Neem Leaves: ಕಹಿ ಬೇವಿನಲ್ಲಿವೆ 'ಸಿಹಿ' ಗುಣಗಳು! ಮಧುಮೇಹಿಗಳ ಆರೋಗ್ಯಕ್ಕೆ ಇವೇ ಅಮೃತ!

ಬೇವು ಕಹಿ ಹೀಗಾಗಿ ಇದನ್ನು ಅನೇಕರು ಇಷ್ಟ ಪಡುವುದಿಲ್ಲ. ಆದರೆ ಇದರ ಪ್ರಯೋಜನಗಳ ಬಗ್ಗೆ ಆಯುರ್ವೇದ ಹೇಳುತ್ತದೆ. ಪ್ರತಿದಿನ ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಬೇವಿನ ಸೊಪ್ಪನ್ನು ತಿಂದರೆ ದೇಹದ ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ. ಜೊತೆಗೆ ದೈಹಿಕ ಅಸ್ವಸ್ಥತೆ ಕಡಿಮೆಯಾಗುತ್ತದೆ.

First published:

  • 18

    Neem Leaves: ಕಹಿ ಬೇವಿನಲ್ಲಿವೆ 'ಸಿಹಿ' ಗುಣಗಳು! ಮಧುಮೇಹಿಗಳ ಆರೋಗ್ಯಕ್ಕೆ ಇವೇ ಅಮೃತ!

    ಬೇವು ಅಂದ್ರೆ ಅಯ್ಯಪ್ಪಾ ಕಹಿ ಅಂದುಕೊಂಡು ದೂರ ಓಡುವವರೇ ಹೆಚ್ಚು. ಬೇವಿನ ಮರದ ಕಾಂಡ, ಎಲೆ, ಕಾಯಿ, ಬೀಜ ಎಲ್ಲವನ್ನೂ ಔಷಧವಾಗಿ ಬಳಕೆ ಮಾಡಲಾಗುತ್ತದೆ. ಹಿಂದಿನ ಕಾಲದಲ್ಲಿ ಜನರು ಬೇವಿನ ಕಡ್ಡಿಯಿಂದ ಹಲ್ಲುಜ್ಜುತ್ತಿದ್ದರು. ಇದರ ಎಲೆಗಳನ್ನು ಔಷಧ ತಯಾರಿಸಲು ಉಪಯೋಗಿಸುತ್ತಾರೆ. ಇದರ ಬೀಜಗಳನ್ನು ಔಷಧವಾಗಿ ಬಳಸುತ್ತಾರೆ.

    MORE
    GALLERIES

  • 28

    Neem Leaves: ಕಹಿ ಬೇವಿನಲ್ಲಿವೆ 'ಸಿಹಿ' ಗುಣಗಳು! ಮಧುಮೇಹಿಗಳ ಆರೋಗ್ಯಕ್ಕೆ ಇವೇ ಅಮೃತ!

    ಬೇವು ಕಹಿ ಹೀಗಾಗಿ ಇದನ್ನು ಅನೇಕರು ಇಷ್ಟ ಪಡುವುದಿಲ್ಲ. ಆದರೆ ಇದರ ಆಶ್ಚರ್ಯಕರ ಪ್ರಯೋಜನಗಳ ಬಗ್ಗೆ ಆಯುರ್ವೇದ ಹೇಳುತ್ತದೆ. ಪ್ರತಿದಿನ ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಬೇವಿನ ಸೊಪ್ಪನ್ನು ತಿಂದರೆ ದೇಹದ ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ. ಜೊತೆಗೆ ದೈಹಿಕ ಅಸ್ವಸ್ಥತೆ ಕಡಿಮೆಯಾಗುತ್ತದೆ.

    MORE
    GALLERIES

  • 38

    Neem Leaves: ಕಹಿ ಬೇವಿನಲ್ಲಿವೆ 'ಸಿಹಿ' ಗುಣಗಳು! ಮಧುಮೇಹಿಗಳ ಆರೋಗ್ಯಕ್ಕೆ ಇವೇ ಅಮೃತ!

