Do's and Don'ts Of Lift: ಲಿಫ್ಟ್‌ನಲ್ಲಿ ಹೋಗುವಾಗ ಎಚ್ಚರ, ಈ ಕೆಲಸ ತಪ್ಪಿಯೂ ಮಾಡದಿರಿ

Do's and Don'ts Of Lift: ಎತ್ತರ ಫ್ಲ್ಯಾಟ್​​ಗಳಲ್ಲಿ ವಾಸಿಸುವ ಜನರು ಲಿಫ್ಟ್​ ಅನ್ನೇ ಹೆಚ್ಚಾಗಿ ಬಳಸ್ತಾರೆ. ಆದ್ರೆ ಲಿಫ್ಟ್​ ಬಳಸುವಾಗ ಏನೆಲ್ಲಾ ಮಾಡಬಹುದು ಮತ್ತು ಮಾಡಬಾರದು ಎಂದು ಅವರಿಗೆ ತಿಳಿದಿರುವುದಿಲ್ಲ. ಹಾಗಿದ್ರೆ ಇಲ್ಲಿದೆ ನೋಡಿ ಲಿಫ್ಟ್​ನಲ್ಲಿ ಮಾಡಬಹುದಾದ ಮತ್ತು ಮಾಡಬಾರದ ಕೆಲಸಗಳ ಮಾಹಿತಿ.

First published:

  • 18

    Do's and Don'ts Of Lift: ಲಿಫ್ಟ್‌ನಲ್ಲಿ ಹೋಗುವಾಗ ಎಚ್ಚರ, ಈ ಕೆಲಸ ತಪ್ಪಿಯೂ ಮಾಡದಿರಿ

    ಇದು ಟೆಕ್ನಾಲಜಿ ಯುಗ. ದಿನಕಳೆದಂತೆ ಹೊಸ ಹೊಸ ಟೆಕ್ನಾಲಜಿಗಳನ್ನು ಸಂಶೋಧಕರು ಅನ್ವೇಷಿಸುತ್ತಾ ಇರುತ್ತಾರೆ. ಹೆಚ್ಚಿನ ಜನರು ಇತ್ತೀಚೆಗೆ ಕಚೇರಿ, ಎಲ್ಲಾದರೂ ಹೋದಾಗ ಮೆಟ್ಟಿಲುಗಳನ್ನು ಬಳಸೋ ಬದಲು ಲಿಫ್ಟ್​ಗಳನ್ಬೇ ಬಳಸ್ತಾರೆ. ಆದ್ರೆ ಲಿಫ್ಟ್​ ಬಗ್ಗೆ ಹಲವಾರು ತಿಳಿದಿರದ ಸಂಗತಿಗಳಿವೆ.

    MORE
    GALLERIES

  • 28

    Do's and Don'ts Of Lift: ಲಿಫ್ಟ್‌ನಲ್ಲಿ ಹೋಗುವಾಗ ಎಚ್ಚರ, ಈ ಕೆಲಸ ತಪ್ಪಿಯೂ ಮಾಡದಿರಿ

    ಕೆಲವೊಮ್ಮೆ ಲಿಫ್ಟ್​ಗಳಲ್ಲಿ ಹೋಗುವಾಗ ತನ್ನಷ್ಟಕ್ಕೇ ಆಫ್​ ಆಗುತ್ತವೆ. ಈ ಸಂದರ್ಭದಲ್ಲಿ ಹೆಚ್ಚಿನವರು ಲಿಫ್ಟ್​ನಲ್ಲೇ ಸಿಕಿಕೊಳ್ಳುತ್ತಾರೆ. ಹಾಗಿದ್ರೆ ಲಿಫ್ಟ್​ನಲ್ಲಿ ಸಿಕ್ಕಿಕೊಂಡಾಗ ಏನು ಮಾಡ್ಬೇಕು ಮತ್ತು ಮಾಡಬಾರದಂತಹ ವಿಷಯಗಳು ಇಲ್ಲಿವೆ ನೋಡಿ.

