Neck And Back Pain: ಕುತ್ತಿಗೆ, ಬೆನ್ನು ನೋವಿಂದ ಬಳಲುತ್ತಿದ್ದೀರಾ? ಇದರ ಪರಿಹಾರಕ್ಕೆ ಇಲ್ಲಿವೆ ಸಿಂಪಲ್ ಟ್ರಿಕ್ಸ್

ಸದಾ ಬ್ಯುಸಿ ಶೆಡ್ಯೂಲ್, ಬಿಡುವಿಲ್ಲದ ಜೀವನಶೈಲಿ ಮತ್ತು ಅನಾರೋಗ್ಯಕರ ನಿದ್ರೆಯ ಮಾದರಿ ಇದೆಲ್ಲವೂ ಸಾಕಷ್ಟು ಅನಾರೋಗ್ಯ ಸಮಸ್ಯೆ ಉಂಟು ಮಾಡುತ್ತವೆ. ಅದಾಗ್ಯೂ ಬ್ಯುಸಿ ಶೆಡ್ಯೂಲ್ ಮಧ್ಯೆ ಆರೋಗ್ಯದ ಬಗ್ಗೆ ಸರಿಯಾದ ಕಾಳಜಿ ವಹಿಸಲು ಸಾಧ್ಯವಾಗಲ್ಲ. ಅದರಲ್ಲೂ ಕುತ್ತಿಗೆ ಮತ್ತು ಬೆನ್ನು ನೋವಿನಂತಹ ಸ್ಥಿತಿಯು ವ್ಯಕ್ತಿಯನ್ನು ಸಾಕಷ್ಟು ಹೈರಾಣಾಗಿಸುತ್ತದೆ.

First published:

  • 18

    Neck And Back Pain: ಕುತ್ತಿಗೆ, ಬೆನ್ನು ನೋವಿಂದ ಬಳಲುತ್ತಿದ್ದೀರಾ? ಇದರ ಪರಿಹಾರಕ್ಕೆ ಇಲ್ಲಿವೆ ಸಿಂಪಲ್ ಟ್ರಿಕ್ಸ್

    ಬೆಳಗ್ಗೆಯಿಂದ ಸಂಜೆಯವರೆಗೆ ದೀರ್ಘಕಾಲ ನೀವು ಡೆಸ್ಕ್ ವರ್ಕ್ ಮಾಡುತ್ತಿದ್ದರೆ, ಸರಿಯಾಗಿ ನಿಮ್ಮ ದಿನಚರಿಯಲ್ಲಿ ವ್ಯಾಯಾಮ ಸೇರಿಸದೇ ಹೋದರೆ ನಿಮ್ಮ ದೇಹ ಒಳಗಿನಿಂದ ದುರ್ಬಲವಾಗುತ್ತದೆ. ದೀರ್ಘಕಾಲ ಲ್ಯಾಪ್ ಟಾಪ್, ಕಂಪ್ಯೂಟರ್ ಎದುರು ಕುಳಿತು ಕೆಲಸ ಮಾಡುವುದು ನಿಮ್ಮ ದೇಹದ ನೋವು, ದಣಿವು ಮತ್ತು ದೌರ್ಬಲ್ಯ ಹೆಚ್ಚಿಸುತ್ತದೆ.

    MORE
    GALLERIES

  • 28

    Neck And Back Pain: ಕುತ್ತಿಗೆ, ಬೆನ್ನು ನೋವಿಂದ ಬಳಲುತ್ತಿದ್ದೀರಾ? ಇದರ ಪರಿಹಾರಕ್ಕೆ ಇಲ್ಲಿವೆ ಸಿಂಪಲ್ ಟ್ರಿಕ್ಸ್

    ದಿನವಿಡೀ ದುಡಿಯುವ ನಿಮ್ಮ ದಿನಚರಿಯಿಂದಾಗಿ ನಿಮ್ಮ ಕುತ್ತಿಗೆ ಮತ್ತು ಬೆನ್ನು ನೋವು ಸೇರಿದಂತೆ ದೇಹದಲ್ಲಿ ಅನೇಕ ನೋವಿನ ಸಮಸ್ಯೆ ಹೆಚ್ಚುತ್ತದೆ. ಬೆನ್ನು ಮತ್ತು ಕುತ್ತಿಗೆಯು ನೋವಿಗೆ ಸಾಕಷ್ಟು ಕಾರಣಗಳಿವೆ. ಅದಕ್ಕೆ ಮುಖ್ಯ ಕಾರಣ ಡೆಸ್ಕ್ ವರ್ಕ್, ತಪ್ಪಾದ ಭಂಗಿಯಲ್ಲಿ ನಿದ್ರಿಸುವುದು ಆಗಿದೆ.

