ ಪದಾರ್ಥಗಳನ್ನು ತಿನ್ನಬೇಡಿ; ಹುಷಾರ್, ಅನಾರೋಗ್ಯಕ್ಕೆ ಇವುಗಳೇ ಕಾರಣವಾಗಬಹುದು!

    ರಾತ್ರಿಯ ಊಟವನ್ನು ರಾತ್ರಿ 8 ಗಂಟೆಯೊಳಗೆ ಮುಗಿಸಿ, 10 ಗಂಟೆಗೆ ಮಲಗುವ ಅಭ್ಯಾಸ ರೂಢಿಸಿಕೊಳ್ಳಿ ಮತ್ತು ಬೆಳಗ್ಗೆ 6 ಗಂಟೆಗೆ ಎದ್ದೇಳಿ. ಇದು ನಿಮ್ಮನ್ನು ಆರೋಗ್ಯವಾಗಿರಿಸುತ್ತದೆ. ಜೊತೆಗೆ ಮಲಗುವ ಮೊದಲು ತಿನ್ನುವುದನ್ನು ತಪ್ಪಿಸಿ. ಅದರಲ್ಲೂ ಮಲಗುವ ಮೊದಲು ಅದಲ್ಲಿ ನಿಯಮಿತವಾದ ಆಹಾರಕ್ರಮವನ್ನು ಹೊಂದಿರುವುದು ಬಹಳ ಮುಖ್ಯ.

    MORE
    GALLERIES

  • 48

    Sleeping Before Foods: ರಾತ್ರಿ ಮಲಗೋ ಮುನ್ನ ಈ ಪದಾರ್ಥಗಳನ್ನು ತಿನ್ನಬೇಡಿ; ಹುಷಾರ್, ಅನಾರೋಗ್ಯಕ್ಕೆ ಇವುಗಳೇ ಕಾರಣವಾಗಬಹುದು!

    ಇದಲ್ಲದೇ ರಾತ್ರಿ ಮಲಗುವ ಮೊದಲು ಈ ಆಹಾರ ಸೇವನೆ ನಿಮ್ಮ ಆರೋಗ್ಯ ಹಾನಿ ಮಾಡುತ್ತದೆ. ಮಲಗುವ ಮೊದಲು ಆಹಾರ ಸೇವಿಸುವುದು ದೇಹದ ಕಾರ್ಯ ಚಟುವಟಿಕೆಗೆ ಅಡ್ಡಿ ಮಾಡುತ್ತದೆ. ಇದು ಹೊಟ್ಟೆಗೆ ಸಂಬಂಧಿಸಿದ ಸಮಸ್ಯೆ ಹೆಚ್ಚಿಸುತ್ತದೆ. ಲಿವರ್ ಮತ್ತು ಮೆದುಳಿನ ಆರೋಗ್ಯಕ್ಕೆ ಹಾನಿ ಮಾಡುತ್ತದೆ.

    MORE
    GALLERIES

  • 58

    Sleeping Before Foods: ರಾತ್ರಿ ಮಲಗೋ ಮುನ್ನ ಈ ಪದಾರ್ಥಗಳನ್ನು ತಿನ್ನಬೇಡಿ; ಹುಷಾರ್, ಅನಾರೋಗ್ಯಕ್ಕೆ ಇವುಗಳೇ ಕಾರಣವಾಗಬಹುದು!

    ಹಾಗಾಗಿ ರಾತ್ರಿ ಮಲಗುವ ಮೊದಲು ಬೊಜ್ಜು ಹೆಚ್ಚಿಸುವ ಈ ಆಹಾರ ಸೇವನೆ ತಪ್ಪಿಸಿ. ಎಣ್ಣೆಯುಕ್ತ, ಕರಿದ ಮತ್ತು ಹೆಚ್ಚಿನ ಕೊಬ್ಬಿನ ಆಹಾರ ಸೇವಿಸಬೇಡಿ. ರಾತ್ರಿ ಮಲಗುವ ಮೊದಲು ಚೀಸ್, ಕೆಂಪು ಮಾಂಸ, ಬರ್ಗರ್ ಮತ್ತು ಪಿಜ್ಜಾ ಸೇವನೆ ತಪ್ಪಿಸಿ. ಆಮ್ಲೀಯ ಮತ್ತು ಮಸಾಲೆಯುಕ್ತ ಆಹಾರ ಸೇವನೆ ತಪ್ಪಿಸಿ. ಇದು ಹೊಟ್ಟೆ ನೋವು ಮತ್ತು ಆಸಿಡ್ ರಿಫ್ಲಕ್ಸ್ಗೆ ಕಾರಣವಾಗುತ್ತದೆ.

