Heart Attack: ಹೃದಯಾಘಾತ ಹೆಚ್ಚಾಗಿ ಆಗಿರುವುದು ಈ ದಿನವೇ ಅಂತೆ: ಕಾರಣ ಇಲ್ಲಿದೆ..!
Heart Attack: ಇಡೀ ವಾರದಲ್ಲಿ ಸೋಮವಾರ ಮಾತ್ರವೇ ಹೆಚ್ಚಾಗಿ ಹೃದಯಾಘಾತ ಆಗಿದೆ ಎಂದು ಸಮೀಕ್ಷೆಯಿಂದ ಬಹಿರಂಗವಾಗಿದೆಯಂತೆ. ಸ್ವೀಡನ್ ತಜ್ಞರು ಒಂದು ಲಕ್ಷ 56 ಸಾವಿರ ಮಂದಿಯನ್ನು ಸಮೀಕ್ಷೆಗೆ ಒಳಪಡಿಸಿದ್ದು, ಸಂಶೋಧನೆ ಮಾಡಿದ್ದಾರಂತೆ. ಇದನ್ನು ಅಮೆರಿಕದ ಹಾರ್ಟ್ ಜರ್ನಲ್ನಲ್ಲಿ ಪ್ರಕಟಿಸಲಾಗಿದೆಯಂತೆ.
ಒಬ್ಬ ಮನುಷ್ಯನಿಗೆ ಹೃದಯಾಘಾತ ಯಾವಾಗ ಬರುತ್ತದೆ ಎಂದು ಯಾರೂ ಊಹಿಸಲಾರರು. ಹೃದಯಾಘಾತವಾದಾಗ ಸರಿಯಾದ ಸಮಯಕ್ಕೆ ಸರಿಯಾಗಿ ಚಿಕಿತ್ಸೆ ಸಿಗದೇ ಹೋದಲ್ಲಿ ಆ ವ್ಯಕ್ತಿ ಬದುಕುಳಿಯುವುದು ತುಂಬಾ ಕಷ್ಟ.
2/ 6
ಹೃದಯಾಘಾತ ಆಗುವ ಮುನ್ನ ಸಾಕಷ್ಟು ಲಕ್ಷಣಗಳು ಕಾಣಿಸಿಕೊಳ್ಳುತ್ತವೆ ಎಂದು ವೈದ್ಯರು ಹೇಳುತ್ತಲೇ ಇರುತ್ತಾರೆ. ಆದರೂ ಸಹ ತುಂಬಾ ಸಲ ಹೃದಯಾಘಾತ ಆಗಲಿದೆ ಎಂದೂ ಸಾಕಷ್ಟು ಮಂದಿಗೆ ಗೊತ್ತಾಗುವುದೇ ಇಲ್ಲ. ಈ ಕುರಿತಾಗಿ ಈಗ ತಜ್ಞರು ಒಂದು ವಿಷಯವನ್ನು ಕಂಡು ಹಿಡಿದಿದ್ದಾರೆ.
3/ 6
ವಾರದಲ್ಲಿ ಸೋಮವಾರವೇ ಹೆಚ್ಚಾಗಿ ಹೃದಯಾಘಾತವಾಗುತ್ತದೆ ಎಂದು ಸ್ವೀಡನ್ ವಿಜ್ಞಾನಿಗಳು ಹೇಳಿದ್ದಾರೆ. ಸ್ವೀಡನ್ ತಜ್ಞರು ಒಂದು ಲಕ್ಷ 56 ಸಾವಿರ ಮಂದಿಯನ್ನು ಸಮೀಕ್ಷೆಗೆ ಒಳಪಡಿಸಿದ್ದು, ಸಂಶೋಧನೆ ಮಾಡಿದ್ದಾರಂತೆ. ಇದನ್ನು ಅಮೆರಿಕದ ಹಾರ್ಟ್ ಜರ್ನಲ್ನಲ್ಲಿ ಪ್ರಕಟಿಸಲಾಗಿದೆಯಂತೆ.
4/ 6
ಅವರ ಈ ಸಂಶೋಧನೆಗೆ ಕಾರಣವನ್ನೂ ಕೊಟ್ಟಿದ್ದಾರೆ. ವಾರದ ಆರಂಭದಲ್ಲಿ ತುಂಬಾ ಒತ್ತಡ ಇರುತ್ತದೆಯಂತೆ. ಈ ಕಾರಣದಿಂದಲೇ ಆ ದಿನವೇ ತುಂಬಾ ಜನರಲ್ಲಿ ಇದು ಕಾಣಿಸಿಕೊಂಡಿದೆ ಅನ್ನೋದನ್ನು ಕಂಡು ಹಿಡಿದಿದ್ದಾರೆ.
5/ 6
ಸೋಮವಾರ ಹೃದಯಾಘಾತ ಆಗುವುದಕ್ಕೆ ಕಾರಣ ಒತ್ತಡ ಆಗಿದ್ದು, ರಜಾ ದಿನಗಳಲ್ಲಿ ಹೃದಯಾಘಾತ ಆಗುವ ಸಾಧ್ಯತೆ ತುಂಬಾ ಕಡಿಮೆ ಇದೆ ಎಂದೂ ಈ ಅಧ್ಯಯನದಿಂದ ತಿಳಿದು ಬಂದಿದೆಯಂತೆ.
6/ 6
ಒತ್ತಡದ ಜೊತೆಗೆ ಹೃದಯಾಘಾತಕ್ಕೆ ಮತ್ತಷ್ಟು ಕಾರಣಗಳು ಇವೆಯಂತೆ. ದೇಹದಲ್ಲಿ ಕೊಲೆಸ್ಟ್ರಾಲ್ ಹೆಚ್ಚಾಗಿ ಶೇಖರಣೆ ಆಗುವುದು, ರಕ್ತದ ಒತ್ತಡ ಹೆಚ್ಚಾಗುವುದು ಹಾಗೂ ಸಕ್ಕರೆ ಕಾಯಿಲೆ ಇರುವುದರಿಂದಲೂ ಹೃದಯಾಘಾತಕ್ಕೆ ಪ್ರಮುಖ ಕಾರಣವಾಗುತ್ತದೆ ಎಂದು ತಜ್ಞರು ತಿಳಿಸಿದ್ದಾರೆ.