    MORE
    GALLERIES

  • 38

    Do's and Don'ts Of Lift: ಲಿಫ್ಟ್‌ನಲ್ಲಿ ಹೋಗುವಾಗ ಎಚ್ಚರ, ಈ ಕೆಲಸ ತಪ್ಪಿಯೂ ಮಾಡದಿರಿ

    ಯಾವತ್ತೂ ಅಷ್ಟೇ ಲಿಫ್ಟ್​ ಬಳಸುವಾಗ ಬಹಳ ಜಾಗರೂಕರತೆಯಿಂದಿರಬೇಕು. ಯಾವುದೇ ಅರ್ಜೆಂಟ್​​ನಲ್ಲಿ ಓವರ್​ಲೋಡ್​ ಮಾಡ್ಬೇಡಿ. ಲಿಫ್ಟ್​ ಬಳಸೋ ಮೊದಲು ಅದರಲ್ಲಿ ಒಂದೇ ಬಾರಿ ಸಾಗಬಹುದಾದ ಜನರ ಸಂಖ್ಯೆಯ ಮೇಲಿನ ಮಿತಿಯನ್ನು ತಿಳಿದುಕೊಳ್ಳಿ.

    MORE
    GALLERIES

  • 48

    Do's and Don'ts Of Lift: ಲಿಫ್ಟ್‌ನಲ್ಲಿ ಹೋಗುವಾಗ ಎಚ್ಚರ, ಈ ಕೆಲಸ ತಪ್ಪಿಯೂ ಮಾಡದಿರಿ

    ನೀವು ಒಂದು ವೇಳೆ ಲಿಫ್ಟ್​ನಲ್ಲಿ ಸಿಲುಕಿಕೊಂಡಾಗ ಮೊದಲಿಗೆ ಅಲ್ಲಿರೋ ಅಲಾರಂ ಬಟನ್ ಅನ್ನು ಪ್ರೆಸ್ ಮಾಡಿ. ನಂತರ ಫೋನ್​ನಲ್ಲಿ ನಿಮ್ಮ ಸ್ನೇಹಿತರಿಗೆ ಅಥವಾ ಅಲ್ಲಿರುವವರಿಗೆ ತಿಳಿಸಿ. ಇನ್ನು ನೀವು ಹೋಗೋ ಲಿಫ್ಟ್​ ಸರಿಯಾಗಿ ಕಾರ್ಯನಿರ್ವಹಿಸುತ್ತಿದ್ಯಾ ಎಂದು ಮೊದಲು ನೋಡಿಕೊಳ್ಳಿ.

    MORE
    GALLERIES

  • 58

    Do's and Don'ts Of Lift: ಲಿಫ್ಟ್‌ನಲ್ಲಿ ಹೋಗುವಾಗ ಎಚ್ಚರ, ಈ ಕೆಲಸ ತಪ್ಪಿಯೂ ಮಾಡದಿರಿ

    ಲಿಫ್ಟ್​ನಲ್ಲಿ ಸಿಕ್ಕಿಕೊಂಡಾಗ ಮೊದಲು ಏನು ಮಾಡ್ಬೇಕು?: ನೀವು ಯಾವತ್ತಾದ್ರು ಲಿಫ್ಟ್​ ಕೈ ಕೊಟ್ಟು ಸಿಕ್ಕಿಬಿದ್ದಾಗ, ತಕ್ಷಣ ಅಲ್ಲಿರುವ ಫೋನ್​ ತೆಗೆದು ಭದ್ರತಾ ಸಿಬ್ಬಂದಿಗೆ ಮಾಹಿತಿ ನೀಡಿ. ಆದರೆ ಆ ಸಂದರ್ಭದಲ್ಲಿ ಯಾವತ್ತೂ ಆಫ್​ ಅಥವಾ ಆನ್​ ಮಾಡಲು ಪದೇ ಪದೇ ಒತ್ತಬೇಡಿ.

