ತಾಯಿಯ ಪ್ರೀತಿಗೆ ಸರಿಸಾಟಿ ಇಲ್ಲ. ತಾಯಿ ತನ್ನ ಮಕ್ಕಳನ್ನು ಪ್ರೀತಿಸುವಷ್ಟು ಯಾರು ಕೂಡ ಪ್ರೀತಿಸಲು ಸಾಧ್ಯವಿಲ್ಲ. ತಾಯಿಯ ಪ್ರೀತಿ, ತ್ಯಾಗಕ್ಕೆ ಮಕ್ಕಳು ಏನೇ ಮಾಡಿದರೂ ಕಡಿಮೆ. ಆಕೆಯ ಋಣ ತೀರಿಸಲು ಎಂದಿಗೂ ಸಾಧ್ಯವಿಲ್ಲ. ನಮ್ಮನ್ನು ಈ ಜಗತ್ತಿಗೆ ತರುವ ತಾಯಿಗೆ ಗೌರವ ಹಾಗೂ ಪ್ರೀತಿಯನ್ನು ತೋರಿಸಲು ನಮಗೆ ಯಾವುದೇ ವಿಶೇಷ ದಿನ ಅಗತ್ಯವಿಲ್ಲ. ಆದರೆ ತಾಯಂದಿರ ದಿನ ನಮ್ಮ ಭಾವನೆಗಳನ್ನು ವ್ಯಕ್ತಪಡಿಸಲು ಒಂದು ಅವಕಾಶ ನೀಡುತ್ತದೆ. ಹಾಗಾಗಿ ಪ್ರತಿ ವರ್ಷ ಮೇ ತಿಂಗಳ ಎರಡನೇ ಭಾನುವಾರವನ್ನು ವಿಶ್ವ ತಾಯಂದಿರ ದಿನ ಎಂದು ಆಚರಿಸಲಾಗುತ್ತದೆ. (ಸಾಂಕೇತಿಕ ಚಿತ್ರ)
ಪ್ರಪಂಚದಾದ್ಯಂತ ವಿವಿಧ ದಿನಾಂಕಗಳಲ್ಲಿ ತಾಯಂದಿರ ದಿನವನ್ನು ಆಚರಿಸಲಾಗುತ್ತದೆ. ಆದರೆ ಯುನೈಟೆಡ್ ಸ್ಟೇಟ್ಸ್, ಭಾರತ, ನ್ಯೂಜಿಲೆಂಡ್ ಮತ್ತು ಕೆನಡಾ ಸೇರಿದಂತೆ ಸಾಕಷ್ಟು ದೇಶಗಳು ಪ್ರತಿ ವರ್ಷ ಮೇ ತಿಂಗಳ ಎರಡನೇ ಭಾನುವಾರದಂದು ತಾಯಂದಿರ ದಿನವನ್ನು ಆಚರಿಸುತ್ತದೆ. ಅದರಂತೆ ಈ ವರ್ಷ ಈ ದಿನವನ್ನು ಮೇ 14 ರಂದು ಆಚರಿಸಲಾಗುತ್ತದೆ. ಪ್ರಪಂಚದಾದ್ಯಂತ ಅನೇಕ ದೇಶಗಳಲ್ಲಿ ತಾಯಿಯ ದಿನವನ್ನು ಮಾರ್ಚ್ನಲ್ಲಿ ಆಚರಿಸಲಾಗುತ್ತದೆ. (ಸಾಂಕೇತಿಕ ಚಿತ್ರ)
ತಾಯಂದಿರ ದಿನದ ಇತಿಹಾಸ: ತಾಯಂದಿರ ದಿನವನ್ನು ಎಂದಿನಿಂದ ಆಚರಿಸಲಾಗುತ್ತಿದೆ? ಇದರ ಇತಿಹಾಸವೇನು? ಈ ಬಗ್ಗೆ ಹಲವಾರು ಮಂದಿ ರೀತಿಯ ಅಭಿಪ್ರಾಯ ಹೊಂದಿದ್ದಾರೆ. ಕೆಲವರ ಪ್ರಕಾರ ಆರಂಭದಲ್ಲಿ ಪ್ರಾಚೀನ ಗ್ರೀಕರು ಮತ್ತು ರೋಮನ್ನರು ಈ ವಿಶೇಷ ದಿನವನ್ನು ಆಚರಿಸುತ್ತಿದ್ದರು. ಅವರು ಮಾತೃ ದೇವತೆಗಳಾದ ರಿಯಾ ಮತ್ತು ಸೈಬೆಲೆಯರಿಗೆ ವಿಶೇಷವಾಗಿ ಗೌರವ ಸಲ್ಲಿಸಿದರು. (ಸಾಂಕೇತಿಕ ಚಿತ್ರ)