    MORE
    GALLERIES

  • 38

    Neck And Back Pain: ಕುತ್ತಿಗೆ, ಬೆನ್ನು ನೋವಿಂದ ಬಳಲುತ್ತಿದ್ದೀರಾ? ಇದರ ಪರಿಹಾರಕ್ಕೆ ಇಲ್ಲಿವೆ ಸಿಂಪಲ್ ಟ್ರಿಕ್ಸ್

    ಇನ್ನು ಬೆನ್ನು ಮತ್ತು ಕುತ್ತಿಗೆ ನೋವು ಕಾಣಿಸಿಕೊಂಡಾಗ ನಿಮಗೆ ಎದ್ದೇಳಲು, ಕುಳಿತುಕೊಳ್ಳಲು ಮತ್ತು ನಿಮ್ಮ ದಿನನಿತ್ಯದ ಕೆಲಸ ಮಾಡಲು ನೀವು ಸಮಸ್ಯೆ ಎದುರಿಸುತ್ತೀರಿ. ಇದಕ್ಕೆ ನೀವು ದೀರ್ಘಕಾಲ ಪರಿಹಾರ ಪಡೆಯದಿದ್ದರೆ ಇದು ನಿಮ್ಮ ನೋವನ್ನು ಮತ್ತಷ್ಟು ಹೆಚ್ಚಿಸುತ್ತದೆ.

    MORE
    GALLERIES

  • 48

    Neck And Back Pain: ಕುತ್ತಿಗೆ, ಬೆನ್ನು ನೋವಿಂದ ಬಳಲುತ್ತಿದ್ದೀರಾ? ಇದರ ಪರಿಹಾರಕ್ಕೆ ಇಲ್ಲಿವೆ ಸಿಂಪಲ್ ಟ್ರಿಕ್ಸ್

    ಬೆನ್ನು ಮತ್ತು ಕುತ್ತಿಗೆ ನೋವು ನಿವಾರಣೆಗೆ ನೀವು ಕೆಲವು ಸರಳ ಮನೆಮದ್ದು ಫಾಲೋ ಮಾಡಬಹುದು. ಟೆನ್ನಿಸ್ ಬಾಲ್ನೊಂದಿಗೆ ಮಸಾಜ್ ಮಾಡಿ. ಇದು ದೇಹದ ಬಿಗಿತ, ಸ್ನಾಯುಗಳ ಬಿಗಿತ ಸಮಸ್ಯೆ ಕಡಿಮೆ ಮಾಡಿ, ದೇಹಕ್ಕೆ ವಿಶ್ರಾಂತಿ ನೀಡುತ್ತದೆ. ಪೀಡಿತ ಪ್ರದೇಶದಲ್ಲಿ ಟೆನ್ನಿಸ್ ಬಾಲ್ ನಿಂದ ಒತ್ತಡ ಹಾಕುತ್ತಾ ಮಸಾಜ್ ಮಾಡಿ.

    MORE
    GALLERIES

  • 58

    Neck And Back Pain: ಕುತ್ತಿಗೆ, ಬೆನ್ನು ನೋವಿಂದ ಬಳಲುತ್ತಿದ್ದೀರಾ? ಇದರ ಪರಿಹಾರಕ್ಕೆ ಇಲ್ಲಿವೆ ಸಿಂಪಲ್ ಟ್ರಿಕ್ಸ್

    ಉಗುರು ಬೆಚ್ಚನೆಯ ಎಣ್ಣೆಯಿಂದ ಮಸಾಜ್ ಮಾಡುವುದು ಬೆನ್ನು ಮತ್ತು ಕುತ್ತಿಗೆ ಭಾಗದ ನೋವು ಕಡಿಮೆ ಮಾಡುತ್ತದೆ. ಉಗುರುಬೆಚ್ಚಗಿನ ಎಣ್ಣೆಯ ಮಸಾಜ್ ನಂತರ ರಕ್ತ ಪರಿಚಲನೆ ಸರಿಯಾಗಿಗುತ್ತದೆ. ಸ್ನಾಯುಗಳಿಗೆ ಪರಿಹಾರ ನೀಡುತ್ತದೆ. ಒಂದು ಪಾತ್ರೆಯಲ್ಲಿ ಸ್ವಲ್ಪ ಸಾಸಿವೆ ಎಣ್ಣೆ, ಸೆಲರಿ ಮತ್ತು ಎರಡು ಎಸಳು ಬೆಳ್ಳುಳ್ಳಿ ಹಾಕಿ ಉಗುರು ಬೆಚ್ಚಗೆ ಕಾಯಿಸಿ, ಪೀಡಿತ ಪ್ರದೇಶಕ್ಕೆ ಹಚ್ಚಿ ಮಸಾಜ್ ಮಾಡಿ.

