Health Tips: ಖಾಲಿ ಹೊಟ್ಟೆಯಲ್ಲಿ ಕಾಫಿ-ಟೀ ಕುಡಿದರೆ ಅಪಾಯಕ್ಕೆ ಆಹ್ವಾನ ಕೊಟ್ಟಂತೆ..!
ತುಂಬಾ ಜನ ಬೆಳಿಗ್ಗೆ ಎದ್ದ ಕೂಡಲೇ ಹಲ್ಲುಜ್ಜದೆಯೇ ಕಾಫಿ ಕುಡಿಯೋ ಅಭ್ಯಾಸ ಮಾಡಿಕೊಂಡಿರುತ್ತಾರೆ. ಆದರೆ ಹೀಗೆ ಖಾಲಿ ಹೊಟ್ಟೆಯಲ್ಲಿ ಕಾಫಿ ಹಾಗೂ ಟೀ ಕುಡಿಯೋದು ಎಷ್ಟು ಸರಿ, ಅದರಿಂದ ಆಗುವ ಸಮಸ್ಯೆಗಳ ಬಗ್ಗೆ ತಜ್ಞರು ಹೇಳೋದು ಹೀಗೆ. (ಚಿತ್ರಗಳು ಕೃಪೆ: ಟ್ವಿಟರ್ ಹಾಗೂ ಇನ್ಸ್ಟಾಗ್ರಾಂ)
ಬೆಳಗೆದ್ದು ಕಾಫಿ ಕುಡಿಯಲಿಲ್ಲ ಅಂದರೆ ತುಂಬಾ ಜನರಿಗೆ ದಿನವೇ ಆರಂಭ ಆಗೋದಿಲ್ಲ. ಕಾಫಿಯಲ್ಲಿರುವ ಕೆಫಿನ್ ಮೆದುಳನ್ನು ತಕ್ಷಣ ಚಾರ್ಜ್ ಮಾಡುತ್ತದೆ ಅನ್ನೋದು ಸತ್ಯ,. ಆದರೆ ಖಾಲಿ ಹೊಟ್ಟೆಯಲ್ಲಿ ಕಾಫಿ ಕುಡಿಯೋದ್ರಿಂದ ಸಾಕಷ್ಟು ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ ಎನ್ನುತ್ತಾರೆ ವೈದ್ಯರು.
2/ 8
ಇನ್ನು ಕೆಲವರು ಊಟ ಮುಗಿದ ನಂತರ ಕಾಫಿ ಅಥವಾ ಟೀ ಕುಡಿಯುತ್ತಾರೆ.
3/ 8
ಟಫನ್ಗೆ ಮೊದಲು ಹಾಗೂ ನಂತರ ಕಾಫಿ ಕುಡಿಯೋದು ಒಳ್ಳೆಯ ಅಭ್ಯಾಸವಲ್ಲ ಎನ್ನುತ್ತಾರೆ ತಜ್ಞರು. ಸೇವಿಸಿದ ಆಹಾರದಲ್ಲಿರುವ ಪೋಷಕಾಂಶಗಳು ದೇಹಕ್ಕೆ ಸೇರದಂತೆ ಕಾಫಿ ತೆಡೆಯುತ್ತದೆ ಎನ್ನುತ್ತಾರೆ.
4/ 8
ಈ ಕಾರಣದಿಂದಾಗಿಯೇ ಕಾಫಿ ಹಾಗೂ ಟೀ ಕುಡಿಯುವ ವೇಳೆಯ ಬಗ್ಗೆ ಗಮನ ಹರಿಸುವುದು ಒಳ್ಳೆಯದು. ತಿಂಡಿ ತಿಂದ ಸ್ವಲ್ಪ ಸಮಯದ ನಂತರ ಕಾಫಿ ಅಥವಾ ಟೀ ಕುಡಿಯುವುದು ಉತ್ತಮ.
5/ 8
ಹೆಚ್ಚಾಗಿ ಅಂದರೆ ಅನಾವಶ್ಯಕವಾಗಿ ಟೀ -ಕಾಫಿ ಕುಡಿದರೆ ಹಸಿವು ಕಡಿಮೆಯಾಗುತ್ತದೆ. ನಂತರ ಗ್ಯಾಸ್ಟ್ರಿಕ್ಗೆ ಸಂಬಂಧಿಸಿದ ಸಮಸ್ಯೆಗಳು ಎದುರಾಗುತ್ತವೆ.
6/ 8
ರಾತ್ರಿ ಊಟ ಮುಗಿದ ನಂತರ ಕಾಫಿ ಕುಡಿಯುವ ಅಭ್ಯಾಸ ಇದ್ದರೆ ಅದನ್ನು ಆದಷ್ಟು ಬೇಗ ಬದಲಾಯಿಸಿಕೊಳ್ಳಿ. ಇಲ್ಲವಾದಲ್ಲಿ ರಾತ್ರಿ ಸರಿಯಾಗಿ ನಿದ್ದೆ ಬರುವುದಿಲ್ಲವಂತೆ.
7/ 8
ಬೆಳಿಗ್ಗೆ ಎದ್ದ ಕೂಡಲೇ ಕಾಫಿ ಅಥವಾ ಟೀ ಕುಡಿಯುವ ಬದಲು ಕಷಾಯ ಹಾಗೂ ಹಾಲನ್ನು ಕುಡಿದರೆ ಒಳ್ಳೆಯದು ಅಂತಾರೆ ವೈದ್ಯರು.
8/ 8
ಟೀ-ಕಾಫಿಯನ್ನು ದಿನದಲ್ಲಿ ಎರಡು ಸಲ ಮಾತ್ರ ಕುಡಿದರೆ ಒಳ್ಳೆಯದು ಎನ್ನುತ್ತಾರೆ ತಜ್ಞರು.