Hair Loss: ಕೂದಲಿಗೆ ಶಾಂಪೂ ಬಳಸುವಾಗ ಈ ತಪ್ಪು ಮಾಡಿದ್ರೆ ತಲೆಹೊಟ್ಟು ಹೆಚ್ಚಾಗುತ್ತೆ
Haircare Tips: ಕೂದಲು ಉದುರುತ್ತಿದ್ದರೆ, ಕೂದಲಿನ ಆರೈಕೆ ಮಾಡುವುದು ಅವಶ್ಯಕ. ಅದಕ್ಕಾಗಿ ಒಳ್ಳೆಯ ಆಹಾರ ತೆಗೆದುಕೊಳ್ಳಿ. ಆದರೆ, ಅದೇ ಸಮಯದಲ್ಲಿ, ಕೂದಲಿಗೆ ಶಾಂಪೂ ಹಾಕುವಾಗ ಯಾವುದೇ ತಪ್ಪುಗಳನ್ನು ಮಾಡಬಾರದು.
ಕೂದಲಿನ ಸಮಸ್ಯೆ ಪ್ರಾರಂಭವಾದಾಗ, ನಾವು ಉತ್ತಮ ಆಹಾರವನ್ನು ತೆಗೆದುಕೊಳ್ಳಲು ಹಾಗೂ ಕೆಲ ಉತ್ಪನ್ನಗಳನ್ನು ಬಳಸಲು ಪ್ರಾರಂಭಿಸುತ್ತೇವೆ. ಉತ್ತಮ ಆಹಾರ ಸೇವಿಸಿದರೂ ಕೂದಲು ಉದುರುತ್ತಿದ್ದರೆ ಸರಿಯಾದ ಶಾಂಪೂ ಬಳಸುತ್ತಿದ್ದೀರಾ? ಶಾಂಪೂ ಕೂದಲನ್ನು ಸರಿಯಾಗಿ ಸ್ವಚ್ಛಗೊಳಿಸುತ್ತದೆಯೇ ಎಂಬುದರ ಬಗ್ಗೆ ಸಹ ಗಮನ ನೀಡಬೇಕಾಗುತ್ತದೆ.
2/ 8
ಹಲವರಿಗೆ ಶಾಂಪೂವನ್ನು ಸರಿಯಾಗಿ ಹಚ್ಚಿಕೊಳ್ಳುವುದು ಗೊತ್ತಿಲ್ಲ. ಕೆಲವರು ಶಾಂಪೂವನ್ನು ನೇರವಾಗಿ ಕೂದಲಿಗೆ ಹಚ್ಚುತ್ತಾರೆ. ಈ ವಿಧಾನವು ತಪ್ಪು. ಬೆಚ್ಚಗಿನ ನೀರಿನಿಂದ ಶಾಂಪೂ ಮಿಶ್ರಣ ಮಾಡಿ, ಅದನ್ನು ನಿಮ್ಮ ಕೂದಲಿಗೆ ಹಚ್ಚಿ. ನಿಮ್ಮ ಕೂದಲನ್ನು ಶುದ್ಧ ನೀರಿನಿಂದ ತೊಳೆಯಿರಿ
3/ 8
ಕಂಡಿಷನರ್ ಬಳಕೆ ನಿಮ್ಮ ಕೂದಲನ್ನು ತೊಳೆದ ನಂತರ ನೀವು ಕಂಡೀಷನರ್ ಅನ್ನು ಬಳಸಬೇಕು. ಕೂದಲಿನ ಬೇರುಗಳಿಗೆ ಕಂಡಿಷನರ್ ಅನ್ನು ಹಚ್ಚಬಾರದು. ಕೂದಲಿಗೆ ಕಂಡೀಷನರ್ ಹಚ್ಚಿದ ನಂತರ 2 ನಿಮಿಷಗಳ ನಂತರ ನೀರಿನಿಂದ ಕೂದಲನ್ನು ಸ್ವಚ್ಛವಾಗಿ ತೊಳೆಯಿರಿ
4/ 8
