ಉತ್ತರ ಭಾರತದಲ್ಲಿ "ಸರ್ಸನ್ ಕಾ ಸಾಂಗ್" ಎಂದು ಜನಪ್ರಿಯವಾಗಿರುವ ಸಾಸಿವೆ ಎಲೆಯು ರುಚಿಕರ ಮಾತ್ರವಲ್ಲದೆ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವ ಗುಣಗಳನ್ನು ಹೊಂದಿದೆ. ಇದನ್ನು ಜನರು ಅಡುಗೆಯಲ್ಲಿ ಹೆಚ್ಚಾಗಿ ಬಳಸುತ್ತಿದ್ದಾರೆ. ಅದರಲ್ಲೂ ನಾರಿನಂಶ, ವಿಟಮಿನ್, ಕಬ್ಬಿಣ, ಫೋಲಿಕ್ ಆಸಿಡ್, ಕ್ಯಾಲ್ಸಿಯಂ, ಪೊಟ್ಯಾಶಿಯಂ, ರಂಜಕ ಮತ್ತು ಮೆಗ್ನೀಷಿಯಂ ಹೇರಳವಾಗಿರುವುದರಿಂದ ಈ ಸಾಸಿವೆ ಎಲೆಗಳು ದೇಹದ ಆರೋಗ್ಯದಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ. ನಾವು ಇದನ್ನು ಸೂಪ್ ಮತ್ತು ತರಕಾರಿಗಳೊಂದಿಗೆ ಬೇಯಿಸಿದಾಗ ಅದು ನಮಗೆ ಹೆಚ್ಚುವರಿ ಪರಿಮಳವನ್ನು ನೀಡುತ್ತದೆ. ಚಳಿಗಾಲದಲ್ಲಿ ಇದು ಅತ್ಯಂತ ಜನಪ್ರಿಯ ಪೌಷ್ಟಿಕಾಂಶದ ಆಹಾರಗಳಲ್ಲಿ ಒಂದಾಗಿದೆ.