    MORE
    GALLERIES

  • 68

    Neck And Back Pain: ಕುತ್ತಿಗೆ, ಬೆನ್ನು ನೋವಿಂದ ಬಳಲುತ್ತಿದ್ದೀರಾ? ಇದರ ಪರಿಹಾರಕ್ಕೆ ಇಲ್ಲಿವೆ ಸಿಂಪಲ್ ಟ್ರಿಕ್ಸ್

    ತೀವ್ರವಾದ ಕುತ್ತಿಗೆ ಮತ್ತು ಬೆನ್ನು ನೋವು ಇದ್ದರೆ, ಐಸ್ ಪ್ಯಾಕ್ ಅನ್ವಯಿಸಿ. ಇದು ತ್ವರಿತ ಪರಿಹಾರ ನೀಡುತ್ತದೆ. ಟವೆಲ್‌ಗೆ ಐಸ್ ಪ್ಯಾಕ್ ಅಥವಾ ಕೆಲವು ಐಸ್ ಕ್ಯೂಬ್‌ ಹಾಕಿ ನಮತರ ಅದನ್ನು ಪೀಡಿತ ಪ್ರದೇಶದಲ್ಲಿ 15 ನಿಮಿಷ ಅನ್ವಯಿಸಿದರೆ ಸಾಕಷ್ಟು ರಿಲೀಫ್ ನೀಡುತ್ತದೆ. ಆಪಲ್ ಸೈಡರ್ ವಿನೆಗರ್ ಉರಿಯೂತ ನಿವಾರಕ. ಇದರ ಸೇವನೆಯು ಸಮಸ್ಯೆ ಕಡಿಮೆ ಮಾಡುತ್ತದೆ.

    MORE
    GALLERIES

  • 78

    Neck And Back Pain: ಕುತ್ತಿಗೆ, ಬೆನ್ನು ನೋವಿಂದ ಬಳಲುತ್ತಿದ್ದೀರಾ? ಇದರ ಪರಿಹಾರಕ್ಕೆ ಇಲ್ಲಿವೆ ಸಿಂಪಲ್ ಟ್ರಿಕ್ಸ್

    ಆಪಲ್ ಸೈಡರ್ ವಿನೆಗರ್ ಸ್ನಾಯುಗಳನ್ನು ನೋವಿನಿಂದ ರಕ್ಷಿಸಿ, ಪರಿಹಾರವನ್ನು ನೀಡುತ್ತದೆ. ಇದರಲ್ಲಿರುವ ಉರಿಯೂತದ ಮತ್ತು ಉತ್ಕರ್ಷಣ ನಿರೋಧಕ ಗುಣಲಕ್ಷಣಗಳು , ದೇಹದ ಬಿಗಿತ ಮತ್ತು ಒತ್ತಡ ಕಡಿಮೆ ಮಾಡುತ್ತದೆ. ಆಪಲ್ ಸೈಡರ್ ವಿನೆಗರ್ನಲ್ಲಿ ಹತ್ತಿ ಪ್ಯಾಡ್ ನೆನೆಸಿ ಮತ್ತು ಪೀಡಿತ ಪ್ರದೇಶಕ್ಕೆ ಹಚ್ಚಿ ಗಂಟೆ ಬಿಡಿ.

    MORE
    GALLERIES

  • 88

    Neck And Back Pain: ಕುತ್ತಿಗೆ, ಬೆನ್ನು ನೋವಿಂದ ಬಳಲುತ್ತಿದ್ದೀರಾ? ಇದರ ಪರಿಹಾರಕ್ಕೆ ಇಲ್ಲಿವೆ ಸಿಂಪಲ್ ಟ್ರಿಕ್ಸ್

    ಕುತ್ತಿಗೆ ಮತ್ತು ಬೆನ್ನು ನೋವು ಮತ್ತು ಬಿಗಿತದಿಂದ ತ್ವರಿತ ಪರಿಹಾರ ಪಡೆಯಲು ಸ್ಟ್ರೆಚಿಂಗ್ ಅತ್ಯಂತ ಪರಿಣಾಮಕಾರಿ ಮಾರ್ಗ. ಕುತ್ತಿಗೆಯನ್ನು ಹಿಂದಕ್ಕೆ ಮತ್ತು ಮುಂದಕ್ಕೆ ಸುತ್ತಿ ದೇಹವನ್ನು ಹಿಗ್ಗಿಸುವ ಲಘು ವ್ಯಾಯಾಮಗಳು ನೋವು ನಿವಾರಿಸುತ್ತವೆ. ಧನುರಾಸನ ಮಾಡಿ.

    MORE
    GALLERIES