Travel Tips: ಟ್ರಿಪ್ ಹೋದಾಗ ಈ ಮಾರ್ಕೆಟ್ಗಳಿಗೆ ವಿಸಿಟ್ ಮಾಡೋದು ಮಿಸ್ ಮಾಡ್ಬೇಡಿ
Markets To visits: ನಾವು ಯಾವುದಾದರೂ ಊರಿಗೆ ಟ್ರಿಪ್ ಹೋದಾಗ ಅಲ್ಲಿನ ಸುಂದರ ಸ್ಥಳಗಳಿಗೆ ವಿಸಿಟ್ ಮಾಡುವುದು ಸಾಮಾನ್ಯ. ಹಾಗೆಯೇ ಶಾಪಿಂಗ್ ಮಾಡೇ ಮಾಡ್ತೀವಿ. ಆದ್ರೆ ಕೆಲವೊಂದು ಕಡೆ ಅಲ್ಲಿನ ಮಾರುಕಟ್ಟೆಗಳೇ ಹೆಚ್ಚು ಪ್ರಸಿದ್ದವಾಗಿರುತ್ತದೆ. ಈ ರೀತಿ ಹೆಚ್ಚು ಪ್ರಸಿದ್ಧವಿರುವ ಭಾರತದ 4 ಮಾರುಕಟ್ಟೆಯ ಬಗ್ಗೆ ಮಾಹಿತಿ ಇಲ್ಲಿದೆ. ಆ ಕಡೆ ಹೋದ್ರೆ ಮಿಸ್ ಮಾಡ್ಬೇಡಿ.
ಕನೌಜ್ನ ಅತ್ತರ್ ಮಾರುಕಟ್ಟೆ, ಬಹಳ ಪ್ರಸಿದ್ದವಾದ ಮಾರುಕಟ್ಟೆಯಾಗಿದ್ದು, ಇಲ್ಲಿ ನಿಮಗೆ ಸುಗಂಧ ಭರಿತ ವಿಭಿನ್ನ ರೀತಿಯ ಅತ್ತರ್ಗಳು ಸಿಗುತ್ತದೆ.
2/ 8
ಇತಿಹಾಸದ ಪ್ರಕಾರ ರಾಜ ಹರ್ಷವರ್ಧನನ ಕಾಲದಿಂದಲೂ ಇಲ್ಲಿ ಅತ್ತರ್ ಮಾರುಕಟ್ಟೆ ನಡೆಯುತ್ತಿದೆ. ಅಲ್ಲದೇ ಇಲ್ಲಿ ನಿಮಗೆ ಸಿಗದ ಅತ್ತರ್ ಇಲ್ಲ ಎನ್ನಲಾಗುತ್ತದೆ.
3/ 8
ಕಾಶ್ಮೀರದ ದಾಲ್ ಲೇಕ್ ಮಾರುಕಟ್ಟೆ , ಇದು ತೇಲುವ ಮಾರುಕಟ್ಟೆ ಎಂದೇ ಪ್ರಸಿದ್ದವಾಗಿದ್ದು, ಕಾಶ್ಮೀರಕ್ಕೆ ಪ್ರವಾಸ ಹೋಗುವ ಪ್ರತಿಯೊಬ್ಬರೂ ಇಲ್ಲಿಗೆ ಹೋಗಬೇಕು.
4/ 8
ಇದರ ವಿಶೇಷತೆ ಎಂದರೆ ಈ ತರಕಾರಿ ಮಾರುಕಟ್ಟೆ ಇರುವುದು ದಾಲ್ ಸರೋವರದಲ್ಲಿದೆ. ಇಲ್ಲಿ ಜನರು ದೋಣಿಗಳಲ್ಲಿ ತರಕಾರಿಗಳನ್ನು ಮಾರಾಟ ಮಾಡುತ್ತಾರೆ ಹಾಗೂ ಖರೀದಿ ಕೂಡ ಹಾಗೆಯೇ ದೋಣಿಯಿಂದಲೇ ಮಾಡುತ್ತಾರೆ.
5/ 8
ಮಣಿಪುರದ ಇಮಾ ಕೀತೆಲ್ ಮಾರುಕಟ್ಟೆ , ಸಾಮಾನ್ಯವಾಗಿ ಮಣಿಪುರಕ್ಕೆ ಹೋದರೆ ನಮಗೆ ಎಲ್ಲವೂ ವಿಭಿನ್ನ ಎನಿಸುತ್ತದೆ. ಆದರೆ ಈ ಮಾರುಕಟ್ಟೆ ಎಲ್ಲದಕ್ಕಿಂತ ವಿಭಿನ್ನ . ಏಕೆಂದರೆ ಇಲ್ಲಿ ಬರೀ ಮಹಿಳೆಯರು ವ್ಯಾಪಾರ ಮಾಡುತ್ತಾರೆ.
6/ 8
ಹೌದು, ಮಣಿಪುರದ ರಾಜಧಾನಿ ಇಂಫಾಲ್ನಲ್ಲಿರುವ ಇಮಾ ಕೀತೆಲ್ನಲ್ಲಿ ಎಲ್ಲ ಅಂಗಡಿಯಲ್ಲಿ ಮಹಿಳೆಯರು ಮಾತ್ರ ಇದ್ದು,ಇದು ವಿಶ್ವದ ಅತಿ ದೊಡ್ಡ ಮಹಿಳಾ ಮಾರುಕಟ್ಟೆಯಂತೆ.
7/ 8
ಅಸ್ಸಾಂನ ಜೊನ್ಬೀಲ್ ಮಾರುಕಟ್ಟೆ , ಇದು ನಿಜಕ್ಕೂ ಹೆಚ್ಚು ವಿಶೇಷ, ಯಾಕೆಂದರೆ ಅನಾದಿ ಕಾಲದ ವ್ಯಾಪಾರದ ಸಂಪ್ರದಾಯವನ್ನು ಈಗಲೂ ಇಲ್ಲಿ ಪಾಲಿಸಲಾಗುತ್ತದೆ. ಇಲ್ಲಿ ವಸ್ತುಗಳ ವಿನಿಮಯ ಮಾಡಲಾಗುತ್ತದೆ.
8/ 8
ನೋಟು ಅಥವಾ ನಾಣ್ಯ ಜಾರಿಗೆ ಬರದೇ ಇದ್ದ ಸಮಯದಲ್ಲಿ ಹೇಗೆ ವಸ್ತುಗಳನ್ನು ವನಿಮಯ ಮಾಡಲಾಗುತ್ತಿತ್ತೋ ಅದೇ ರೀತಿಯ ಮಾರುಕಟ್ಟೆ ಇದಾಗಿದ್ದು, 15ನೇ ಶತಮಾನದಲ್ಲಿ ಪ್ರಾರಂಭವಾದ ಈ ಮಾರುಕಟ್ಟೆ ಇಂದಿಗೂ ಹಾಗೆಯೇ ಇದೆ.