Muscle Pain: ಸ್ನಾಯುಗಳ ನೋವಿನಿಂದ ಬಳಲುತ್ತಿದ್ದೀರಾ? ಚಿಂತಿಸಬೇಡಿ ಈ ಸಿಂಪಲ್ ಟಿಪ್ಸ್ ಫಾಲೋ ಮಾಡಿ!

ದಿನವಿಡಿ ದುಡಿಯುವ ಜನರು ಹಾಗೂ ಜಿಮ್ ಗೆ ಹೋಗುವ ಜನರು ಸೇರಿದಂತೆ ಕೆಲವರಲ್ಲಿ ಸ್ನಾಯುಗಳ ನೋವು ಸಾಮಾನ್ಯ ಸಮಸ್ಯೆ ಆಗಿದೆ. ಈ ಸ್ನಾಯುಗಳ ನೊವು ಕೆಲವೊಮ್ಮೆ ಸಾಕಷ್ಟು ಬಾಧಿಸುತ್ತದೆ. ಸ್ನಾಯುಗಳ ಸಾಮರ್ಥ್ಯಕ್ಕಿಂತ ಹೆಚ್ಚು ಕೆಲಸವಾದಾಗ ಇದರ ಪರಿಣಾಮ ನೋವಿಗೆ ಕಾರಣವಾಗುತ್ತದೆ. ಅಸ್ವಸ್ಥತೆಗೆ ಕಾರಣವಾಗುತ್ತದೆ.

First published:

  • 18

    Muscle Pain: ಸ್ನಾಯುಗಳ ನೋವಿನಿಂದ ಬಳಲುತ್ತಿದ್ದೀರಾ? ಚಿಂತಿಸಬೇಡಿ ಈ ಸಿಂಪಲ್ ಟಿಪ್ಸ್ ಫಾಲೋ ಮಾಡಿ!

    ಪ್ರಸ್ತುತ ದಿನಗಳಲ್ಲಿ ಸ್ನಾಯು ನೋವು ಸಾಮಾನ್ಯ ಕಾಯಿಲೆ. ಬಿಡುವಿಲ್ಲದ ವೇಳಾಪಟ್ಟಿ ಕೆಲಸದ ಒತ್ತಡ, ಇವುಗಳ ಮಧ್ಯೆ ಸ್ನಾಯು ನೋವಿನ ಸಮಸ್ಯೆ ಹೆಚ್ಚುತ್ತದೆ. ಹೀಗೆ ಉಂಟಾಗುವ ಸ್ನಾಯುಗಳ ನೋವನ್ನು ಕಡಿಮೆ ಮಾಡುವುದು ಹೇಗೆ ನೋಡೋಣ.

    MORE
    GALLERIES

  • 28

    Muscle Pain: ಸ್ನಾಯುಗಳ ನೋವಿನಿಂದ ಬಳಲುತ್ತಿದ್ದೀರಾ? ಚಿಂತಿಸಬೇಡಿ ಈ ಸಿಂಪಲ್ ಟಿಪ್ಸ್ ಫಾಲೋ ಮಾಡಿ!

    ಕೆಲವರು ದಿನವು ಜಿಮ್ ಗೆ ಹೋಗ್ತಾರೆ. ಹೊಸದಾಗಿ ಜಿಮ್ ಸೇರಿದವರಲ್ಲಿ ಮತ್ತು ಭಾರಿ ವ್ಯಾಯಾಮ ಮಾಡಿದವರಲ್ಲಿ ಸ್ನಾಯುಗಳ ನೋವು ಸಮಸ್ಯೆ ಕಾಡುತ್ತದೆ. ಇದು ಸ್ನಾಯುಗಳಲ್ಲಿ ಬಿಗಿತ ಮತ್ತು ಊತ ಉಂಟು ಮಾಡುತ್ತದೆ.

    MORE
    GALLERIES

  • 38

    Muscle Pain: ಸ್ನಾಯುಗಳ ನೋವಿನಿಂದ ಬಳಲುತ್ತಿದ್ದೀರಾ? ಚಿಂತಿಸಬೇಡಿ ಈ ಸಿಂಪಲ್ ಟಿಪ್ಸ್ ಫಾಲೋ ಮಾಡಿ!