    ಬೇವಿನ ಸೊಪ್ಪನ್ನು ಹಲವು ಕಾಯಿಲೆಗಳ ಕಡಿಮೆ ಮಾಡಲು ಬಳಕೆ ಮಾಡಲಾಗುತ್ತದೆ. ಅಧಿಕ ರಕ್ತದ ಸಕ್ಕರೆ ಸಮಸ್ಯೆ ನಿವಾರಣೆಗೆ ಇದು ಸಹಕಾರಿ. ಹೈಪರ್ಗ್ಲೈಸೀಮಿಯಾದಲ್ಲಿ ರಕ್ತದ ಸಕ್ಕರೆ ಅಧಿಕವಾಗಿರುತ್ತದೆ. ಇದರ ಜೊತೆಗೆ ಸಕ್ಕರೆ ಕಾಯಿಲೆಯು ಅಂಟುತ್ತದೆ. ಇದನ್ನು ನಿಯಂತ್ರಿಸಲು ಬೇವಿನ ಎಲೆಗಳು ಪರಿಣಾಮಕಾರಿ.

    MORE
    GALLERIES

  • 48

    Neem Leaves: ಕಹಿ ಬೇವಿನಲ್ಲಿವೆ 'ಸಿಹಿ' ಗುಣಗಳು! ಮಧುಮೇಹಿಗಳ ಆರೋಗ್ಯಕ್ಕೆ ಇವೇ ಅಮೃತ!

    ಮಧುಮೇಹ ಕಾಯಿಲೆಗೆ ಶಾಶ್ವತ ಚಿಕಿತ್ಸೆ ಇಲ್ಲ. ಆಹಾರ ಮತ್ತು ಜೀವನಶೈಲಿಯ ಸಹಾಯದಿಂದ ಅದನ್ನು ಜೀವನದುದ್ದಕ್ಕೂ ನಿಯಂತ್ರಿಸಬೇಕು. ಬೇವಿನ ಎಲೆಗಳು ಈ ರೋಗವನ್ನು ದೊಡ್ಡ ಪ್ರಮಾಣದಲ್ಲಿ ನಿಗ್ರಹಿಸಲು ಸಹಕಾರಿ. ದೇಹದಲ್ಲಿ ಸಕ್ಕರೆ ಮಟ್ಟ ಹೆಚ್ಚಾದಾಗ ಹಲವು ಲಕ್ಷಣಗಳು ಕಾಣಿಸುತ್ತವೆ.

    MORE
    GALLERIES

  • 58

    Neem Leaves: ಕಹಿ ಬೇವಿನಲ್ಲಿವೆ 'ಸಿಹಿ' ಗುಣಗಳು! ಮಧುಮೇಹಿಗಳ ಆರೋಗ್ಯಕ್ಕೆ ಇವೇ ಅಮೃತ!

    ಮಧುಮೇಹದಲ್ಲಿ ರಕ್ತದ ಸಕ್ಕರೆಯ ಮಟ್ಟವನ್ನು ನಿರಂತರವಾಗಿ ಮೇಲ್ವಿಚಾರಣೆ ಮಾಡಬೇಕು. ಹೆಚ್ಚಿದ ಬಾಯಾರಿಕೆ, ಆಗಾಗ್ಗೆ ಮೂತ್ರವಿಸರ್ಜನೆ, ಆಯಾಸ, ದೃಷ್ಟಿ ಮಂದವಾಗುವುದು, ತೂಕ ನಷ್ಟ ಮತ್ತು ಆಗಾಗ್ಗೆ ಸೋಂಕು ಉಂಟಾಗುತ್ತವೆ. ಬೇವಿನ ಎಲೆಗಳ ಸೇವನೆಯಿಂದ ಈ ರೋಗ ಲಕ್ಷಣಗಳು ಕಡಿಮೆಯಾಗಬಹುದು.

