Food: ಒಡಿಯಾ ತಿಂಡಿಗಳನ್ನು ನೀವೆಂದಾದರೂ ತಿಂದಿದ್ದೀರಾ? ಹೇಗಿರುತ್ತೆ ನೋಡಿ
ಆಹಾರ ಪದಾರ್ಥಗಳಿಂದಲೇ ಪ್ರವಾಸೋದ್ಯಮಕ್ಕೆ ಅಲ್ಲೊಂದು ಆದ್ಯತೆ ದೊರೆತಿದೆ. ಪಾಖಾಲಾ ಒಡಿಯಾದ ಅದ್ಭುತವಾದ ಆಹಾರವಾಗಿದೆ. ಅಲ್ಲಿನ ಜನರಿಗೂ ಇದು ತುಂಬಾ ಪ್ರಿಯವಾದ ಆಹಾರವಾಗಿದೆ. ಪ್ರತಿ ವರ್ಷ ಮಾರ್ಚ್ 20 ರಂದು 'ಪಖಲಾ ದಿವಸ್' ಎಂಬ ದಿನವನ್ನು ಆಚರಿಸುತ್ತಾರೆ.
ಒಡಿಶಾವು ಅದರ ಶ್ರೀಮಂತ ವಾಸ್ತುಶಿಲ್ಪ ಆಧಾರಿತ ದೇವಾಲಯಗಳಿಗೆ (ಲಾರ್ಡ್ ಜಗನ್ನಾಥ ದೇವಾಲಯದಂತಹ), ಕಡಲತೀರಗಳು ಮತ್ತು ಪ್ರಾಣಿಶಾಸ್ತ್ರೀಯ ಉದ್ಯಾನವನಗಳಿಗೆ ಜನಪ್ರಿಯವಾಗಿದೆ. ಆದರೆ ಕೇವಲ ಅಷ್ಟೇ ಅಲ್ಲ ಅಲ್ಲಿನ ಆಹಾರ ಪದ್ಧತಿಯೂ ಕೂಡ ವಿಶಿಷ್ಟವಾಗಿದೆ.
2/ 8
ರುಚಿಕರವಾದ ಒಡಿಯಾ ಪಾಕಪದ್ಧತಿಯ ಬಗ್ಗೆ ನಮಗೆ ತಿಳಿದಿರಲಿಕ್ಕಿಲ್ಲ. ಇಲ್ಲಿ ವಿವಿಧ ರೀತಿಯ ಸಸ್ಯಾಹಾರಿ ಮತ್ತು ಮಾಂಸಾಹಾರಿ ಭಕ್ಷ್ಯಗಳು ಜನಪ್ರಿಯವಾಗಿವೆ. ಮಾನಸ ಜೋಲಾ, ಚೆನ್ನಾ ಪೋಡಾ, ಸಂತುಲಾ, ಗಜ, ಖಾಜಾ ಮುಂತಾದವು ಅಲ್ಲಿನ ಆಹಾರಗಳು.
3/ 8
ಒಡಿಯಾ ಜನರಲ್ಲಿ ಅಕ್ಕಿ ಪ್ರಧಾನ ಆಹಾರವಾಗಿದೆ ಮತ್ತು ಹೆಚ್ಚಿನ ಮನೆಗಳು ಸಾಸಿವೆ ಎಣ್ಣೆಯನ್ನು ಅಡುಗೆಗೆ ಬಳಸುತ್ತಾರೆ. ಅನೇಕ ಒಡಿಯಾ ಭಕ್ಷ್ಯಗಳಲ್ಲಿ ಮೊಸರನ್ನು ಮಹತ್ವದ ಅಂಶವೆಂದು ಪರಿಗಣಿಸುತ್ತಾರೆ. ಇತರ ಪ್ರಾದೇಶಿಕ ಪಾಕಪದ್ಧತಿಗಳಿಗಿಂತ ಕಡಿಮೆ ಎಣ್ಣೆಯುಕ್ತವಾಗಿರುವ ಆಹಾರ ಇಲ್ಲಿ ತಯಾರಿಸುತ್ತಾರೆ.