    ಸ್ನಾಯುಗಳ ಊತವು ತುಂಬಾ ತೀವ್ರವಾಗಿದ್ದರೆ ಅದು ಕೈ ಮತ್ತು ಕಾಲುಗಳನ್ನು ಚಲಿಸಲು ಸಹ ಕಷ್ಟವಾಗಿಸುತ್ತದೆ. ವ್ಯಾಯಾಮದ ನಂತರ ಸ್ನಾಯುಗಳು ಏಕೆ ನೋವು ಬರುತ್ತವೆ? ಜಿಮ್ ಮತ್ತು ತಾಲೀಮು ನಂತರ ಸ್ನಾಯುಗಳ ನೋವು ಮತ್ತು ಊತ ಬಂದರೆ ನಿಮ್ಮ ವರ್ಕೌಟ್ ನಿಮ್ಮನ್ನು ಫಿಟ್ ಆಗಿಸುವತ್ತ ಹೆಜ್ಜೆಯಿಟ್ಟಿದೆ ಎಂದರ್ಥ.

    MORE
    GALLERIES

  • 48

    Muscle Pain: ಸ್ನಾಯುಗಳ ನೋವಿನಿಂದ ಬಳಲುತ್ತಿದ್ದೀರಾ? ಚಿಂತಿಸಬೇಡಿ ಈ ಸಿಂಪಲ್ ಟಿಪ್ಸ್ ಫಾಲೋ ಮಾಡಿ!

    ಹೀಗೆ ದಿನದ ವ್ಯಾಯಾಮದ ನಂತರ ಕಾಣಿಸಿಕೊಳ್ಳುವ ಸ್ನಾಯುಗಳ ನೋವು ಬರು ಬರುತ್ತ ನಿಮ್ಮ ಸ್ನಾಯುಗಳನ್ನು ಬಲಪಡಿಸುತ್ತದೆ. ಈ ಸ್ಥಿತಿಯು ಸ್ವಲ್ಪ ನೋವಿನಿಂದ ಕೂಡಿರುತ್ತದೆ. ಅದಾಗ್ಯೂ ಈ ನೋವು ಕೆಲವರಿಗೆ ಭಾರೀ ಅಹಿತಕರ ಮತ್ತು ಅಸ್ವಸ್ಥತೆ ಉಂಟು ಮಾಡುತ್ತದೆ.

    MORE
    GALLERIES

  • 58

    Muscle Pain: ಸ್ನಾಯುಗಳ ನೋವಿನಿಂದ ಬಳಲುತ್ತಿದ್ದೀರಾ? ಚಿಂತಿಸಬೇಡಿ ಈ ಸಿಂಪಲ್ ಟಿಪ್ಸ್ ಫಾಲೋ ಮಾಡಿ!

    ಸ್ನಾಯುಗಳ ನೋವಿನ ಸಮಸ್ಯೆ ಕಡಿಮೆ ಮಾಡಲು ಪ್ರೋಟೀನ್ ಮತ್ತು ಉತ್ಕರ್ಷಣ ನಿರೋಧಕಗಳ ಸೇವನೆ ಮಾಡಿ. ತಾಲೀಮು ನಂತರ ಮುಂದಿನ 24 ಗಂಟೆಗಳಲ್ಲಿ ಸ್ನಾಯು ನೋವಿನ ಸಮಸ್ಯೆ ಕಾಡುತ್ತದೆ. ಆಗ ದೇಹಕ್ಕೆ ಸಾಕಷ್ಟು ಪ್ರೋಟೀನ್ ಮತ್ತು ಉತ್ಕರ್ಷಣ ನಿರೋಧಕಗಳ ಸೇವನೆಯು ಸ್ನಾಯು ಚೇತರಿಕೆಗೆ ಸಹಾಯ ಮಾಡುತ್ತದೆ. ಉರಿಯೂತದಿಂದ ಪರಿಹಾರ ನೀಡುತ್ತದೆ.