    MORE
    GALLERIES

  • 68

    Neem Leaves: ಕಹಿ ಬೇವಿನಲ್ಲಿವೆ 'ಸಿಹಿ' ಗುಣಗಳು! ಮಧುಮೇಹಿಗಳ ಆರೋಗ್ಯಕ್ಕೆ ಇವೇ ಅಮೃತ!

    ಬೇವಿನ ಎಲೆಗಳು ಇನ್ಸುಲಿನ್ ಅನ್ನು ಹೆಚ್ಚಿಸುತ್ತವೆ. ಇನ್ಸುಲಿನ್ ದೇಹದ ರಕ್ತದ ಸಕ್ಕರೆ ನಿಯಂತ್ರಿಸುತ್ತದೆ. ಹಾರ್ಮೋನ್ ಮೇದೋಜ್ಜೀರಕ ಗ್ರಂಥಿಯ ಜೀವಕೋಶಗಳಿಂದ ಉತ್ಪತ್ತಿಯಾಗುತ್ತದೆ. ಬೇವಿನ ಎಲೆಗಳು ಇನ್ಸುಲಿನ್ ಉತ್ಪಾದಿಸುವ ಕೋಶಗಳನ್ನು ಮತ್ತೆ ಆರೋಗ್ಯಕರವಾಗಿಸುತ್ತದೆ.

    MORE
    GALLERIES

  • 78

    Neem Leaves: ಕಹಿ ಬೇವಿನಲ್ಲಿವೆ 'ಸಿಹಿ' ಗುಣಗಳು! ಮಧುಮೇಹಿಗಳ ಆರೋಗ್ಯಕ್ಕೆ ಇವೇ ಅಮೃತ!

    ಮಧುಮೇಹ ರೋಗಿಗಳು ಪ್ರತಿದಿನ ಬೇವಿನ ಸೊಪ್ಪನ್ನು ಸೇವಿಸಿ. ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ 3-4 ತಾಜಾ ಎಲೆಗಳನ್ನು ತೆಗೆದುಕೊಂಡು ನೀರಿನಿಂದ ತೊಳೆದು, ನಂತರ ಇದನ್ನು ಹಲ್ಲುಗಳ ನಡುವೆ ಇಟ್ಟುಕೊಂಡು ಚೆನ್ನಾಗಿ ಜಗಿದು ತಿನ್ನಬೇಕು. ಅದರ ರಸ ಹೀರಿಕೊಳ್ಳಿ.

    MORE
    GALLERIES

  • 88

    Neem Leaves: ಕಹಿ ಬೇವಿನಲ್ಲಿವೆ 'ಸಿಹಿ' ಗುಣಗಳು! ಮಧುಮೇಹಿಗಳ ಆರೋಗ್ಯಕ್ಕೆ ಇವೇ ಅಮೃತ!

    ಬೇವಿನ ಎಲೆಗಳ ಸೇವನೆಯಿಂದ ರಕ್ತ ಶುದ್ಧವಾಗುತ್ತದೆ. ಬಾಯಿಯ ಆರೋಗ್ಯ ಸುಧಾರಿಸುತ್ತದೆ. ಯಕೃತ್ತು ಮತ್ತು ಮೂತ್ರಪಿಂಡದಿಂದ ತ್ಯಾಜ್ಯ ಹೊರ ಹೋಗುತ್ತದೆ. ಚರ್ಮ ಚೆನ್ನಾಗಿರುತ್ತದೆ. ಗಾಯಗಳು ಮತ್ತು ಗುಳ್ಳೆಗಳು ಗುಣವಾಗುತ್ತವೆ. ಆದರೆ ಮಧುಮೇಹಿಗಳು ಮೊದಲು ವೈದ್ಯರ ಸಲಹೆ ಪಡೆದು ನಂತರ ಬೇವಿನ ರಸ ಸೇವಿಸಿ.

    MORE
    GALLERIES