    MORE
    GALLERIES

  • 68

    Sleeping Before Foods: ರಾತ್ರಿ ಮಲಗೋ ಮುನ್ನ ಈ ಪದಾರ್ಥಗಳನ್ನು ತಿನ್ನಬೇಡಿ; ಹುಷಾರ್, ಅನಾರೋಗ್ಯಕ್ಕೆ ಇವುಗಳೇ ಕಾರಣವಾಗಬಹುದು!

    ರಾತ್ರಿ ಮಲಗುವ ಮುನ್ನ ಕಡಲೆಬೇಳೆ ಹಿಟ್ಟಿನ ಖಾದ್ಯಗಲ ಸೇವನೆ ತಪ್ಪಿಸಿ. ಕಪ್ಪು ಬೇಳೆ, ಕೋಸುಗಡ್ಡೆ, ಕಿಡ್ನಿ ಬೀನ್ಸ್, ಗ್ರಾಂ, ಎಲೆಕೋಸು ಮತ್ತು ಹೂಕೋಸು ಪದಾರ್ಥ ಸೇವನೆ ತಪ್ಪಿಸಿ. ಇದು ಜೀರ್ಣವಾಗಲು ಸಮಯ ತೆಗೆದುಕೊಳ್ಳುತ್ತದೆ. ರಾತ್ರಿ ಮಲಗುವ ಮೊದಲು ಇವುಗಳ ಸೇವನೆ ಜೀರ್ಣಕ್ರಿಯೆ ಕೊರತೆ ಉಂಟು ಮಾಡುತ್ತದೆ. ಗ್ಯಾಸ್ಟ್ರಿಕ್ ಆಗುತ್ತದೆ.

    MORE
    GALLERIES

  • 78

    Sleeping Before Foods: ರಾತ್ರಿ ಮಲಗೋ ಮುನ್ನ ಈ ಪದಾರ್ಥಗಳನ್ನು ತಿನ್ನಬೇಡಿ; ಹುಷಾರ್, ಅನಾರೋಗ್ಯಕ್ಕೆ ಇವುಗಳೇ ಕಾರಣವಾಗಬಹುದು!

    ರಾತ್ರಿ ಮಲಗುವ ಮೊದಲು ಹೆಚ್ಚಿನ ಫೈಬರ್ ಆಹಾರ ಸೇವನೆ ತಪ್ಪಿಸಿ. ಫೈಬರ್ ಭರಿತ ಆಹಾರಗಳಾದ ಹಣ್ಣು, ಸಲಾಡ್‌, ಮೊಳಕೆ ಕಾಳು ಸೇವನೆಯನ್ನು ರಾತ್ರಿ ಮಾಡಿದರೆ ಹೊಟ್ಟೆನೋವಿಗೆ ಕಾರಣವಾಗುತ್ತದೆ. ಕಾಫಿ ಸೇವನೆ ತಪ್ಪಿಸಿ. ಇದು ನರಮಂಡಲದ ಮೇಲೆ ಪರಿಣಾಮ ಬೀರುತ್ತದೆ. ನಿದ್ರಾಹೀನತೆಗೆ ಕಾರಣವಾಗಿದೆ.

    MORE
    GALLERIES

  • 88

    Sleeping Before Foods: ರಾತ್ರಿ ಮಲಗೋ ಮುನ್ನ ಈ ಪದಾರ್ಥಗಳನ್ನು ತಿನ್ನಬೇಡಿ; ಹುಷಾರ್, ಅನಾರೋಗ್ಯಕ್ಕೆ ಇವುಗಳೇ ಕಾರಣವಾಗಬಹುದು!

    ರಾತ್ರಿ ಮಲಗುವ ಮೊದಲು ಮದ್ಯ ಮತ್ತು ದ್ರವ ಪದಾರ್ಥ ಸೇವನೆ ತಪ್ಪಿಸಿ. ಇದು ಮೂತ್ರ ವಿಸರ್ಜನೆ ಹೆಚ್ಚಿಸುತ್ತದೆ. ರಾತ್ರಿಯ ನಿದ್ದೆಗೆ ಅಡ್ಡಿ ಮಾಡುತ್ತದೆ. ಹಾಗಾಗಿ ರಾತ್ರಿ ರಸ, ಮದ್ಯ ಮತ್ತು ಇತರ ಪಾನೀಯ ಸೇವನೆ ತಪ್ಪಿಸಿ.

    MORE
    GALLERIES