    MORE
    GALLERIES

  • 68

    Muscle Pain: ಸ್ನಾಯುಗಳ ನೋವಿನಿಂದ ಬಳಲುತ್ತಿದ್ದೀರಾ? ಚಿಂತಿಸಬೇಡಿ ಈ ಸಿಂಪಲ್ ಟಿಪ್ಸ್ ಫಾಲೋ ಮಾಡಿ!

    ಸ್ನಾಯುಗಳ ನೋವಿನ ಸಮಸ್ಯೆ ಕಡಿಮೆ ಮಾಡಲು ತಾಪನ ಪ್ಯಾಡ್ ಬಳಕೆ ಮಾಡಿ. ಇದು ಊತವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ತಾಪನ ಪ್ಯಾಡ್ ಬಳಕೆಯು ಸ್ನಾಯುಗಳಿಗೆ ರಕ್ತದ ಹರಿವು ಹೆಚ್ಚಿಸಲು ಸಹಾಯ ಮಾಡುತ್ತದೆ. ಜೊತೆಗೆ ಊತ, ನೋವು ಮತ್ತು ಬಿಗಿತದ ಸಮಸ್ಯೆಯಿಂದ ತಕ್ಷಣ ಪರಿಹಾರ ನೀಡುತ್ತದೆ.

    MORE
    GALLERIES

  • 78

    Muscle Pain: ಸ್ನಾಯುಗಳ ನೋವಿನಿಂದ ಬಳಲುತ್ತಿದ್ದೀರಾ? ಚಿಂತಿಸಬೇಡಿ ಈ ಸಿಂಪಲ್ ಟಿಪ್ಸ್ ಫಾಲೋ ಮಾಡಿ!

    ಮಸಾಜ್ ಮಾಡುವುದು ಸ್ನಾಯುಗಳ ನೋವಿನ ಸಮಸ್ಯೆ ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಮಸಾಜ್ ಮಾಡಿದಾಗ ಸ್ನಾಯುಗಳ ಬಿಗಿತ ಮತ್ತು ನೋವು ಕಡಿಮೆ ಆಗಲು ಸಹಕಾರಿ ಆಗಿದೆ. ಇದು ರಕ್ತದ ಹರಿವನ್ನು ಹೆಚ್ಚಿಸುತ್ತದೆ. ಆಕ್ಯುಪ್ರೆಶರ್ ತಜ್ಞರ ಸಹಾಯ ಪಡೆಯಿರಿ.

    MORE
    GALLERIES

  • 88

    Muscle Pain: ಸ್ನಾಯುಗಳ ನೋವಿನಿಂದ ಬಳಲುತ್ತಿದ್ದೀರಾ? ಚಿಂತಿಸಬೇಡಿ ಈ ಸಿಂಪಲ್ ಟಿಪ್ಸ್ ಫಾಲೋ ಮಾಡಿ!

    ಸ್ನಾಯುಗಳ ನೋವಿನ ಸಮಸ್ಯೆ ಕಡಿಮೆ ಮಾಡಲು ದೇಹವನ್ನು ಚಲಿಸಿರಿ. ನೋವನ್ನು ನಿವಾರಿಸಲು ದೇಹವನ್ನು ಚಲಿಸಬೇಕು. ಸ್ವಲ್ಪ ಹಿಗ್ಗಿಸುವಿಕೆ ಅಥವಾ ಚಲನೆಯು ಬಿಗಿತ ನಿವಾರಿಸಲು ಸಹಾಯ ಮಾಡುತ್ತದೆ. ಸ್ನಾಯುಗಳಿಗೆ ರಕ್ತದ ಹರಿವು ಹೆಚ್ಚಿಸುತ್ತದೆ. ಡಿಹೈಡ್ರೇಷನ್ ತಪ್ಪಿಸಿ. ಸ್ನಾಯುವಿನ ಚೇತರಿಕೆ ನಿಧಾನಗೊಳಿಸುತ್ತದೆ. ಸಾಕಷ್ಟು ನೀರು ಕುಡಿಯಿರಿ.

    MORE
    GALLERIES