    MORE
    GALLERIES

  • 68

    Do's and Don'ts Of Lift: ಲಿಫ್ಟ್‌ನಲ್ಲಿ ಹೋಗುವಾಗ ಎಚ್ಚರ, ಈ ಕೆಲಸ ತಪ್ಪಿಯೂ ಮಾಡದಿರಿ

    ಇನ್ನು ಲಿಫ್ಟ್​ ಕೈಕೊಟ್ಟ ಬಗ್ಗೆ ಭದ್ರತಾ ಸಿಬ್ಬಂದಿಗೆ ಮಾಹಿತಿ ನೀಡಿದ ಮೇಲೂ ಏನೂ ಕ್ರಮ ಕೈಗೊಳ್ಳದಿದ್ದರೆ, ತಕ್ಷಣ ಪೊಲೀಸರಿಗೆ ಮಾಹಿತಿ ನೀಡಿ. ಹಾಗೆಯೇ ತರಾತುರಿಯಲ್ಲಿ ಯಾವತ್ತೂ ಲಿಫ್ಟ್​ ಒಳಗಿರುವ ಬಟನ್​ಗಳನ್ನು ಪ್ರೆಸ್​ ಮಾಡಲು ಹೋಗ್ಬೇಡಿ. ಇದರಿಂದ ಲಿಫ್ಟ್ ಮತ್ತಷ್ಟು ಹಾನಿಯಾಗತ್ತದೆ.

    MORE
    GALLERIES

  • 78

    Do's and Don'ts Of Lift: ಲಿಫ್ಟ್‌ನಲ್ಲಿ ಹೋಗುವಾಗ ಎಚ್ಚರ, ಈ ಕೆಲಸ ತಪ್ಪಿಯೂ ಮಾಡದಿರಿ

    ಅದೇ ರೀತಿ ಒಂದು ವೇಳೆ ನಿಮ್ಮ ಪಕ್ಕದಲ್ಲಿ ಭೂಕಂಪ, ಬೆಂಕಿ ಅವಘಡಗಳಾದಾಗ ಯಾವತ್ತೂ ಲಿಫ್ಟ್​ ಬಳಸಲೇ ಬಾರದು. ಯಾಕೆಂದರೆ ಈ ಸಂದರ್ಭದಲ್ಲಿ ಲಿಫ್ಟ್​ ಸರಿಯಾಗಿ ಕಾರ್ಯನಿರ್ವಹಿಸುವುದಿಲ್ಲ. ಇನ್ನು ಈ ರೀತಿಯ ಅವಘಡಗಳು ಆಗುವ ಸಂದರ್ಭಗಳಿದ್ರು ಲಿಫ್ಟ್ ಬಳಸಲೇಬಾರದು.

    MORE
    GALLERIES

  • 88

    Do's and Don'ts Of Lift: ಲಿಫ್ಟ್‌ನಲ್ಲಿ ಹೋಗುವಾಗ ಎಚ್ಚರ, ಈ ಕೆಲಸ ತಪ್ಪಿಯೂ ಮಾಡದಿರಿ

    ಹಾಗೆಯೇ ಲಿಫ್ಟ್​ ಒಳಗೆ ಎಂದಿಗೂ ಜಿಗಿಯಬಾರದು ಮತ್ತು ಜೋರಾಗಿ ಮಾತನಾಡಬಾರದು. ಇನ್ನು ಚಿಕ್ಕ ಮಕ್ಕಳನ್ನು ಒಂಟಿಯಾಗಿ ಲಿಫ್ಟ್​ನಲ್ಲಿ ಬಿಡಬೇಡಿ. ಆದರೆ ಅಗತ್ಯವಾಗಿ ಹೋಗಬೇಕಂದ್ರೆ ಲಿಫ್ಟ್​ ಬಳಕೆ ಬಗ್ಗೆ ಮಾಹಿತಿಯನ್ನು ನೀಡಿ ಕಳುಹಿಸಬೇಕು.

    MORE
    GALLERIES