ಪ್ರತಿದಿನ ಶಾಂಪೂ ಬಳಕೆ ಮಾಡಬೇಡಿ ಕೆಲವರು ಪ್ರತಿದಿನ ತಮ್ಮ ಕೂದಲಿಗೆ ಶಾಂಪೂ ಬಳಕೆ ಮಾಡುತ್ತಾರೆ, ಇದು ಕೂದಲಿನ ನೈಸರ್ಗಿಕ ತೈಲಗಳನ್ನು ತೆಗೆದುಹಾಕಿ,ಅದನ್ನು ಒಣಗಿಸುತ್ತದೆ. ಕೂದಲ ತಜ್ಞರ ಸಲಹೆಯ ಪ್ರಕಾರ ಪ್ರತಿ ದಿನ ಕೂದಲಿಗೆ ಶಾಂಪೂ ಹಾಕುವ ಅಭ್ಯಾಸವಿರುವವರು ರಾತ್ರಿ ಮಲಗುವ ಮುನ್ನ ಕೂದಲಿಗೆ ಎಣ್ಣೆ ಹಚ್ಚಿ
5/ 8
ನಿಮ್ಮ ಕೂದಲಿಗೆ ಸೂಕ್ತವಾಗದ ಶಾಂಪೂವನ್ನು ಕೂದಲಿಗೆ ಹಚ್ಚುವುದರಿಂದ ಕೂದಲು ದುರ್ಬಲವಾಗುತ್ತದೆ. ಇದು ಕೂದಲು ಉದುರುವಿಕೆಗೂ ಕಾರಣವಾಗುತ್ತದೆ. ಹಾಗಾಗಿ ನಿಮ್ಮ ಕೂದಲಿಗೆ ಬೇಕಾದ ಶಾಂಪೂ ಆಯ್ಕೆ ಮಾಡಿಕೊಳ್ಳಿ.
6/ 8
ಸಲ್ಫೇಟ್ ಮುಕ್ತ ಶಾಂಪೂ ಬಳಸಿ ಸಲ್ಫೇಟ್ ಮುಕ್ತ ಶ್ಯಾಂಪೂಗಳು ಸೌಮ್ಯವಾಗಿರುತ್ತವೆ. ಇದು ಕೂದಲಿಗೆ ಹಾನಿ ಮಾಡುವುದಿಲ್ಲ. ಈ ಶಾಂಪೂಗಳು ಕೆಮಿಕಲ್ ಮುಕ್ತ ಮಾತ್ರವಲ್ಲದೆ ಕೂದಲನ್ನು ಮೃದುವಾಗಿಡುತ್ತವೆ.
7/ 8
ಹರ್ಬಲ್ ಶಾಂಪೂ ಯಾವುದೇ ಗಿಡಮೂಲಿಕೆ, ಆಯುರ್ವೇದ ಶಾಂಪೂಗಳಲ್ಲಿ ಹಾನಿಕಾರಕ ರಾಸಾಯನಿಕಗಳನ್ನು ಕಡಿಮೆ ಬಳಸಲಾಗುತ್ತದೆ. ಇದು ಕೂದಲಿನ ಬೇರುಗಳಿಗೆ ಹಾನಿಯನ್ನು ಕಡಿಮೆ ಮಾಡುತ್ತದೆ ಮತ್ತು ಕೂದಲು ಉದುರುವಿಕೆಯನ್ನು ಕಡಿಮೆ ಮಾಡುತ್ತದೆ.
8/ 8
ಡ್ರೈಯರ್ ಅನ್ನು ಬಳಸಬೇಡಿ ಶಾಂಪೂ ಮಾಡಿದ ತಕ್ಷಣ ನಿಮ್ಮ ಕೂದಲನ್ನು ಒಣಗಿಸಲು ಡ್ರೈಯರ್ ಅನ್ನು ಬಳಸಬೇಡಿ. ಕೂದಲನ್ನು ಯಾವಾಗಲೂ ಒಣಗಿಸುವುದು ಉತ್ತಮ. ಕೂದಲು ಬೇಗ ಒಣಗಲು ಹೀಟ್ ಮೋಡ್ ನಲ್ಲಿ ಡ್ರೈಯರ್ ಅನ್ನು ಬಿಟ್ಟರೆ ಕೂದಲಿಗೆ ಹಾನಿಯಾಗಬಹುದು