ನಾನ್ವೆಜ್ ಪ್ರಿಯರಿಗೆ ಮಟನ್ ಅಂದ್ರೆ ತುಂಬಾ ಇಷ್ಟ. ಮಟನ್ನಲ್ಲಿ ತರಹೇವಾರಿ ಭಕ್ಷ್ಯಗಳಿದೆ. ಧಮ್ ಮಟನ್ ಪಲಾವ್, ಮಟನ್ ಸಾಂಬಾರ್, ಮಟನ್ ಫ್ರೈ, ಮಟನ್ ಚಿಲ್ಲಿ, ಮಟನ್ ಚಾಪ್ಸ್, ಬೋಟಿ, ತಲೆಮಾಂಸ, ಮಟನ್ ಕೈಮಾ ಹೀಗೆ ನಾನಾ ಖಾದ್ಯಗಳನ್ನು ಎಲ್ಲರೂ ಸವಿದಿರುತ್ತೀರಿ. ಆದರೆ ನಾವಿಂದು ನಿಮಗೆ ಮನೆಯಲ್ಲಿಯೇ ಮಟನ್ ಲಿವರ್ ಫ್ರೈ ಅನ್ನು ಸುಲಭವಾಗಿ ಮಾಡುವುದು ಹೇಗೆ ಎಂದು ಹೇಳಿಕೊಡುತ್ತೇವೆ.