4/ 8
ಸಿಹಿತಿಂಡಿಗಳು ಸಹ ತುಂಬಾ ಚೆನ್ನಾಗಿರುತ್ತವೆ. ಆಹಾರಪ್ರಿಯರಿಗೆ ಸುವಾಸನೆ ಬರಿತ ಆಹಾರ ಸೇವನೆ ಮಾಡುವುದು ಮುಖ್ಯ ಎನಿಸುತ್ತದೆ. ಅಂತವರಿಗೆ ಇದು ತುಂಬಾ ಇಷ್ಟವಾಗುತ್ತದೆ. ಪ್ರವಾಸಕ್ಕೆ ಹೋದಾಗ ನೀವು ಅಲ್ಲಿನ ಆಹಾರವನ್ನು ಖಂಡಿತ ಇಷ್ಟಪಡುತ್ತೀರಾ.
5/ 8
ಈ ಆಹಾರ ಪದಾರ್ಥಗಳಿಂದಲೇ ಪ್ರವಾಸೋದ್ಯಮಕ್ಕೆ ಅಲ್ಲೊಂದು ಆದ್ಯತೆ ದೊರೆತಿದೆ. ಪಾಖಾಲಾ ಒಡಿಯಾದ ಉತ್ತಮ ಆಹಾರವಾಗಿದೆ. ಅಲ್ಲಿನ ಜನರಿಗೂ ಇದು ತುಂಬಾ ಪ್ರಿಯವಾದ ಆಹಾರವಾಗಿದೆ. ಪ್ರತಿ ವರ್ಷ ಮಾರ್ಚ್ 20 ರಂದು 'ಪಖಲಾ ದಿವಸ್' ಎಂಬ ದಿನವನ್ನು ಆಚರಿಸುತ್ತಾರೆ.
6/ 8
ಈ ಖಾದ್ಯವನ್ನು ಸುಮಾರು 10 ನೇ ಶತಮಾನದ ಪುರಿಯ ಜಗನ್ನಾಥ ದೇವಾಲಯದ ಪಾಕವಿಧಾನದಲ್ಲಿ ಸೇರಿಸಲಾಯಿತು. ಪಖಾಲವನ್ನು ಮೊದಲು ಒಡಿಶಾದಲ್ಲಿ ಪರಿಚಯಿಸಲಾಯಿತು ಎಂದು ಹೇಳಲಾಗುತ್ತದೆ. ಪಖಾಲಾ ಎಂಬುದು ಬೇಯಿಸಿದ ಅನ್ನಕ್ಕೆ ಒಡಿಯಾದ ಪದವಾಗಿದೆ.
7/ 8
ರಾತ್ರಿ ಎಲ್ಲಾ ಅಕ್ಕಿ ನೆನೆಸಿಟ್ಟು ಬೆಳಿಗ್ಗೆ ಅನ್ನ ಮಾಡಿ ಅದಕ್ಕೆ ಮೊಸರು ಸೇರಿಸಿ ಅಲ್ಲಿನ ಜನರು ತಿನ್ನುತ್ತಾರೆ. ಇದು ಅಲ್ಲಿನ ಜನರಿಗೆ ಹಾಗೂ ದೇವಾಲಯದಲ್ಲಿ ದೇವರಿಗೆ ನೀಡುವ ನೈವೇದ್ಯ ಕೂಡಾ ಆಗಿದೆ.
8/ 8
ಒಂದೆರಡಲ್ಲಾ ಹಲವಾರು ರೀತಿಯ ರುಚಿಕರವಾದ ಆಹಾರವನ್ನು ಅಲ್ಲಿ ತಯಾರಿಸಲಾಗುತ್ತದೆ. ಅಷ್ಟೇ ಅಲ್ಲ ಪ್ರತಿಯೊಬ್ಬರಿಗೂ ಹಿಡಿಸುವಂತ ಹೊಸ ರುಚಿಗಳು ನೀವು ಅಲ್ಲಿಗೆ ಹೋದರೆ ಲಭ್ಯವಾಗುತ್ತದೆ.